ಮಡಿಕೇರಿ, ಡಿ. ೮ : ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ - ಮಡಿಕೇರಿ ಹಾಗೂ ತಾಲೂಕು ಬ್ರಾಹ್ಮಣ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ತಾ.೭ ರಂದು ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನ್ನಿಸ್ ಕ್ರೀಡಾಕೂಟದಲ್ಲಿ ಸಮಾಜದವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬ್ಯಾಡ್ಮಿAಟನ್ನಲ್ಲಿ ಪುರುಷರ ಹಾಗೂ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಎರಡರಲ್ಲಿಯೂ ಅವಿನಾಶ್ ಪ್ರಥಮ ಹಾಗೂ ಶಿಶಿರ ದ್ವಿತೀಯ ಸ್ಥಾನ ಗಳಿಸಿದರು. ಪುರುಷರ ಡಬಲ್ಸ್ನಲ್ಲಿ ಅವಿನಾಶ್ - ಶಿಶಿರ ಜೋಡಿ ಪ್ರಥಮ ಹಾಗೂ ಹರಿಶಂಕರ್ - ಶಿವಶಂಕರ್ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪುರುಷರ ಹಿರಿಯ ವಿಭಾಗದ ಸಿಂಗಲ್ಸ್ನಲ್ಲಿ ಬಿ.ಕೆ ಅರುಣ್ ಕುಮಾರ್ ಪ್ರಥಮ, ಭರತೇಶ್ ಖಂಡಿಗೆ ದ್ವಿತೀಯ ಸ್ಥಾನ ಗಳಿಸಿದರು. ಮಹಿಳೆಯರ ಸಿಂಗಲ್ಸ್ನಲ್ಲಿ ಸುಮೇಧಾ ಪ್ರಥಮ, ಈಶ್ವರಿ ಉದಯಶಂಕರ್ ದ್ವಿತೀಯ ಸ್ಥಾನ ಗಳಿಸಿದರು. ಡಬಲ್ಸ್ನಲ್ಲಿ ಸುಮೇಧಾ-ಸುಶ್ಮಾ ಜೋಡಿ ಪ್ರಥಮ, ಬಿಂದು ಹರೀಶ್-ಈಶ್ವರಿ ಉದಯಶಂಕರ್ ಜೋಡಿ ದ್ವಿತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಸುಮೇಧಾ ಪ್ರಥಮ ಹಾಗೂ ಅಂಕಿತಾ ದ್ವಿತೀಯ ಸ್ಥಾನ ಗಳಿಸಿದರು.
ಟೇಬಲ್ ಟೆನ್ನಿಸ್ನಲ್ಲಿ ಪುರುಷರ ಸಿಂಗಲ್ಸ್ನಲ್ಲಿ ಪೃಥ್ವಿ ಹೆಚ್.ಬಿ ಪ್ರಥಮ, ಶಿಶಿರ ಜಿ.ಎಸ್ ದ್ವಿತೀಯ ಸ್ಥಾನ ಗಳಿಸಿದರು. ಪುರುಷರ ಹಿರಿಯರ ವಿಭಾಗದಲ್ಲಿ ಭರತೇಶ್ ಖಂಡಿಗೆ ಪ್ರಥಮ, ರಾಮಚಂದ್ರ ಮೂಗೂರು ದ್ವಿತೀಯ ಸ್ಥಾನ ಗಳಿಸಿದರು. ಹಿರಿಯ ಪುರುಷರ ಡಬಲ್ಸ್ನಲ್ಲಿ ಎ.ವಿ ಮಂಜುನಾಥ್ - ಭರತೇಶ್ ಖಂಡಿಗೆ ಜೋಡಿ ಪ್ರಥಮ, ಹರೀಶ್ ಸರಳಾಯ - ಉಮೇಶ್ ಎಸ್.ಜಿ ಜೋಡಿ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ಸಿಂಗಲ್ಸ್ನಲ್ಲಿ ಮಂಧಾರ ಪ್ರಥಮ, ಈಶ್ವರಿ ಉದಯಶಂಕರ್ ದ್ವಿತೀಯ ಸ್ಥಾನ ಗಳಿಸಿದರು. ಮಹಿಳೆಯರ ಡಬಲ್ಸ್ನಲ್ಲಿ ಬಿಂದು ಹರೀಶ್-ಈಶ್ವರಿ ಉದಯಶಂಕರ್ ಜೋಡಿ ಪ್ರಥಮ, ಮಂಧಾರ-ಭವ್ಯ ಜೋಡಿ ದ್ವಿತೀಯ ಸ್ಥಾನ ಗಳಿಸಿತು.
ಜಿಲ್ಲಾ ಮಟ್ಟದ ವಿಪ್ರ ಕ್ರೀಡೋತ್ಸವ ಕ್ರಿಕೆಟ್ ಪಂದ್ಯಾವಳಿ ತಾ.೧೪ ರಂದು ವೀರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಬಹುಮಾನ ವಿತರಣೆÀ ಕಾರ್ಯಕ್ರಮ ಜನವರಿ ತಿಂಗಳಿನಲ್ಲಿ ನಡೆಯಲಿದೆ.