ಮಡಿಕೇರಿ, ನ. ೨೭: ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ ವತಿಯಿಂದ ೩೯ನೇ ಆವೃತ್ತಿಯ ಸತ್ಯ ಕೂರ್ಗ್ ತ್ರಿಕೋನ ಗಾಲ್ಫ್ ಚಾಂಪಿಯನ್ ಶಿಪ್ ಪಂದ್ಯಾಟ ಆಯೋಜಿಸಲಾಗಿತ್ತು.
ಮಡಿಕೇಯ ಮರ್ಕೇರಾ ಡೌನ್ಸ್ ಗಾಲ್ಫ್ ಕೋರ್ಸ್, ಬಿಟ್ಟಂಗಾಲದ ಕೂರ್ಗ್ ಗಾಲ್ಫ್ ಲಿಂಕ್ ಮತ್ತು ಪಾಲಿಬೆಟ್ಟದಲ್ಲಿನ ಟಾಟಾ ಕಾಫಿ ಗಾಲ್ಪ್ ಕೋರ್ಸ್ಗಳಲ್ಲಿ ಮೂರು ದಿನಗಳು ಆಯೋಜಿತ ಗಾಲ್ಫ್ ಪಂದ್ಯಾವಳಿಗಳಲ್ಲಿ ವಿವಿಧೆಡೆಗಳ ೧೧೦ ಗಾಲ್ಫ್ ಆಟಗಾರರು ಪಾಲ್ಗೊಂಡಿದ್ದರು. ಎಲ್ಲಾ ವಿಭಾಗಗಳಲ್ಲಿ ವರುಣ್ ಗಣಪತಿ ವಿಜೇತರಾಗಿ ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಮಾಲಿ ಶಶಿಕಿರಣ್ ದ್ವಿತೀಯ ಸ್ಥಾನ ಪಡೆದರು.
ವಿವಿಧ ವಿಭಾಗಗಳಲ್ಲಿ ಅಖಿಲ್ ಮುತ್ತಣ್ಣ, ಫೆಯಾಜ್ ಮೂಸಕುಟ್ಟಿ, ಬಿ.ಎ. ಗಣಪತಿ, ಸತ್ಯನಾರಾಯಣ ಹೆಚ್.ಎಲ್. ಗ್ರೂಪ್ ಕ್ಯಾಪ್ಟನ್ ಮೂರ್ತಿ, ಐ.ಕೆ. ಅನಿಲ್, ಐ.ಕೆ. ಪೊನ್ನಪ್ಪ, ಕೆ.ಯು. ವಿಕ್ರಾಂತ್, ಕೆ.ಪಿ. ರಂಜಿತ್, ಚನ್ನರಾಜ ಮಹೀಂದ್ರ, ಬಿ.ಎಂ. ನಾಚಪ್ಪ, ಎಂ.ಎA. ಪ್ರದೀಪ್ ಕುಮಾರ್ ದಾಸ್, ಎಂ.ಎ. ರಮೇಶ್, ಬೋಪಣ್ಣ, ಪಿ.ಕೆ. ಅಮೃತ್ ಪೂವಣ್ಣ, ಅಖಿಲ್ ಮುತ್ತಣ್ಣ, ಪ್ರಥ್ವಿ ಡಿಸೋಜಾ, ಜೈದೀಪ್, ಟಿ.ಕೆ. ಸತ್ಯಪ್ರಸಾದ್, ಆರ್. ಬಿ.ಸಿ. ನಾಯರ್, ಹರ್ಷ ದೇಶಪಾಂಡೆ, ಶ್ರೀಧರ್ ರಂಗಸ್ವಾಮಿ ವಿಜೇತರಾದರು.
ಮಹಿಳಾ ವಿಭಾಗದಲ್ಲಿ ಆಲಿಶಾ ತಿಮ್ಮಯ್ಯ ಪ್ರಥಮ ಮತ್ತು ಚಂದ್ರಿಕಾ ದ್ವಿತೀಯ ಸ್ಥಾನ ಪಡೆದರು.
ಸ್ಪರ್ಧಾ ವಿಜೇತರಿಗೆ ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ನ ಕ್ಯಾಪ್ಟನ್ ಮುತ್ತಣ್ಣ ಕಾರ್ಯಪ್ಪ, ಪಂದ್ಯಾವಳಿಯ ಪ್ರಾಯೋಜಕರಾದ ಟಿ.ಕೆ. ಸತ್ಯಪ್ರಸಾದ್, ಗೌರವ ಕಾರ್ಯದರ್ಶಿ ಎಂ.ಎ. ಪೂಣಚ್ಚ, ಖಜಾಂಚಿ ಪಿ.ಕೆ. ಬೋಪಣ್ಣ, ಪಂದ್ಯಾವಳಿ ಆಯೋಜನಾ ಸಮಿತಿ ಅಧ್ಯಕ್ಷ ರಾಯ್ ಚಂಗಪ್ಪ ಟ್ರೋಫಿ ವಿತರಿಸಿದರು. ಮರ್ಕೇರಾ ಡೌನ್ಸ್ ಗಾಲ್ಪ್ ಕ್ಲಬ್ನ ಆಡಳಿತ ಮಂಡಳಿ ಪದಾಧಿಕಾರಿಗಳು, ನಿರ್ದೇಶಕರು ಹಾಜರಿದ್ದರು.