ಕೂಡಿಗೆ, ನ. ೨೫: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿಯಲ್ಲಿ ರುವ ಶ್ರೀ ಹರಕೆ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಅಂಗವಾಗಿ ದೇವಾಲಯದ ಆವರಣದಲ್ಲಿ ದೀಪೋತ್ಸವ, ಹಾಗೂ ವಿಶೇಷ ಪೂಜ್ಯೋತ್ಸವ ಕಾರ್ಯಕ್ರಮವು ಶ್ರಧ್ಧಾಭಕ್ತಿ ಯಿಂದ ನೆರವೇರಿದವು.
ದೀಪೋತ್ಸವ ಅಂಗವಾಗಿ ದೇವಿಗೆ ವಿಶೇಷ ಪೂಜೆ, ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯ ಗಳನ್ನು ಅರ್ಚಕ ಚಂದ್ರಮುರುಳಿ ಆರಾಧ್ಯ ರವರು ನೆರವೇರಿಸಿದರು. ಕೂಡಿಗೆ, ಮದಲಾಪುರ, ಕೂಡುಮಂಗಳೂರು, ಸೀಗೆಹೊಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಆಗಮಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಸಿ. ರವಿ, ಕಾರ್ಯದರ್ಶಿ ಅರುಣ ಕುಮಾರ್, ಸಮಿತಿ ನಿರ್ದೇಶಕರಾದ ವಕೀಲ ಕೆ.ಸಿ. ಶಿವಕುಮಾರ್, ಪ್ರವೀಣ್, ಪ್ರಸನ್ನ, ರಘು ಮತ್ತಿತರರು ಹಾಜರಿದ್ದರು.