ಮಡಿಕೇರಿ, ಡಿ. ೬: ಮಡಿಕೇರಿ ನಗರದ ದೇಚೂರು, ಚೈನ್‌ಗೇಟ್, ಗೌಡ ಸಮಾಜದ ಕೆಳಭಾಗ, ಖಾಸಗಿ ಬಸ್‌ನಿಲ್ದಾಣ, ಜ. ತಿಮ್ಮಯ್ಯ ಮತ್ತು ಸುದರ್ಶನ ವೃತ್ತವನ್ನು ಒಳಗೊಂಡ ಸುದರ್ಶನ ಗೌಡ ಕೂಟದ ೧೬ನೇ ವಾರ್ಷಿಕ ಸಭೆ ಮತ್ತು ಸಾಂಸ್ಕೃತಿಕ ಸಂತೋಷ ಕೂಟ ತಾ. ೭ ರಂದು (ಇಂದು) ನಡೆಯಲಿದೆ.
ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಬೆಳಿಗ್ಗೆ ೯.೩೦ಕ್ಕೆ ಕೂಟದ ಅಧ್ಯಕ್ಷ ಮೇರ್ಕಜೆ ಎಂ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಮಡಿಕೇರಿ ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಭಾಗವಹಿಸಲಿದ್ದಾರೆ.