ವೀರಾಜಪೇಟೆ, ನ. ೨೫: ದಿವಂಗತ ಎ.ಕೆ. ಸುಬ್ಬಯ್ಯ ಅವರ ಸ್ಮರಣಾರ್ಥ, ಕಲ್ಲು ಬಾಯ್ಸ್, ಕಲ್ಲುಬಾಣೆ ಇವರು ಆಯೋಜಿಸಿರುವ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟವನ್ನು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ವೀಕ್ಷಿಸಿ ಪಂದ್ಯಾಟಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಡಿಸಿಸಿ ಸದಸ್ಯ ಅಬ್ದುಲ್ ರೆಹಮಾನ್, ವೀರಾಜಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಬೀರ್, ಪಕ್ಷದ ಪ್ರಮುಖರಾದ ಚೆಕು, ಕುಂಡಚ್ಚಿರ ಮಂಜು ದೇವಯ್ಯ, ಸಂತೋಷ್, ಅಯೂಬ್, ಹರೀಶ್, ಕಾರ್ಯಕ್ರಮ ಆಯೋಜಕರು ಉಪಸ್ಥಿತರಿದ್ದರು.