ಕೂಡಿಗೆ, ಡಿ. ೩: ಅಮೃತ್ ಯೋಜನೆಯ ಅವೈಜ್ಞಾನಿಕ ಹಾಗೂ ವಿಳಂಬದ ಪರಿಣಾಮ ರೂ. ೪ ಕೋಟಿ ವೆಚ್ಚದ ಕುಶಾಲನಗರ-ಕೂಡಿಗೆ ರಸ್ತೆ ನಿರ್ಮಾಣ ಕಾರ್ಯಕ್ಕೆ ವಿಘ್ನ ಎದುರಾಗಿದೆ.
ಅಮೃತ್ ಯೋಜನೆಯಡಿ ಕೈಗೊಂಡ ಕಾಮಗಾರಿಯ ಪೈಪ್ಲೈನ್ಗಳ ಅಸಮರ್ಪಕ ಅಳವಡಿಕೆ ಹಾಗೂ ವಿಳಂಬದಿAದ ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ ಎಂಬ ಆರೋಪ ವ್ಯಕ್ತವಾಗಿದೆ.
ಭಾರೀ ಮಳೆಯಿಂದ ಈ ರಸ್ತೆ ಸಂಪೂರ್ಣ ದುಸ್ಥಿತಿಗೆ ತಲುಪಿ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಗುಂಡಿಮಯ ರಸ್ತೆಯಿಂದ ವಾಹನ ಸವಾರರು ಪರದಾಡಬೇಕಾದ ಸ್ಥಿತಿಯೂ ಸೃಷ್ಟಿಯಾಗಿತ್ತು. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ಪ್ರಯತ್ನದ ಫಲವಾಗಿ ಸರಕಾರದಿಂದ ಅನುದಾನ ದೊರೆತು ಡಾಂಬರೀಕರಣವೂ ಆರಂಭಗೊAಡಿತ್ತು.
ಕೂಡಿಗೆಯಿಂದ ಕುಶಾಲನಗರದವರೆಗೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಕೂಡಿಗೆಯಿಂದ ಕೂಡ್ಲೂರು ಕೈಗಾರಿಕಾ ಕೇಂದ್ರದವರೆಗೆ ರಸ್ತೆ ಜಾಗದಲ್ಲಿ ಅಸರ್ಮಕವಾಗಿ ಪೈಪ್ಲೈನ್ ಮಾಡಲು ಮುಂದಾಗಿ ರಸ್ತೆಯನ್ನು ಅಗೆಯುತ್ತಿರುವ ಕಾರಣದಿಂದ ನಡೆಯುತ್ತಿರುವ ರಸ್ತೆ ಕಾಮಗಾರಿಗೆ ಸಮಸ್ಯೆಯಾಗುತ್ತಿದೆ ಎಂದು ರಸ್ತೆ ದುರಸ್ತಿಯನ್ನು ಸ್ಥಗಿತಗೊಳಿಸಲಾಗಿದೆ.
ಕಾಮಗಾರಿ ಸ್ಥಗಿತದಿಂದ ಕೈಗಾರಿಕಾ ಘಟಕ ಮತ್ತು ಕೂಡಿಗೆ ಭಾಗದ ಕಡೆಗೆ ಮುಖ್ಯ ರಸ್ತೆಯಲ್ಲಿ ತೆರಳಲು ತೊಂದರೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಂಬAಧಿಸಿದ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದು, ಪ್ರತಿಭಟನೆ ಎಚ್ಚರಿಕೆಯನ್ನು ನೀಡಿದ್ದಾರೆ.
ಕುಶಾಲನಗರ ವಲಯದ ಲೋಕೋಪಯೋಗಿ ಇಂಜಿನಿಯರ್ ಆರ್ಬಾಜ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಅಮೃತ್ ಕಾಮಗಾರಿ ಸಂದರ್ಭದಲ್ಲಿ ಹಾಸನ ಹೆದ್ದಾರಿ ರಸ್ತೆಯ ಕೆಲವು ಕಡೆಗಳಲ್ಲಿ ರಸ್ತೆಯನ್ನು ಅಗೆದು ಪೈಪ್ಲೈನ್ ಅಳವಡಿಕೆ ಮಾಡಿದ್ದು, ಅಲ್ಲಿ ಡಾಂಬರೀಕರಣ ಮಾಡಲಾಗದ ಸ್ಥಿತಿ ಇದೆ. ರಸ್ತೆಯ ಡಿವೈಡರ್ ಜಾಗದಲ್ಲಿ ನಿಯಮಾನುಸಾರ ೭ ಮೀಟರ್ ಡಾಂಬರೀಕರಣ ಮಾಡಲೇಬೇಕು.
ಕುಡಿಯುವ ನೀರು ಸರಬರಾಜು ಇಲಾಖೆಯವರು ಸಮಸ್ಯೆ ಸರಿಪಡಿಸಿದ ನಂತರವಷ್ಟೇ ಕಾಮಗಾರಿಯನ್ನು ಆರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕುಡಿಯುವ ನೀರು ಸರಬರಾಜು ಮಂಡಳಿ ಇಂಜಿನಿಯರ್ರನ್ನು ಸಂಪರ್ಕಿಸಿದಾಗ ಪೈಪ್ ಲೈನ್ ಅಳವಡಿಕೆಯ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.