ಮಡಿಕೇರಿ, ಡಿ. ೬: ದೀರ್ಘಕಾಲದಿಂದ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ “ನಿಮ್ಮ ಹಣ ನಿಮ್ಮ ಹಕ್ಕು” ಶಿಬಿರ ತಾ.೮ರಂದು (ನಾಳೆ) ಜಿಲ್ಲಾ ಪಂಚಾಯತ್ ಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮ್ಯಾನೇಜರ್ ಗಂಗಾಧರ್ ನಾಯಕ್ ಪಿ. ತಿಳಿಸಿದ್ದಾರೆ.
ಈ ಶಿಬಿರವು ಭಾರತದ ಹಣಕಾಸು ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಬ್ಯಾಂಕ್ ವಿಮಾ ಮತ್ತು ಇತರ ಇಲಾಖಾ ಶಾಖೆಗಳಲ್ಲಿ ತಾ.೩೧ ರವರೆಗೆ ನಡೆಯಲಿದೆ. ಅದರಂತೆ, ದೀರ್ಘಕಾಲದವರೆಗೆ ಹಕ್ಕು ಪಡೆಯದ ಹಣಕಾಸಿನ ಸ್ವತ್ತುಗಳನ್ನು ಕಾನೂನುಬದ್ಧ ವಾರಸುದಾರರಿಗೆ ಮರುಪಡೆಯಲು ಸಹಾಯ ಮಾಡಲು ಈ ಶಿಬಿರವನ್ನು ನಡೆಸಲಾಗುತ್ತಿದೆ.
ಹಾಗಾಗಿ ಬ್ಯಾಂಕಿನಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ನಿಷ್ಕ್ರಿಯ ಖಾತೆಗಳಲ್ಲಿರುವ ಹಣ ಮತ್ತು ಹತ್ತು ವರ್ಷಗಳಿಗಿಂತ ಹಳೆಯದಾದ ಕ್ರೈಮ್ ಮಾಡದ ಠೇವಣಿಗಳನ್ನು (ಮೊತ್ತಗಳು) ಆರ್‌ಬಿಐನ ಡಿಇಎಎಫ್ ನಿಧಿಗೆ ವರ್ಗಾಯಿಸಲಾಗುತ್ತದೆ. ಸಾರ್ವಜನಿಕರು ತಮ್ಮ ಸಂಬAಧಿತ ಗುರುತಿನ ದಾಖಲೆಗಳು ಮತ್ತು ಅರ್ಹತಾ ಪತ್ರಗಳೊಂದಿಗೆ ಶಿಬಿರದಲ್ಲಿ ಭಾಗವಹಿಸಿ ಅಗತ್ಯ ಸಲಹೆ ಮತ್ತು ಸವಲತ್ತುಗಳನ್ನು ಪಡೆಯಬಹುದು.