ಅಮ್ಮತ್ತಿ, ಡಿ. ೩: ತ್ರಿ ವೀಲ್ಸ್ ಕ್ರಿಕೆಟರ್ಸ್ ಅಮ್ಮತ್ತಿ ವತಿಯಿಂದ ನೆಲ್ಲಮಕ್ಕಡ ಸಜಿ ನಾಣಯ್ಯ ಅವರ ಜ್ಞಾಪಕಾರ್ಥವಾಗಿ ೫ನೇ ವರ್ಷದ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ತಾ. ೧೩ ಮತ್ತು ೧೪ ರಂದು ನಡೆಯಲಿದೆ ಎಂದು ತ್ರಿ ವೀಲ್ಸ್ ಕ್ರಿಕೆಟರ್ಸ್ ಅಧ್ಯಕ್ಷ ರಿಚಾರ್ಡ್ ತಿಳಿಸಿದ್ದಾರೆ.

ಅಮ್ಮತ್ತಿಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ ರೂ. ೧೮,೦೦೦ ಮತ್ತು ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. ೧೪,೦೦೦ ಮತ್ತು ಟ್ರೋಫಿ, ತೃತೀಯ ಬಹುಮಾನವಾಗಿ ಆಕರ್ಷಕ ಟ್ರೋಫಿ ನೀಡಲಾಗುವುದು ಹಾಗೂ ಪಂದ್ಯಾಟಕ್ಕೆ ತಾಲೂಕಿನ ಆಟೋ ಚಾಲಕರು ಮಾತ್ರ ಪಂದ್ಯಾಟದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಭಾಗವಹಿಸುವ ಆಟಗಾರರು ಗುರುತಿನ ದಾಖಲೆಗಳಾಗಿ ಆಟೋ ಲೈಸೆನ್ಸ್, ಆರ್.ಸಿ ಕಾರ್ಡ್ ಅಥವಾ ಆಧಾರ್ ಕಾರ್ಡ್ನ್ನು ಕಡ್ಡಾಯವಾಗಿ ತರಬೇಕೆಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ೮೮೬೧೦ ೨೫೪೦೨, ೯೪೮೦೬ ೩೫೦೪೬ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.