ಮಡಿಕೇರಿ, ಡಿ. ೮: ಅಮ್ಮತ್ತಿನಾಡು ಕಳ್ಳಿರ ಬಾಣೆ ಕೋಲ್‌ಮಂದ್ ಕಾರ್ಯಕ್ರಮ ಶನಿವಾರದಂದು ಸಂಭ್ರಮದಿAದ ಜರುಗಿತು. ಅಲ್ಲಿನ ಬೋಂದ ಮುನ್ನೂರೊಕ್ಕಡ ಬಿಳುಗುಂದ ನಲ್ವತೊಕ್ಲು ಹಾಗೂ ಹೊಸಕೋಟೆ ಗ್ರಾಮಸ್ಥರು ಸೇರಿ ಕೋಲ್‌ಮಂದ್‌ನಲ್ಲಿ ಕೋಲಾಟ್, ಪರೆಯಕಳಿ, ವಾಲಗತಾಟ್, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ಮುನ್ನೂರೊಕ್ಕಡ ತಕ್ಕ ಮುಕ್ಕಾಟಿರ ಯೋಗೇಶ್ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ಚಿಲ್ಲವಂಡ ಪಿ. ಕಾವೇರಪ್ಪ, ನಲ್ವತೊಕ್ಲು ಕೇರಿ ತಕ್ಕ ಕಳ್ಳೆಪ್ಪಂಡ ಅಪ್ಪಣ್ಣ, ಬಿಳುಗುಂದ ಕೇರಿ ತಕ್ಕ ಉಪ್ಪಂಗಡ ಪೊನ್ನಪ್ಪ ಸೇರಿದಂತೆ ಮೂರು ಗ್ರಾಮಗಳ ಜನರು ಪಾಲ್ಗೊಂಡಿದ್ದರು.
ಸ್ಪರ್ಧಾ ವಿಜೇತರು
ತೆಂಗಿನಕಾಯಿಗೆ ಗುಂಡು ಹೊಡೆಯುವುದು (೧೨ನೇ ಬೋರ್) ಮಾದಪಂಡ ಹರ್ಷಿತ್ ದೇವಯ್ಯ, ಮೂಕೋಂಡ ದರ್ಶನ್ ಸುಬ್ಬಯ್ಯ, .೨೨ ಮಂಡೇಪAಡ ರಾಂಚ್ ತಮ್ಮಣ್ಣ, ಮಾದಪಂಡ ಹರ್ಷಿತ್ ದೇವಯ್ಯ. ಕೋಲಾಟ್: ಮಾದಪಂಡ ರಾಜಾ ತಿಮ್ಮಯ್ಯ, ನೆಲ್ಲಚಂಡ ಸುಂದರ ಸೋಮಣ್ಣ, ಪರೆಯಕಳಿ : ನೆಲ್ಲಚಂಡ ಪ್ರಕಾಶ್ ನಾಣಯ್ಯ, ಪುಚ್ಚಂಡ ವಾಸು ಅಪ್ಪಚ್ಚು, ವಾಲಗತಾಟ್ : ಮೂಕೋಂಡ ಅರುಣ ಗಣಪತಿ, ಮುಕ್ಕಾಟಿರ ಸಂತೋಷ್ ಸೋಮಣ್ಣ.