ಮಡಿಕೇರಿ, ಡಿ. ೮: ಪೊನ್ನಂಪೇಟೆ ತಾಲೂಕಿನಲ್ಲಿ ರುವ ಪ್ರಸಿದ್ಧ ದೇವಸ್ಥಾನವಾದ ಮಲ್ಲಗೆರೆ ಶ್ರೀ ಮಾರಮ್ಮ ಹಾಗೂ ಶ್ರೀ ಈಶ್ವರ ದೇವಸ್ಥಾನದ ಮುಖ್ಯ ಹೆಬ್ಬಾಗಿಲು ಲೋಕಾರ್ಪಣೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ನೆರವೇರಿಸಿದರು.
ಈ ಹೆಬ್ಬಾಗಿಲು ನಿರ್ಮಾಣಕ್ಕೆ ಶಾಸಕರು ತಮ್ಮ ವಿಶೇಷ ಅನುದಾನದ ಮೂಲಕ ರೂ.೩ ಲಕ್ಷ ಹಾಗೂ ರೂ. ೧.೬೯ಲಕ್ಷವನ್ನು ದಾನಿಗಳಾದ ರಾಧಾ ಪೂವಯ್ಯ, ಜೀವನ್ ಅವರು ಒದಗಿಸಿದ್ದಾರೆ. ಬಳಿಕ ಮಾತನಾಡಿದ ಶಾಸಕರು, ಅತ್ಯಂತ ಸುಂದರ ಹಾಗೂ ಸಾವಿರಾರು ಭಕ್ತರು ಆಗಮಿಸುವ ಈ ದೇವಸ್ಥಾನಕ್ಕೆ ನೂತನ ಹೆಬ್ಬಾಗಿಲು ಮತ್ತಷ್ಟು ಮೆರಗು ನೀಡುತ್ತದೆ ಎಂದರು. ದೇವರು ಭಕ್ತಾದಿಗಳ ಇಷ್ಟಾರ್ಥ ಈಡೇರಿಸಿ ನಾಡಿಗೆ ಸುಖ, ಸಂತೋಷ, ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ವಲಯ ಕಾಂಗ್ರೆಸ್ ಅಧ್ಯಕ್ಷ ರಮೇಶ್, ಪಂಚಾಯಿತಿ ಸದಸ್ಯರಾದ ಬೋಪಣ್ಣ, ದಾನಿಗಳಾದ ಜೀವನ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾನಂಡ ಪ್ರತ್ಯು, ಹಿರಿಯರಾದ ಪೆಮ್ಮಂಡ ಪೊನ್ನಪ್ಪ, ಪಕ್ಷದ ಮುಖಂಡರಾದ ಮುಕ್ಕಾಟಿರ ಸಂದೀಪ್, ವಿನು ಉತ್ತಪ್ಪ, ಮನು, ಸಿದ್ದು ನಾಚಪ್ಪ, ನಿಖಿಲ್ ಸೋಮಣ್ಣ, ಅಜ್ಜಿಕುಟ್ಟಿರ ಪೊನ್ನು, ಪಮು, ಅಣ್ಣಳಮಾಡ ಹರೀಶ್, ಅಂಟೋನಿ, ಚೆಕ್ಕೇರ ಸುಧೀರ್, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.