ಮಡಿಕೇರಿ, ನ. ೨೫: ಪತ್ರಕರ್ತರು ಸಮಾಜಕ್ಕೆ ಹೊರೆಯಾಗಬಾರದು ದೊರೆಯಾಗಬೇಕು ಎಂದು ಕರ್ನಾ ಟಕ ರಾಜ್ಯ ಕಾರ್ಯನಿರತ ಪತ್ರಕ ರ್ತರ ಸಂಘದ ಉಪಾಧ್ಯಕ್ಷ ಹೆಚ್.ಬಿ. ಮದನ್ ಗೌಡ ಕರೆ ನೀಡಿದರು.
ನಗರದ ಕೊಡವ ಸಮಾಜ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೫-೨೮ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಮಾಣ ವಚನ ಬೋಧಿಸಿ ಅವರು ಮಾತ ನಾಡಿದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶತಮಾನೋತ್ಸವ ಹೊಸ್ತಿಲಿನಲ್ಲಿದೆ. ೯೪ ವರ್ಷದ ಸುದೀರ್ಘ ಇತಿಹಾಸವಿರುವ, ಡಿ.ವಿ. ಗುಂಡಪ್ಪ ಅವರು ಸ್ಥಾಪಿಸಿದ ಸಂಘದ ಬೆಳವಣಿಗೆಯಲ್ಲಿ ಮಹನೀಯರ ಶ್ರಮ ಅಪಾರವಾಗಿದೆ. ರಾಜ್ಯದ ೩೧ ಜಿಲ್ಲೆ, ಎಲ್ಲಾ ತಾಲೂಕು, ಹೋಬಳಿ ಮಟ್ಟದಲ್ಲೂ ಪತ್ರಕರ್ತರನ್ನು ಒಳಗೊಂಡ ಬಲಿಷ್ಠ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಇದರೊಂದಿಗೆ ಕರುನಾಡಿನ ಪತ್ರಕರ್ತರ ಸಮಸ್ಯೆ ಗಳಿಗೆ ಮಿಡಿಯುವ ಕೆಲಸವನ್ನೂ ಸಂಘ ಮಾಡುತ್ತಿದೆ. ಸ್ವಾತಂತ್ರö್ಯ ಪೂರ್ವದಲ್ಲಿ ಸಂಘ ಸ್ಥಾಪನೆಯಾಗಿದ್ದು, ಇಂದಿರಾ ಗಾಂಧಿ ಅವರು ಕೇಂದ್ರ ಕಚೇರಿಗೆ ಬಂದಿದ್ದರು ಎಂದು ಸ್ಮರಿಸಿದರು.
ಧಾವಂತ ಪತ್ರಿಕೋದ್ಯಮ, ಸೋಶಿಯಲ್ ಮೀಡಿಯಾದ ಭರಾಟೆಯಿಂದ ಸತ್ಯಾಸತ್ಯತೆಯ ಅನುಮಾನ ಜನರನ್ನು ಕಾಡುತ್ತಿದೆ. ಸಾಂಪ್ರದಾಯಿಕ ಮಾಧ್ಯಮಗಳು ಜವಾಬ್ದಾರಿ ಯುತವಾಗಿ ಕಾರ್ಯನಿರ್ವಹಿಸಿ ಬದ್ಧತೆ ಉಳಿಸಬೇಕು. ವೃತ್ತಿಯ ಘನತೆ, ಗೌರವ ಎತ್ತಿ ಹಿಡಿಯುವ ಕೆಲಸ ಪತ್ರಕರ್ತರಿಂದಾಗಬೇಕು ಎಂದು ಒತ್ತಿ ಹೇಳಿದರು. ಆರೋಗ್ಯ ವಿಮೆ ಎಲ್ಲಾ ಪತ್ರಕರ್ತರಿಗೆ ದೊರೆಯಬೇಕು ಎಂಬ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವ ಪ್ರಯತ್ನ ಸಂಘದಿAದ ನಡೆಯುತ್ತಿದೆ. ಮುಂದಿನ ಬಜೆಟ್ ನಲ್ಲಿ ಈ ಯೋಜನೆ ಘೋಷಣೆಯಾಗುವ ವಿಶ್ವಾಸವಿದೆ. ಪತ್ರಕರ್ತರಿಗಿದ್ದ ೩ ಸಾವಿರ ಮಾಸಾಶನ, ಇದೀಗ ೧೫ ಸಾವಿರಕ್ಕೆ ತಲುಪಲು ಸಂಘ ಕಾರಣ ಎಂದರು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ, ಯುವ ಸಮೂಹ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಯಾಗಿದೆ. ಸರಿ-ತಪ್ಪುಗಳನ್ನು ವಿಶ್ಲೇಷಿಸುವ ಸೂಕ್ಷö್ಮ ಸಂವೇದನಾಶೀಲತೆ ಪತ್ರಕರ್ತರಿಗೆ ಇರಬೇಕು. ಪತ್ರಕರ್ತರು ನಿಂತ ನೀರಲ್ಲ. ಹರಿಯುವ ನದಿಯಾಗಿರುತ್ತಾರೆ. ಕ್ಷಣಕ್ಷಣಕ್ಕೆ ನಡೆಯುತ್ತಿರುವ ವಿದ್ಯಮಾನಗಳ ನಡುವೆ ಪತ್ರಕರ್ತರು ಸವಾಲಿನೊಂದಿಗೆ ಬದ್ಧತೆಯನ್ನು ರೂಢಿಸಿಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಜಿಲ್ಲೆಯ ವಿಚಾರದಲ್ಲಿ ರಾಜಕೀಯ ರಹಿತರಾಗಿ ಒಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ವ್ಯವಸ್ಥೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಜನತೆಯನ್ನು ಬಡಿದೆಚ್ಚರಿಸುವುದು. ಸಾಮಾಜಿಕ ಹಿತಾಸಕ್ತಿ ವರದಿಗಳ ಮೂಲಕ ಆಡಳಿತದ ಗಮನ ಸೆಳೆಯುವ ಕರ್ತವ್ಯ ಪತ್ರಕರ್ತನದ್ದಾಗಿರುತ್ತದೆ. ಸವಾಲಿನ ನಡುವೆ ಗ್ರಾಮೀಣ ೪ಆರನೇ ಪುಟಕ್ಕೆ (ಮೊದಲ ಪುಟದಿಂದ)
ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಹಾಗೂ ಸರಕಾರದ ನಡುವೆ ಸಂಪರ್ಕ ಸೇತುವೆಯಾಗಿ ಪತ್ರಕರ್ತರು ಕೆಲಸ ಮಾಡಬೇಕು. ಸಂಘಟನೆಯಿAದ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ಕಾಣಬಹುದಾಗಿದೆ. ಮನೋಲ್ಲಾಸಕ್ಕೂ ಸಂಘ ವ್ಯವಸ್ಥೆ ಪೂರಕವಾಗಿದೆ. ಅಭಿಪ್ರಾಯಗಳ ವಿನಿಮಯ ಮೂಲಕ ಆತ್ಮಾವಲೋಕನದ ಅಗತ್ಯತೆಯೂ ಇದೆ. ಒತ್ತಡದಲ್ಲಿರುವ ಪತ್ರಕರ್ತರು ಧ್ಯಾನ, ಯೋಗದ ಮೂಲಕ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಯುವ ಪತ್ರಕರ್ತರ ತಂಡ ಸಂಘದ ಚುಕ್ಕಾಣಿ ಹಿಡಿದಿರುವುದು ಶ್ಲಾಘನೀಯ. ಸಂಘದ ಪದಾಧಿಕಾರಿಗಳು ಹುದ್ದೆಗೆ ನ್ಯಾಯ ಕೊಡುವಂತೆ ಕೆಲಸ ಮಾಡಬೇಕು. ವ್ಯಕ್ತಿ ಆಧಾರಿತವಾಗಿರದೆ ವಿಷಯ ಆಧಾರಿತವಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕೊಡಗಿನ ಪತ್ರಕರ್ತರು ಶಿಸ್ತು, ಬದ್ಧತೆ ಮೈಗೂಡಿಸಿಕೊಂಡಿದ್ದಾರೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಸರಿದಾರಿಯಲ್ಲಿ ಸಾಗಬೇಕಾದರೆ ಪತ್ರಿಕಾ ರಂಗದ ಜವಾಬ್ದಾರಿ ದೊಡ್ಡ ಮಟ್ಟದಲ್ಲಿದೆ.
ಸುದ್ದಿ ಮಾಧ್ಯಮ ನಡೆಸುವುದು ಸುಲಭದ ಮಾತಲ್ಲ. ಪತ್ರಕರ್ತರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಪತ್ರಕರ್ತರು ದೊಡ್ಡಮಟ್ಟದ ಸಹಾಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷೆ, ರಾಜ್ಯ ಸಮಿತಿ ಸದಸ್ಯೆ ಸವಿತಾ ರೈ ಮಾತನಾಡಿ, ಹೊಸ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ. ೨೦೧೮ರ ಪ್ರಾಕೃತಿಕ ವಿಕೋಪ ಸಂದರ್ಭ ರಾಜ್ಯ ಸಂಘದ ಮೂಲಕ ಸಂಕಷ್ಟಕ್ಕೀಡಾದ ಜಿಲ್ಲೆಯ ಪತ್ರಕರ್ತರಿಗೆ ಒಟ್ಟು ರೂ. ೫ ಲಕ್ಷ ನೆರವನ್ನು ನೀಡಲಾಗಿದೆ. ಸಂಘ ಹೆಮ್ಮರವಾಗಿ ಬೆಳೆದಿದೆ. ಅದನ್ನು ಮುಂದುವರೆಸಿಕೊAಡು ಹೋಗಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ವತಿಯಿಂದ ಪ್ರತಿ ತಿಂಗಳು ಒಂದು ಕಾರ್ಯಕ್ರಮ ಮಾಡುವ ಚಿಂತನೆ ಇದೆ. ಎಲ್ಲಾ ಸದಸ್ಯರಿಗಾಗಿ ಆರೋಗ್ಯ ವಿಮೆ ಮಾಡಿಸುವ ಆಲೋಚನೆ ಇದೆ ಎಂದರು.
ಇದೇ ವೇಳೆ ನೂತನ ಆಡಳಿತ ಮಂಡಳಿಯ ನಾಮಫಲಕ ಹಾಗೂ ಪತ್ರಕರ್ತರ ಸಾಂಸ್ಕೃತಿಕ ವೇದಿಕೆಯ ಲೋಗೋವನ್ನು ಗಣ್ಯರು ಅನಾವರಣ ಮಾಡಿ ಕಾರ್ಯಚಟುವಟಿಕೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರುಗಳಾದ ಎಂ.ಎನ್. ಚಂದ್ರಮೋಹನ್, ರೆಜಿತ್ ಕುಮಾರ್ ಗುಹ್ಯ, ಸಣ್ಣುವಂಡ ಕಿಶೋರ್ ನಾಚಪ್ಪ, ವಿಶ್ವ ಕುಂಬೂರು, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹಾಜರಿದ್ದರು.
ಸಂಘದ ಸದಸ್ಯ ಚನ್ನನಾಯಕ ಪ್ರಾರ್ಥಿಸಿ, ಕಾರ್ಯದರ್ಶಿ ಮಲ್ಲಿಕಾರ್ಜುನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ನಿರೂಪಿಸಿ, ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್ ವಂದಿಸಿದರು.