ಮಡಿಕೇರಿ, ನ. ೨೬: ಕೊಡವ ಜನಾಂಗದ ಬೇಕು-ಬೇಡಿಕೆಗಳ ಬಗ್ಗೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ) ಸಂಘಟನೆ ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಹೋರಾಟವನ್ನು ದಿಟ್ಟ ನಿಲುವು ಹಾಗೂ ಶಾಂತಿಯುತ ಪ್ರಯತ್ನದೊಂದಿಗೆ ಮುಂದುವರಿಸುವ ನಿರ್ಣಯವನ್ನು ಸಂಘಟನೆಯ ಮೂಲಕ ಹಮ್ಮಿಕೊಳ್ಳಲಾಗಿದ್ದ ೩೫ನೇ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನದ ಸಮಾವೇಶದಂದು ಕೈಗೊಳ್ಳಲಾಯಿತು,
ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ಸಿ.ಎನ್.ಸಿ ವತಿಯಿಂದ ಅಧ್ಯಕ್ಷ ಎನ್.ಯು ನಾಚಪ್ಪ ಮುಂದಾಳತ್ವದಲ್ಲಿ ೩೫ನೇ ವರ್ಷದ ಕೊಡವ ನ್ಯಾಷನಲ್ ಡೇ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಹತ್ತು ಪ್ರಮುಖ ಬೇಡಿಕೆಗಳ ನಿರ್ಣಯವನ್ನು ಪುನರುಚ್ಚರಿಸಲಾಯಿತಲ್ಲದೆ ಹೋರಾಟ ಮುಂದುವರಿಸುವ ನಿರ್ಧಾರಕ್ಕೆ ಜನಸ್ತೋಮದ ಒಪ್ಪಿಗೆಯನ್ನು ಪಡೆದುಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಾರ್ವರ್ಡ್ ವಿಶ್ವ ವಿದ್ಯಾನಿಲಯದ ವಿದ್ವಾಂಸ ಹಾಗೂ ಹೆಸರಾಂತ ರಾಜಕೀಯ ತಜ್ಞ ಡಾ.ಸಂಜೀವ್ ಚೋಪ್ರಾ ಸೇರಿದಂತೆ ಇನ್ನಿತರ ಪ್ರಮುಖರು ಸಿಎನ್‌ಸಿಯ ಬೇಡಿಕೆಗಳು ನ್ಯಾಯೋಚಿತವಾಗಿರುವ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿದರು.
ಡಾ.ಸಂಜೀವ್ ಚೋಪ್ರಾ ಅವರು, ಸಿ.ಎನ್.ಸಿ ಮಂಡಿಸಿದ ಹಕ್ಕೊತ್ತಾಯಗಳನ್ನು ಸಮರ್ಥಿಸಿ ಮಾತನಾಡಿದರು. ಎನ್.ಯು.ನಾಚಪ್ಪ ಅವರ ನೇತೃತ್ವದ ಸಿ.ಎನ್.ಸಿ ಸಂಘಟನೆ ಕೇಳುತ್ತಿರುವ ಕೊಡವಲ್ಯಾಂಡ್ ಬೇಡಿಕೆ ನ್ಯಾಯೋಚಿತವಾಗಿದೆ. ಸಿ.ಎನ್.ಸಿ ಸಂಘಟನೆಯು ಪ್ರತ್ಯೇಕ ರಾಷ್ಟçವನ್ನು ಅಥವಾ ರಾಜ್ಯವನ್ನು ಕೇಳುತ್ತಿಲ್ಲ. ತಮ್ಮ ತಾಯಿನೆಲವನ್ನು ಸಂವಿಧಾನದ ೫ ಮತ್ತು ೬ನೇ ಶೆಡ್ಯೂಲ್‌ನಡಿ ಕೇಳುತ್ತಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರತ್ಯೇಕ ಭಾಷೆ, ಪ್ರತ್ಯೇಕ ಭೂ ಪ್ರದೇಶ, ಯೋಧ ಪರಂಪರೆ, ಪಾರಂ ಪರಿಕ ಭೂಮಿ, ಉನ್ನತ ಮಾನವ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಲ ಹೊಂದಿರುವ ಕೊಡವರು ಕೊಡವಲ್ಯಾಂಡ್ ಮೂಲಕ ಸಂವಿಧಾನಾತ್ಮಕ ಬದ್ಧತೆಗಾಗಿ ಸಿಎನ್‌ಸಿಯೊಂದಿಗೆ ಗುರುತಿಸಿಕೊಳ್ಳುವುದು ಅತ್ಯಂತ ಸಮರ್ಥನೀಯ. ಸಿಎನ್‌ಸಿ ಮಂಡಿಸಿರುವ ಎಸ್‌ಟಿ ವರ್ಗೀಕರಣ, ವಿಶ್ವ ರಾಷ್ಟç ಸಂಸ್ಥೆಯ ಮಾನ್ಯತೆ, ಯುನೆಸ್ಕೋ ಮಾನ್ಯತೆ, ೪ಏಳನೇ ಪುಟಕ್ಕೆ (ಮೊದಲ ಪುಟದಿಂದ)
ಕೊಡವ ಧಾರ್ಮಿಕ ಸಂಸ್ಕಾರವಾಗಿರುವ ಬಂದೂಕಿಗೆ ಧಾರ್ಮಿಕ ಸ್ವಾತಂತ್ರö್ಯದ ಹಕ್ಕು ಮಾನ್ಯತೆ, ಕೊಡವ ಭಾಷೆಯನ್ನು ಪರಿಗಣಿಸಿ ೮ನೇ ಶೆಡ್ಯೂಲ್‌ಗೆ ಸೇರಿಸುವುದು, ಕಾವೇರಿ ನೀರಿನ ಮೇಲಿನ ಹಕ್ಕು, ಕೊಡಗಿನೊಳಗೆ ಅನ್ಯ ಪ್ರದೇಶದವರು ನುಸಳದಂತೆ ತಡೆಯಲು ಇನ್ನರ್‌ಲೈನ್ ಪರ್ಮಿಟ್, ದೇವಟ್ ಪರಂಬ್ ಸ್ಮಾರಕ ಸೇರಿದಂತೆ, ನಾಲ್ನಾಡ್ ಅರಮನೆ, ಮಡಿಕೇರಿ ಕೋಟೆ ಇತ್ಯಾದಿ ಕಡೆಗಳಲ್ಲಿ ಹಾಗೂ ಎಲ್ಲೆಲ್ಲಿ ಕೊಡವರ ಹೆಗ್ಗುರುತಿನ ಹೆಜ್ಜೆಗಳಿವೆಯೋ ಅಲ್ಲೆಲ್ಲ ಕೊಡವ ಸ್ಮಾರಕಗಳನ್ನು ಸ್ಥಾಪಿಸುವುದು, ಕೊಡವರಿಗೆ ಪ್ರತ್ಯೇಕ ಮತ ಕ್ಷೇತ್ರ ನಿರ್ಮಿಸುವುದು, ೨೦೨೬ರ ಭಾರತೀಯ ಜನಗಣತಿಯಲ್ಲಿ ‘ಕೊಡವ’ ಎಂದು ದಾಖಲಿಸುವುದು ಸೇರಿದಂತೆ ಇತರ ಎಲ್ಲಾ ಹಕ್ಕುಗಳನ್ನು ಸಂವಿಧಾನದ ೨೨೪, ೩೭೧ ಮತ್ತು ೫, ೬ನೇ ಶೆಡ್ಯೂಲ್‌ಗಳಲ್ಲಿ ಪಡೆಯಲು ಅವಕಾಶಗಳಿವೆ ಎಂದು ಸಂಜೀವ್ ಚೋಪ್ರಾ ಅವರು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಅಡಗೂರು ವಿಶ್ವನಾಥ್ ಮಾತನಾಡಿ, ನಾಚಪ್ಪ ಓರ್ವ ಧೀಮಂತ ಹೋರಾಟಗಾರರಾಗಿದ್ದು, ಅವರು ಕರೆದಾಗಲೆಲ್ಲ ನಾನು ಬರುತ್ತಲೇ ಇದ್ದೇನೆ. ಕೊಡಗಿಗೆ ಮಾತ್ರ ಸೀಮಿತವಾಗಿರುವ ಈ ಕೊಡವರ ಕುಲ ಸಮಸ್ಯೆಯನ್ನು ಬಗೆಹರಿಸಿ ತಾರ್ಕಿಕ ಅಂತ್ಯಕ್ಕೆ ತಲುಪಿಸಲು ನಾನು ಸಂಸದ ಯದುವೀರ್ ಸೇರಿದಂತೆ ಎಲ್ಲರ ಬಳಿಗೂ ನಿಯೋಗ ಕೊಂಡೊಯ್ಯುತ್ತೇನೆ. ಇದಕ್ಕಾಗಿ ಡಾ. ಸಂಜೀವ್ ಚೋಪ್ರರಂತಹ ತಜ್ಞರನ್ನು ಒಳಗೊಂಡ ಒಂದು ಇನ್ನರ್ ಕ್ಯಾಬಿನೇಟ್ ರಚಿಸಬೇಕೆಂದು ಸಲಹೆ ನೀಡಿದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಚಿರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಎನ್.ಯು ನಾಚಪ್ಪ ಅವರು, ತಪಸ್ಸಿನಂತೆ ಈ ಕೊಡವ ಲ್ಯಾಂಡ್ ಆಂದೋಲನವನ್ನು ರೂಪಿಸಿದ್ದಾರೆ. ಯಾರೇ ವಿರೋಧಿಸಲಿ, ಅಡ್ಡಗಾಲು ಹಾಕಲಿ ತಾವು ನಂಬಿದ ಸಿದ್ಧಾಂತಕ್ಕೆ ಬದ್ದರಾಗಿದ್ದಾರೆ. ಅವರಿಗೆ ನನ್ನ ವೈಯಕ್ತಿಕ ಬೆಂಬಲವಲ್ಲದೆ, ತಾವು ಪ್ರತಿನಿಧಿಸುವ ಬೆಂಗಳೂರು ಕೊಡವ ಸಮಾಜದ ಶ್ರೀರಕ್ಷೆ ಇರಲಿದೆ ಎಂದು ಭರವಸೆ ನೀಡಿದರು.
ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ನಾಣಯ್ಯ ಅವರು ಮಾತನಾಡಿ, ಇಡೀ ನಾಲ್ನಾಡ್ ಕೊಡವ ಸಮಾಜದ ಬೆಂಬಲವನ್ನು ಸಿ.ಎನ್.ಸಿಗೆ ನೀಡಲಿದ್ದು, ನಾಚಪ್ಪ ಹಾಗೂ ಅವರ ಸಂಗಡಿಗರು ಇಡೀ ಭಾರತ ದೇಶಕ್ಕೆ ಕೊಡವರ ಧ್ವನಿಯನ್ನು ತಲುಪಿಸುವಲ್ಲಿ ಸಫಲರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಸರಾಂತ ವೈದ್ಯರಾದ ಡಾ.ಮಾತಂಡ ಅಯ್ಯಪ್ಪ ಅವರು ಮಾತನಾಡಿ, ಪ್ರತಿಯೊಬ್ಬ ಹೋರಾಟಗಾರರಿಗೂ ಎನ್.ಯು ನಾಚಪ್ಪ ಸ್ಫೂರ್ತಿದಾಯಕರಾಗಿದ್ದು, ಇಲ್ಲಿ ಭಾಗವಹಿಸಿದವರ ಸಂಖ್ಯೆ ಶೇ.೨೫ ರಷ್ಟು ಇದ್ದರೆ, ಇನ್ನು ಶೇ.೭೫ ರಷ್ಟು ಬೆಂಬಲಿಗರು ಮೌನವಾಗಿ ಸಿ.ಎನ್.ಸಿ.ಯನ್ನು ಬೆಂಬಲಿಸುತ್ತಿದ್ದಾರೆ. ಕೊಡವಲ್ಯಾಂಡ್ ಬೇಗ ಕಾರ್ಯಗತವಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಕೊಡವರನ್ನು ಆದಿಮಸಂಜಾತ ಏಕ-ಜನಾಂಗೀಯ ಆ್ಯನಿಮಿಸ್ಟಿಕ್ ಗುಂಪಾಗಿ ಗುರುತಿಸಲು ಸಿ.ಎನ್.ಸಿ ಸಂವಿಧಾನಿಕ ಪ್ರಯಾಣವನ್ನು ಮುಂದುವರಿಸಿದೆ. ಕೊಡವ ಜನರ ಪೂರ್ವಜರ ತಾಯ್ನಾಡು, ಕೊಡವಲ್ಯಾಂಡ್, ಭೂ ಮಂಡಲದ ಸೃಷ್ಟಿಯಿಂದಲೂ ಅಸ್ತಿತ್ವದಲ್ಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಪ್ರತಿಪಾದಿಸುತ್ತದೆ. ಇದು ಸಮುದಾಯದ ಭೂಮಿಯೊಂದಿಗಿನ ಆಳವಾದ ಸಂಪರ್ಕವನ್ನು ಎತ್ತಿ ತೋರಿಸುತ್ತದೆ ಎಂದರು. ಕೊಡವ ಜನರು ಅನಾದಿ ಕಾಲದಿಂದಲೂ ಕೊಡವಲ್ಯಾಂಡ್‌ನ ಅವಿಭಾಜ್ಯ ಅಂಗವಾಗಿದ್ದಾರೆ, ಅವರ ಅಸ್ತಿತ್ವವು ಕಾವೇರಿ ನದಿಯಂತಹ ನೈಸರ್ಗಿಕ ಅಂಶಗಳೊAದಿಗೆ ಹೆಣೆದುಕೊಂಡಿದೆ, ಇದು ಭೂಮಿಯೊಂದಿಗಿನ ಅವರ ಪ್ರಾಚೀನ ಮತ್ತು ಶಾಶ್ವತ ಸಂಪರ್ಕವನ್ನು ಸಂಕೇತಿಸುತ್ತದೆ ಎಂಬುದಾಗಿ ಮಾಹಿತಿ ನೀಡಿದರು.
ಕೊಡವ ಜನರು ಕೊಡವಲ್ಯಾಂಡ್‌ನೊAದಿಗೆ ಆಳವಾಗಿ ಸಂಪರ್ಕ ಹೊಂದಿದ್ದಾರೆ, ಅವರ ಇತಿಹಾಸ ಮತ್ತು ಸಂಸ್ಕöÈತಿಯು ಕಾವೇರಿ ನದಿಯಂತೆ, ಭೂಮಿ ಮತ್ತು ಅದರ ನೈಸರ್ಗಿಕ ಅಂಶಗಳೊAದಿಗೆ ಹೆಣೆದುಕೊಂಡಿದೆ, ಇದು ಈ ಪ್ರದೇಶದಲ್ಲಿ ಅವರ ಪ್ರಾಚೀನ ಇರುವಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ಆರಂಭದಲ್ಲಿ ದುಡಿಕೊಟ್ಟ್ ಪಾಟ್ಟ್ ಸಹಿತವಾಗಿ ಮೆರವಣಿಗೆ ನಡೆಸಲಾಯಿತು. ಬಳಿಕ ಬಾಳೆ ಕಡಿಯಲಾಯಿತು, ಆಗಸಕ್ಕೆ ಗುಂಡು ಹಾರಿಸಲಾಯಿತು. ವ್ಯಾಲಿ ಡ್ಯೂ ಅಸೋಸಿಯೇಷನ್‌ನಿಂದ ಜಾನಪದ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ಕೊಡವ ಸಮಾಜದ ಮಾಜಿ ಅಧ್ಯಕ್ಷ ವಕೀಲ ಎಂ.ಟಿ ನಾಣಯ್ಯ, ಪ್ರಮುಖರಾದ ಕಲಿಯಂಡ ಮೀನಾ, ಮಂದಪAಡ ರಚನಾ, ಚೋಳಪಂಡ ಜ್ಯೋತಿ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಅಪ್ಪಚ್ಚೀರ ರೀನ ನಾಣಯ್ಯ, ಪಚ್ಚಾರಂಡ ಶಾಂತಿ, ಕೊಡಂದೇರ ಉತ್ತರೆ ತಿಮ್ಮಯ್ಯ, ನಂದೇಟಿರ ಕವಿತಾ, ಅರೆಯಡ ಸವಿತ, ಬೊಟ್ಟಂಗಡ ಸವಿತಾ, ಕೊಂಗೇಟಿರ ರಾಧ, ಅಪ್ಪಾರಂಡ ರೀನ, ಅಪ್ಪಾರಂಡ ವಿನ್ಸಿ, ಅಜ್ಜಿನಿಕಂಡ ಇನಿತ, ನಂದಿನೆರವAಡ ಬೀನ, ಅಪ್ಪಾರಂಡ ಮೀರ, ನಂದಿನೆರವAಡ ನಿಶಾ, ನಂದಿನೆರವAಡ ರೇಖಾ, ಬಿದ್ದಂಡ ಉಷಾ, ಚಂಗAಡ ಕನ್ನಿಕೆ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ, ಕಾಂಡೇರ ಸುರೇಶ್, ಉದಿಯಂಡ ಚಂಗಪ್ಪ, ಚಂಬAಡ ಜನತ್, ಹಂಚೆಟ್ಟಿರ ನಿತೀನ್, ಕಾಟಿಮಾಡ ಜಿಮ್ಮಿ, ನಂದೇಟಿರ ರವಿ ಸುಬ್ಬಯ್ಯ, ಹಂಚೆಟ್ಟಿರ ಮನು ಮುದ್ದಪ್ಪ, ಪೆಮ್ಮುಡಿಯಂಡ ವೇಣು, ಮಣವಟ್ಟೀರ ಚಿಣ್ಣಪ್ಪ, ಮಾಚೆಟ್ಟಿರ ಚೋಟು ಕಾವೇರಪ್ಪ, ಮಣವಟ್ಟೀರ ಜಗದೀಶ್, ಕುಲ್ಲೇಟಿರ ಬೇಬ, ನಂದಿನೆರವAಡ ಅಪ್ಪಯ್ಯ, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶರಿನ್, ಬೊಟ್ಟಂಗಡ ಗಿರೀಶ್, ಅರೆಯಡ ಗಿರೀಶ್, ಬೇಪಡಿಯಂಡ ದಿನು, ಜಮ್ಮಡ ಮೋಹನ್, ಮಂದ್ರೀರ ಕರುಂಬಯ್ಯ, ಪುದಿಯೊಕ್ಕಡ ಪೃಥ್ವಿ, ಮೇದುರ ಕಂಠಿ, ಮುದ್ದಂಡ ಗಪ್ಪಣ್ಣ, ನಾಪಂಡ ಅರುಣ, ಪುಟ್ಟಿಚಂಡ ಡಾನ್, ಕೂಪದಿರ ಸಾಬು, ಕೋದೆಂಗಡ ನರೇಂದ್ರ, ಕೊಣಿಯಂಡ ಸಂಜು, ಪೊರಿಮಂಡ ದೀನಮಣಿ, ಮಂದಪAಡ ಮನೋಜ್, ಬೊಳ್ಳಚೆಟ್ಟೀರ ಸುರೇಶ್, ಪಾರ್ವಂಗಡ ನವೀನ್, ಚಂಗAಡ ಸೂರಜ್, ಕಿರಿಯಮಾಡ ಶರಿನ್, ಬಿದ್ದಂಡ ಮಾದಯ್ಯ, ಬಿದ್ದಂಡ ಅಚ್ಚಯ್ಯ, ಕೊಂಗೇಟಿರ ಅನಿಲ್, ಕಡೆಮಾಡ ವಿನ್ಸಿ, ಅಪ್ಪಾರಂಡ ಪ್ರಸಾದ್, ಅಪ್ಪಾರಂಡ ಪೂವಣ್ಣ, ಅಪ್ಪಾರಂಡ ವಿಜು, ಚಂಗAಡ ಚಾಮಿ, ಅಪ್ಪೆಯಂಗಡ ಮಾಲೆ, ಚೇನಂಡ ಸುಭಾಷ್, ಕೊಲ್ಲಿರ ಗಯ, ಕೊಲ್ಲಿರ ಗೋಪಿ, ಕಂಬೀರAಡ ಬೋಪಣ್ಣ, ನೆಲ್ಲಿರ ಮಧು, ಜಮ್ಮಡ ಮೋಹನ್, ನಂದಿನೆರವAಡ ವಿಜು, ನಂದಿನೆರವAಡ ಅಯ್ಯಣ್ಣ, ಮಂದಪAಡ ಸೂರಜ್, ಕೋಡಿರ ವಿನೋದ್, ಬೊಳ್ಳರ್ಪಂಡ ಮಾಚು, ಸೋಮೆಯಂಡ ದಿಲೀಪ್, ನಂದಿನೆರವAಡ ಬೋಪಣ್ಣ, ನಂದಿನೆರವAಡ ಪೊನ್ನಣ್ಣ, ಬಲ್ಲಟಿಕಾಳಂಡ ರಾಯ್, ಪುಳ್ಳಂಗಡ ನಟೇಶ್, ಚಟ್ಟಂಗಡ ಸೋಮಣ್ಣ, ಮಾಣಿರ ಪ್ರವೀಣ ಬಲ್ಲಚಂಡ ಸುನೀಲ್, ಸೋಮೆಯಂಡ ರೇಶ, ಅಪ್ಪೆಯಂಗಡ ಮಾಲೆ, ಮಾತಂಡ ಕಂಬ ಉತ್ತಯ್ಯ, ಕಾಟುಮಣಿಯಂಡ ಉಮೇಶ್, ಅಪ್ಪಚ್ಚಿರ ರಮ್ಮಿ, ಚೋಳಪಂಡ ನಾಣಯ್ಯ, ಅಜ್ಜಿನಿಕಂಡ ಸನ್ನಿ, ಅಜ್ಜೇಟಿರ ರಾಣಿ, ನಂದಿನೆರವAಡ ಕೃಪ, ನಂದಿನೆರವAಡ ಸೂರಜ್, ಮುದ್ದಿಯಡ ಲೀಲಾವತಿ, ಮಂಡೇಪAಡ ತಿಮ್ಮಯ್ಯ ಮುಂತಾದವರು ಭಾಗವಹಿಸಿದ್ದರು.