*ಗೋಣಿಕೊಪ್ಪ, ಡಿ. ೩: ರೋಟರಿ ಸಂಸ್ಥೆ ಗೋಣಿಕೊಪ್ಪ ವತಿಯಿಂದ, ಬೆಂಗಳೂರಿನ ಎಫ್‌ಕೆಸಿಸಿಐ ಸಂಸ್ಥೆಯಿAದ ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ ಪಡೆದುಕೊಂಡ ಚೇದಂಡ ಸುಮಿ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು.
ಗೋಣಿಕೊಪ್ಪದ ಖಾಸಗಿ ಸಭಾಂಗಣದಲ್ಲಿ ರೋಟರಿ ಸಂಸ್ಥೆ ಜಿಲ್ಲಾ ಗವರ್ನರ್ ಭೇಟಿ ಹಿನ್ನಲೆ ನಡೆದ ಸರ್ವ ಸದಸ್ಯರ ಸಮಾಲೋಚನಾ ಸಭೆಯಲ್ಲಿ ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ಪಿ.ಕೆ. ರಾಮಕೃಷ್ಣ, ಗೋಣಿಕೊಪ್ಪ ರೋಟರಿ ಸಂಸ್ಥೆ ಅಧ್ಯಕ್ಷ ಪಿ.ಕೆ. ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ಗೌರವಿಸಲಾಯಿತು.
ಸಹಾಯಕ ಗವರ್ನರ್, ದಿಲನ್ ಚಂಗಪ್ಪ, ಝೋನಲ್ ಲೆಫ್ಟಿನೆಂಟ್ ಆದಿತ್ಯ ಕೆ.ಹೆಚ್., ಗೋಣಿಕೊಪ್ಪ ರೋಟರಿ ಕಾರ್ಯದರ್ಶಿ ಪ್ರಮೋದ್ ಕಾಮತ್, ಖಜಾಂಚಿ ಜಪ್ಪೆಕೋಡಿ ಸುಭಾಷಿಣಿ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರುಗಳು ಇದ್ದರು.