ಸೋಮವಾರಪೇಟೆ, ನ. ೨೬: ನೆರೆಯ ಹಾಸನ ಜಿಲ್ಲೆಗೆ ಒಳಪಡುವ ಕೊಡಗು ಗಡಿ ಭಾಗದ ಗ್ರಾಮವಾದ ಕಲ್ಲಳ್ಳಿಯಲ್ಲಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ ದೊಡ್ಡ ತೋಳೂರು ಗ್ರಾಮದ ಆರೋಪಿಯನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ನಡೆದಿದೆ.

ಕಳೆದ ತಾ.೨೩ರಂದು ಸಕಲೇಶಪುರ ತಾಲೂಕು ಯಸಳೂರು ಹೋಬಳಿಯ ಕಲ್ಲಹಳ್ಳಿ ಗ್ರಾಮದಲ್ಲಿ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕಿನಲ್ಲಿ ಪರಾರಿಯಾಗಿದ್ದ ಸೋಮವಾರಪೇಟೆ ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ದೊಡ್ಡತೋಳೂರು ಗ್ರಾಮದ ಆದರ್ಶ್ ಎಂಬಾತನನ್ನು ಯಸಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ೪ಏಳನೇ ಪುಟಕ್ಕೆ (ಮೊದಲ ಪುಟದಿಂದ)

ಕಳೆದ ತಾ.೨೩ ರ ಮಧ್ಯಾಹ್ನ ಕಲ್ಲಳ್ಳಿ ಗ್ರಾಮದ ನಂದೀಶ್ ಎಂಬವರ ತಾಯಿ ಪಾರ್ವತಮ್ಮ ಅವರು ಮನೆಯ ಹತ್ತಿರ ಇರುವ ರಸ್ತೆಯಲ್ಲಿ ಹೋಗುವಾಗ ಬೈಕಿನಲ್ಲಿ ಬಂದ ಆದರ್ಶ್, ಮಲ್ಲಳ್ಳಿ ಜಲಪಾತಕ್ಕೆ ಇಲ್ಲಿಂದ ಎಷ್ಟು ಕಿಲೋಮೀಟರ್ ಆಗುತ್ತದೆ ಎಂದು ಕೇಳಿದ್ದಾನೆ. ಈ ಸಂದರ್ಭ ಪಾರ್ವತಮ್ಮ ಅವರು ಸ್ವಲ್ಪ ಯೋಚಿಸಲು ಮುಂದಾಗುತ್ತಿದ್ದAತೆ ಕುತ್ತಿಗೆಗೆ ಕೈ ಹಾಕಿ ೨೫ ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತು ಕೊಂಡು ತಂಬಲಗೇರಿ ಮಾರ್ಗದಲ್ಲಿ ಪರಾರಿಯಾಗಿದ್ದ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಬಿಸಿಲೆ, ಚಂಗಡಹಳ್ಳಿ ಸುತ್ತಮುತ್ತ ಇರುವ ಸಿಸಿಟಿವಿಯನ್ನು ಪರಿಶೀಲಿಸಿದ್ದರು.

ಈ ಸಂದರ್ಭ ಚಂಗಡಹಳ್ಳಿ ಗ್ರಾಮದ ಸಿಸಿಟಿವಿಯಲ್ಲಿ ಆರೋಪಿ ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ನಡೆಸಿ ದೊಡ್ಡತೋಳೂರಿನ ಎಚ್.ಡಿ. ಆದರ್ಶ್ನನ್ನು ಬಂಧಿಸಿ, ಇಂದು ಸ್ಥಳ ಮಹಜರು ನಡೆಸಿದರು.

ಮಂಗಳೂರಿನಲ್ಲಿ ಫುಡ್ ಸಪ್ಲೈಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಆರೋಪಿ, ಮಂಗಳೂರಿನಿAದ ಊರಿಗೆ ಬರುವಾಗ ದಾರಿ ಮಧ್ಯೆ ಈ ಕೃತ್ಯ ಎಸಗಿದ್ದಾನೆ. ಕದ್ದ ಚಿನ್ನವನ್ನು ಹಾಸನದ ಚಿನ್ನದ ಅಂಗಡಿಯಲ್ಲಿ ಅಡವು ಇಟ್ಟಿರುವುದು, ತನಿಖೆಯಿಂದ ತಿಳಿದು ಬಂದಿದೆ.