ಸಿದ್ದಾಪುರ, ನ. ೨೭: ಮನೆ ಸಮೀಪದಲ್ಲಿ ಕಟ್ಟಿಹಾಕಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಮಾಲ್ದಾರೆ ಗ್ರಾಮದ ಕಲ್ಲಳ್ಳ ದೊಡ್ಡಹಡ್ಲು ಎಂಬಲ್ಲಿ ನಡೆದಿದೆ. ಕೃಷ್ಣ ಎಂಬವರಿಗೆ ಸೇರಿದ ಗಬ್ಬದ ಹಸುವನ್ನು ಮನೆ ಸಮೀಪದಲ್ಲಿ ಮೇಯಲು ಕಟ್ಟಿ ಹಾಕಲಾಗಿತ್ತು. ಸಂಜೆ ಅಂದಾಜು ೫ ಗಂಟೆ ಸಮಯಕ್ಕೆ ಸಮೀಪದ ೪ಐದನೇ ಪುಟಕ್ಕೆ (ಮೊದಲ ಪುಟದಿಂದ)
ಅರಣ್ಯದಿAದ ಹುಲಿ ಬಂದು ದಾಳಿ ನಡೆಸಿ ಕೊಂದು ಹಾಕಿದೆ. ಅಲ್ಲದೆ ಕೊಂದಿರುವ ಹಸುವನ್ನು ಸುಮಾರು ೧೦೦ ಮೀಟರ್‌ಗಳಷ್ಟು ದೂರಕ್ಕೆ ಎಳೆದುಕೊಂಡು ಹೋದ ಕುರುಹುಗಳು ದೊರೆತಿವೆ. ಕೊಂದುಹಾಕಿರುವ ಐದು ತಿಂಗಳ ಗಬ್ಬದ ಹಸುವಿನ ತೊಡೆಯ ಭಾಗದ ಮಾಂಸವನ್ನು ಹುಲಿ ತಿಂದಿದೆ ಎಂದು ಹಸು ಮಾಲೀಕ ಕೃಷ್ಣ ಅವರು “ಶಕಿ೦್ತ'' ಗೆ ಮಾಹಿತಿ ನೀಡಿದರು.
ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹುಲಿಯನ್ನು ಕಂಡ ಹಸುವಿನ ಮಾಲೀಕ
ಮಂಗಳವಾರದAದು ಮನೆ ಸಮೀಪದಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಮಾಹಿತಿಯನ್ನು ಸ್ಥಳೀಯರು ಕೃಷ್ಣ ಅವರಿಗೆ ತಿಳಿಸಿದ್ದಾರೆ. ಆದರೆ ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬುಧವಾರದಂದು ಬೆಳಿಗ್ಗೆ ತೆರಳಿ ನೋಡಿದಾಗ ಹಸುವನ್ನು ಎಳೆದುಕೊಂಡು ಹೋಗಿದ್ದ ಸ್ಥಳದ ಸಮೀಪದಲ್ಲಿ ಕೃಷ್ಣ ಅವರಿಗೆ ಹುಲಿ ನೇರವಾಗಿ ಕಂಡುಬAದಿದೆ. ಇದರಿಂದ ಆತಂಕಗೊAಡ ಕೃಷ್ಣ ಅವರು ಹಿಂತಿರುಗಿ ಬಂದಿದ್ದಾರೆ. ಹಸುವನ್ನು ಕೊಂದ ಹುಲಿಯು ಹಸುವನ್ನು ಎಳೆದುಕೊಂಡು ಹೋಗಲು ಬಂದಿರುವುದಾಗಿ ಕೃಷ್ಣ ತಿಳಿಸಿದ್ದಾರೆ. ಹಸುವನ್ನು ಕಳೆದುಕೊಂಡ ಮಾಲೀಕರಿಗೆ ಕೂಡಲೇ ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಹಿಂದೆ ಕೂಡ ಈ ಭಾಗದಲ್ಲಿ ಹುಲಿ ದಾಳಿಗೆ ಹಲವಾರು ಜಾನುವಾರುಗಳು ಸಾವನ್ನಪ್ಪಿವೆ. ದಿನಕ್ಕೆ ೧೦ ಲೀಟರ್ ಹಾಲು ಕೊಡುವಂತ ಉತ್ತಮ ತಳಿಯ ಹಸು ಇದಾಗಿತ್ತು. ಅಲ್ಲದೆ ೭೦ ವರ್ಷ ಪ್ರಾಯದ ಕೃಷ್ಣ ಅವರು ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿದ್ದಾರೆ. -ವಾಸು