ಕೂಡಿಗೆ, ನ. ೨೫: ಜಲ ಸಂಪನ್ಮೂಲ ಇಲಾಖೆ, ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಧಾರವಾಡ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕಾವೇರಿ ಜಲಾನಯನ ಯೋಜನೆ, ಹಾರಂಗಿ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಸಹಕಾರ ಮಹಾಮಂಡಳ ಕುಶಾಲನಗರ ಹಾಗೂ ತೊರೆನೂರು ನೀರು ಬಳಕೆದಾರರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಹಾಲು ಉತ್ಪಾದಕರ ಸಹಕಾರ ಸಂಘ,ಇವರ ಸಂಯುಕ್ತ ಆಶ್ರಯದಲ್ಲಿ ತೊರೆನೂರು ನೀರು ಬಳಕೆದಾರರ ಸಹಕಾರ ಸಂಘದ ಆವರಣದಲ್ಲಿ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹವು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ನೆರವೇರಿಸಿ ಮಾತನಾಡಿ, ಸಹಕಾರ ಸಂಘಗಳು ಸಂಕಷ್ಟ ಸವಾಲುಗಳ ಮಧ್ಯೆ ಜನರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಾ ಬಂದಿರುವ ಸಹಕಾರಿ ಸಂಘಗಳ ಕಾರ್ಯವೈಖರಿ ಶ್ಲಾಘನೀಯ. ಸಹಕಾರಿ ಸಂಘಗಳು ಜನರಿಗೆ ಕಷ್ಟ ಕಾಲದಲ್ಲಿ ಉತ್ತಮವಾದ ಸೇವೆಯನ್ನು ನೀಡುವುದರ ಮೂಲಕ ಆರ್ಥಿಕ ಸ್ವಾವಲಂಬನೆಯ ಬದುಕು ನಡೆಸಲು ಸಾಧ್ಯವಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮ ರೈತರಿಗೆ ಬಹಳ ಉಪಯುಕ್ತವಾಗುವುದು, ಅಲ್ಲದೆ ರೈತರು ನೀರಿನ ಸಮರ್ಪಕ ನಿರ್ವಹಣೆಯಿಂದ ಉತ್ತಮ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ನದಿ. ಹುಟ್ಟಿದಾಗಿನಿಂದ ನಾಗರಿಕತೆ ಬೆಳೆದಂತೆ ಕೃಷಿ ಚಟುವಟಿಕೆಗಳು ಆರಂಭಗೊAಡವು. ರೈತರು ನೀರನ್ನು ಪೋಲು ಮಾಡದೇ ಹಿನಿ ಹನಿ ನೀರನ್ನು ಮುಂದಿನ ಭವಿಷ್ಯದ ದೃಷ್ಟಿಯಿಂದ ನೀರನ್ನು ಉಳಿಸಬೇಕಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಹಾರಂಗಿ ಮಹಾಮಂಡಲ ಅಧ್ಯಕ್ಷ ಎಸ್. ಸಿ. ಚೌಡೇಗೌಡ ಮಾತನಾಡಿ, ನೀರು ಬಳಕೆದಾರರ ಸಹಕಾರ ಸಂಘಗಳ ಅಭಿವೃದ್ಧಿ ರೈತರ ಸಹಕಾರ ಬಹು ಮುಖ್ಯ, ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲಾ ರೈತರ ಜಮೀನಿಗೆ ಸಮರ್ಪಕವಾಗಿ ನೀರನ್ನು ಒದಗಿಸುವ ಮೂಲಕ ಉತ್ತಮ ಬೇಸಾಯ ಮಾಡಲು ಎಲ್ಲಾ ರೀತಿಯ ಸಹಕಾರ ಮಹಾಮಂಡಲದ ಮುಖೇನ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಅಧಿಕಾರಿ ಪ್ರತೀಪ್ ದೇವಮೂನಿ ವಹಿಸಿದರು. ದಿವ್ಯ ಸಾನಿಧ್ಯವನ್ನು ತೊರೆನೂರು ವಿರಕ್ತಮಠದ ಮಲ್ಲೇಶಸ್ವಾಮಿ ವಹಿಸಿದರು.

ಮುಖ್ಯ ಅತಿಥಿಗಳಾಗಿ ಹಾರಂಗಿ ಮಹಾಮಂಡಲದ ಅಧ್ಯಕ್ಷ ಎಸ್. ಪಿ ಚೌಡೇಗೌಡ, ನೀರು ಬಳಕೆದಾರರ ಸಂಘದ ಅಧ್ಯಕ್ಷ, ಸಲಹಾ ಸಮಿತಿ ಸದಸ್ಯ ಟಿ.ಕೆ. ಪಾಂಡುರAಗ, ಕುಶಾಲನಗರ ಎ.ಪಿ.ಸಿ.ಎಂ.ಎಸ್. ನ ನಿರ್ದೇಶಕ ಹೆಚ್. ಬಿ. ಚಂದ್ರಪ್ಪ, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಟಿ.ಬಿ. ಜಗದೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭ ಪ್ರಕಾಶ್, ಸಹಕಾರ ಸಂಘದ ನಿರ್ದೇಶಕ ಕೆ.ಎಸ್. ಕೃಷ್ಣೆಗೌಡ, ಹಾರಂಗಿ ನೀರಾವರಿ ಸಲಹಾ ಸಮಿತಿ ಸದಸ್ಯರಾದ ಉಮಾ ಪ್ರಭಾಕರ್, ಎ.ಪಿ. ಸುಬ್ಬಯ್ಯ, ನೀರಾವರಿ ಇಲಾಖೆಯ ಇಂಜಿನಿಯರ್ ಸೌಮ್ಯ ,ನೀರು ಬಳಕೆದಾರರ ಸಂಘದ ಉಪಾಧ್ಯಕ್ಷ ಟಿ.ಎ. ರವಿಚಂದ್ರ, ಮಹಾಮಂಡಲದ ನಿರ್ದೇಶಕರಾದ ಹರೀಶ್, ಮಹದೇವ, ಕೇಶವೇಗೌಡ ಸೇರಿದಂತೆ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಪ್ತಾಹದಲ್ಲಿ ಜಲ ಮತ್ತು ನೆಲ ಸಂರಕ್ಷಣೆ, ನಿರ್ವಹಣೆ, ಹಾಗೂ ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ ಕುರಿತು ಧಾರವಾಡದ ವಾಲ್ಮಿ ಸಂಸ್ಥೆಯ ಸಹ ಪ್ರಾಧ್ಯಾಪಕ ಕೆ.ಎಸ್. ಸುಧೀಂದ್ರ, ಸಮಾಲೋಚಕರಾದ ಸುರೇಶ್ ಕುಲಕರ್ಣಿ, ಉಪನ್ಯಾಸ ನೀಡಿದರು.

ಟಿ.ಕೆ.ಪಾಂಡುರAಗ ಸ್ವಾಗತಿಸಿ, ಕೆ.ಎಸ್. ಕೃಷ್ಣೇಗೌಡ ಕಾರ್ಯಕ್ರಮ ನಿರೂಪಿಸಿ, ಸಂಘದ ಕಾರ್ಯದರ್ಶಿ ಟಿ.ಜಿ. ಲೋಕೇಶ್ ವಂದಿಸಿದರು.