ವೀರಾಜಪೇಟೆ, ನ. ೨೫ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ತಾಲೂಕಿನ ಮೂರ್ನಾಡು ವಲಯದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ೭೮ನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಕೋಡಂಬೂರು ಭದ್ರಕಾಳಿ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಹಾಗೂ ಅಲಂಕಾರ ಪೂಜೆ ನಡೆಸಲಾಯಿತು.
ಬಳಿಕ ಪಾಲೆಮಾಡು ಗ್ರಾಮದ ೫ ವೃದ್ಧರಿಗೆ ಒಂದು ತಿಂಗಳಿಗೆ ಆಗುವ ದಿನ ಉಪಯೋಗಿ ವಸ್ತುಗಳನ್ನು ವಿತರಿಸಲಾಯಿತು. ನಂತರ ಬಲಮುರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.
ಈ ಸಂದರ್ಭ ಜನಜಾಗೃತಿ ವೇದಿಕೆ ಸದಸ್ಯ ಹಾಗೂ ನಿವೃತ್ತ ಸೈನಿಕ ವಿ.ಎಂ. ಸುಬ್ರಮಣಿ, ವಲಯ ಮೇಲ್ವಿಚಾರಕ ಪ್ರತಾಪ್ ದೇವಾಡಿಗ, ಸಮಾಜ ಸೇವಕಿ ಸರೋಜಾ, ಶಾಲೆ ಶಿಕ್ಷಕರಾದ ದಮಯಂತಿ, ಸುನೀತಾ, ಮಮತಾ, ವಲಯದ ಸೇವಾ ಪ್ರತಿನಿಧಿಗಳು ಮತ್ತು ಒಕ್ಕೂಟದ ಸದಸ್ಯರು ಹಾಜರಿದ್ದರು.ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬದ ಪ್ರಯುಕ್ತ ವೀರಾಜಪೇಟೆಯ ಬೇಟೋಳಿ ಗ್ರಾಮದಲ್ಲಿರುವ ಶ್ರೀ ಶಕ್ತಿ ವೃದ್ಧಾಶ್ರಮದ ವೃದ್ಧರಿಗೆ ಬೆಳಗ್ಗಿನ ಉಪಾಹಾರ, ಟವಲ್ ಮತ್ತು ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಅವಶ್ಯಕತೆ ಇರುವವರಿಗೆ ಔಷಧಗಳನ್ನು ನೀಡಲಾಯಿತು. ಬಳಿಕ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಹರೀಶ್ ಪಿ., ಸಾಹಿತಿಗಳಾದ ವಿ.ಎನ್. ರಜಿತ, ವಲಯ ಮೇಲ್ವಿಚಾರಕರಾದ ದನೇಶ್ ಶಿವಕುಮಾರ್, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಉಷಾರಾಣಿ ಹಾಗೂ ಸೇವಾ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.