ವೀರಾಜಪೇಟೆ, ನ. ೨೯: ವೀರಾಜಪೇಟೆಯ ಪಂಜರುಪೇಟೆ ಬಳಿಯಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ೨೦೨೫-೨೬ನೇ ಸಾಲಿನ ಪೋಷಕರ ಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಪೋಷಕರು ಶಿಕ್ಷಕರೊಂದಿಗೆ ತಮ್ಮ ಮಕ್ಕಳ ಶಾಲಾ ಪ್ರಗತಿಯ ಕುರಿತು ಸಂವಾದ ಮಾಡಿದರು.

ಪ್ರಾಂಶುಪಾಲರಾದ ಶಿವಕುಮಾರ್ ಎಸ್.ಸಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಸಭೆಯ ಕುರಿತು, ವಿದ್ಯಾರ್ಥಿಗಳ ಪ್ರಗತಿ ಕುರಿತು ಮಾತನಾಡಿದರು. ಸಭೆಯಲ್ಲಿ ಶಿಕ್ಷಕರು, ಪೋಷಕ ಸಮಿತಿ ಸದ್ಯಸರು, ಹಾಗೂ ಪೋಷಕರು ಇದ್ದರು. ಸಮಾಜ ವಿಜ್ಞಾನ ಶಿಕ್ಷಕಿ ಭವ್ಯ ಕೆ.ಎನ್, ಡಾ. ದಿಲನ್ ಐ., ಗಣಿತ ಶಿಕ್ಷಕ ಸಂತೋಷ್ ಕುಮಾರ್ ಕೆ. ಕಾರ್ಯಕ್ರಮ ನಿರ್ವಹಣೆ ಮಾಡಿದರು.