ಸಿದ್ದಾಪುರ, ಡಿ. ೮: ಪಾದಚಾರಿಗಳ ಮೇಲೆ ಆಕಸ್ಮಿಕವಾಗಿ ಬಂದೂಕಿನ ಗುಂಡು ತಗುಲಿದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಯೊಬ್ಬನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಆಭ್ಯತ್ಮಂಗಲ ಗ್ರಾಮದ ನಿವಾಸಿ ಶಶಿ (೪೭) ಬಂಧಿತ ಆರೋಪಿ. ತಾ. ೪ ರಂದು ಹುತ್ತರಿ ಹಬ್ಬದ ದಿನದಂದು ರಾತ್ರಿ ೭ ಗಂಟೆ ಸುಮಾರಿಗೆ ಅತ್ತಿಮಂಗಲ ಸಮೀಪದ ಸಂಪಿಗೆಕೊಲ್ಲಿಯ ಖಾಸಗಿ ತೋಟದ ಲೈನ್ಮನೆ ನಿವಾಸಿ ಸತೀಶ್ ಹಾಗೂ ಗುಡ್ಡೆಹೊಸೂರಿನ ಮಿಟ್ಟು ಹಾಗೂ ಮತ್ತೊಬ್ಬರು ಅತ್ತಿಮಂಗಲದಿAದ ಮುಖ್ಯರಸ್ತೆಯ ಮೂಲಕ ರಾತ್ರಿ ಅಂಗಡಿಗೆAದು ತೆರಳುತ್ತಿದ್ದ ಸಂದರ್ಭ ತೋಟದ ಒಳಗಿನಿಂದ ಬಂದೂಕಿನಿAದ ಗುಂಡು ಸಿಡಿದ ಶಬ್ದ ಕೇಳಿಬಂದಿದ್ದು, ಈ ವೇಳೆ ಸತೀಶ್ ಹಾಗೂ ಮಿಟ್ಟುವಿನ ದೇಹದ ಮೇಲೆ ಗುಂಡಿನ ಚೂರುಗಳು ತಗುಲಿ ಕುಸಿದು ಬಿದ್ದಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬAಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ತನಿಖೆ ಕೈಗೊಂಡಾಗ ಅಭ್ಯತ್ಮಂಗಲ ಗ್ರಾಮದ ಕಾಫಿ ತೋಟದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿರುವ ಶಶಿ ಆರೋಪಿ ಎಂದು ತಿಳಿದು ಬಂದಿದೆ. ಹುತ್ತರಿ ಹಬ್ಬದಂದು ಬೇರೊಬ್ಬರಿಗೆ ಸೇರಿದ ಬಂದೂಕನ್ನು ಪಡೆದುಕೊಂಡು ಗುಂಡು ಹಾರಿಸಿದ ಸಂದರ್ಭ ಘಟನೆ ಸಂಭವಿಸಿದೆ ಎಂದು ತನಿಖೆಯಿಂದ ಗೊತ್ತಾಗಿದೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಆರೋಪಿಯಿಂದ ಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಮತ್ತು ಡಿ.ವೈ ಎಸ್.ಪಿ. ಸೂರಜ್ ಮಾರ್ಗದರ್ಶನ, ಮಡಿಕೇರಿ ವೃತ್ತ ನಿರೀಕ್ಷಕ ಪಿ.ಕೆ. ರಾಜು, ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿದ್ದಾಪುರ ಸಹಾಯಕ ಠಾಣಾಧಿಕಾರಿ ಶ್ರೀನಿವಾಸ್, ಅಪರಾಧ ಪತ್ತೆ ದಳದ ಸಿಬ್ಬಂದಿ ಮಣಿಕಂಠ ಹಾಗೂ ಚಂದನ್ ಪಾಲ್ಗೊಂಡಿದ್ದರು. -ವಾಸು