ಕಣಿವೆ, ನ. ೨೫: ಮಹಿಳೆಯರು ಆರ್ಥಿಕವಾಗಿ ಸದೃಢರಾಗುವ ಮೂಲಕ ಸ್ವಾವಲಂಬಿಗಳಾಗಲು ಮಹಿಳೆಯರೇ ತಯಾರಿಸುವ ಹಾಗೂ ಸಿದ್ದಪಡಿಸುವ ಉತ್ಪನ್ನಗಳ ಮಾರಾಟ ಸಂತೆ ಮೇಳ ಸಹಕಾರಿ ಎಂದು ಕುಶಾಲನಗರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ವರ ಕುಮಾರ್ ಹೇಳಿದರು.

ಗುಡ್ಡೆಹೊಸೂರಿನಲ್ಲಿ ಮಂಗಳವಾರ ಗ್ರಾಮೀಣ ಜೀವನೋಪಾಯ ಸಂವಹನ ಸಂಸ್ಥೆ, ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಗುಡ್ಡೆಹೊಸೂರು ಗ್ರಾ.ಪಂ. ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಸಂತೆ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗೃಹ ಕೈಗಾರಿಕೆ, ಗುಡಿ ಕೈಗಾರಿಕೆಗಳ ಮೂಲಕ ಮಹಿಳೆಯರು ತಿನಿಸುಗಳು, ಸೊಪ್ಪು, ತರಕಾರಿ ಕಾಯಿ ಪಲ್ಯೆಗಳು ಸೇರಿದಂತೆ ಇನ್ನಿತರ ಬಗೆ ಬಗೆಯ ಪರಿಕರಗಳನ್ನು ಸ್ವತಃ ತಾವೇ ಉತ್ಪಾದಿಸುವ ಮೂಲಕ ಸ್ವಯಂ ಉದ್ಯೋಗಿಗಳಾಗಬೇಕು ಎಂದು ಕರೆ ನೀಡಿದರು.

ಗುಡ್ಡೆಹೊಸೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಮೇಶ್ ಮಾತನಾಡಿ, ಗ್ರಾ.ಪಂ. ಮಟ್ಟದಲ್ಲಿ ಮಹಿಳೆಯರ ಉದ್ಯಮಗಳನ್ನು ಬೆಂಬಲಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂತೆ ಮೇಳವನ್ನು ಆಗಿಂದಾಗ್ಗೆ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಪAಚಾಯಿತಿ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಪ್ರವೀಣ್, ಸೋಮವಾರಪೇಟೆ ತಾಲೂಕು ಸಂಜೀವಿನಿ ಒಕ್ಕೂಟಗಳ ವ್ಯವಸ್ಥಾಪಕ ಜಯಚಂದ್ರ, ರವಿ, ಪದ್ಮಶ್ರೀ, ಭವ್ಯರೈ, ಗುಡ್ಡೆಹೊಸೂರು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ತಾರಾಕುಮಾರಿ, ಉಪಾಧ್ಯಕ್ಷೆ ಲೀಲಾ ರಮೇಶ್, ಲಿಜಿ, ಅಶ್ವಿನಿ, ಸುಲೋಚನಾ, ಸುಜಾತ, ಗುಡ್ಡೆಹೊಸೂರು ಗ್ರಾಮೀಣ ಬ್ಯಾಂಕ್ ಮೇನೇಜರ್ ರಾಕೇಶ್ ಹಾಜರಿದ್ದರು.

ಸಂತೆ ಮೇಳದಲ್ಲಿ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆಗಳ ದೇವಿ, ಪೃಥ್ವಿ, ಅಕ್ಷಯ, ಶರಾವತಿ, ದೀಕ್ಷಾ, ಅಲ್ ಅಮೀನ್ ಮೊದಲಾದ ಸ್ತಿçà ಶಕ್ತಿ ಗುಂಪುಗಳ ಮಹಿಳೆಯರು ಪಾಲ್ಗೊಂಡಿದ್ದರು.