“ಅಯ್ಯೋ ಗುರು, ಸಾಲಸೋಲ ಮಾಡಿ ತಕೊಂಡ ಒಂದು ಸೈಟ್ ಡಾಕ್ಯುಮೆಂಟ್ಸ್ ಮಾಡಿಸ್ಬೇಕಾದ್ರೆ ಸಾಕು ಸಾಕಾಯಿತು”. ತುಂಬಾ ಹಣ ಖರ್ಚಾಯಿತು, ಅನ್ನೋದು ಒಬ್ಬನ ಗೋಳಾದರೆ, ಲಂಚ ಇಲ್ಲದೆ ಕೆಲ್ಸ ಆಗಲ್ಲ ಅಂತ, “ಅಜ್ಜಿಗೆ ವಿಧವಾ ವೇತನ ಮಾಡ್ಸಿ ಕೊಡಲು ಲಂಚ ಕೇಳಿದ ಅಹವಾಲನ್ನ ಒಪ್ಪಿಸುವವ ಇನ್ನೊಬ್ಬ.“ಸಾರ್ ನನ್ನ ಪೆನ್ಷನ್ ಫೈಲ್ ಇನ್ನೂ ಕ್ಲಿಯರ್ ಆಗಿಲ್ಲ ಅದನ್ನ ಸರಿಪಡ್ಸಕ್ಕೆ ದುಡ್ಡು ಕೊಡ್ಬೇಕಂತೆ” ಅನ್ನುವ ಮತ್ತೊಬ್ಬ, ನಿವೃತ್ತ ಸರಕಾರಿ ನೌಕರ. ಚೀಟಿ ವ್ಯವಹಾರದಲ್ಲಿ ಮೋಸ ಹೋದವ ಒಂದೆಡೆಯಾದರೆ, ‘ಅಕ್ರಮವಾಗಿ ಲಕ್ಷಾನುಗಟ್ಟಲೆ ಆಸ್ತಿ ಚಿನ್ನಾಭರಣ ಸಂಪಾದಿಸಿ ಲೋಕಾಯುಕ್ತರ ಬಲೆಗೆ ಬಿದ್ದ ಬಗ್ಗೆ ಬ್ರೇಕಿಂಗ್ ನ್ಯೂಸ್‌ನ ಭರಾಟೆ ಇನ್ನೊಂದೆಡೆ, ಆಸ್ತಿ ಖಾತೆ ಮಾಡಿಸಲು ಲಂಚ, ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳಿಗೆ ಸೀಟು ಕೊಡಿಸಲು ಲಂಚ. ಹೀಗೆ ಪ್ರತಿ ಹಂತದಲ್ಲೂ ಪ್ರತಿ ಕಛೇರಿಯಲ್ಲಿ ಭ್ರಷ್ಟಾಚಾರದ ವಿವಿಧ ಮುಖಗಳನ್ನು ಪ್ರತಿಯೊಬ್ಬರೂ ಅನುಭವಿಸಿರುತ್ತೇವೆ. “ಆಡು ಮುಟ್ಟದ ಸೊಪ್ಪಿಲ್ಲ, ಹಾಗೆಯೇ ಭ್ರಷ್ಟಾಚಾರ ಇಲ್ಲದ ಕ್ಷೇತ್ರಗಳೇ ಇಲ್ಲ ಎನ್ನಬಹುದು. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರ ಅಲ್ಲ ಪ್ರಪಂಚದಾದ್ಯAತ ಭ್ರಷ್ಟಾಚಾರ ತಾಂಡವವಾಡುತ್ತಿದೆ.
ಇAದು ವಿಶ್ವ ಭ್ರಷ್ಟಾಚಾರ ವಿರೋಧಿ ದಿನ, ೨೦೦೩ರ ಅಕ್ಟೋಬರ್ ೩೧ರಂದು ಭ್ರಷ್ಟಾಚಾರದ ವಿರುದ್ಧ ಯುನೈಟೆಡ್ ನೇಷನ್ಸ್ ಕನ್ವೆನ್ನನ್ (Uಓಅಂಅ) ಅನ್ನು ಅಳವಡಿಸಿಕೊಂಡ ನಂತರ ಈ ದಿನವನ್ನು ಸ್ಥಾಪಿಸಲಾಯಿತು. ೨೦೦೫ರಿಂದ ಇದನ್ನು ಪ್ರತೀ ವರ್ಷ ಡಿಸೆಂಬರ್ ೯ ರಂದು ಆಚರಿಸಲಾಗುತ್ತಿದೆ. ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ವಿರುದ್ಧದ ಹೋರಾಟವನ್ನು ಉತ್ತೇಜಿಸುವುದು ಅದರ ಮೂಲ ಉದ್ದೇಶವಾಗಿದೆ.
ಭ್ರಷ್ಟಾಚಾರ ಎಂದರೆ ನಾವು “ವೈಯಕ್ತಿಕ ಲಾಭಕ್ಕಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು, ಇದರಲ್ಲಿ ಲಂಚ, ವಂಚನೆ ಮತ್ತು ಸ್ವಜನಪಕ್ಷಪಾತ ಮುಂತಾದ ಅನೈತಿಕ ಮತ್ತು ಕಾನೂನುಬಾಹಿರ ಚಟುವಟಿಕೆಗಳು ಸೇರಿವೆ. ಸಾರ್ವಜನಿಕ ವಲಯದಲ್ಲಿ, ಸರ್ಕಾರಿ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ತಮ್ಮ ಅಧಿಕಾರವನ್ನು ಬಳಸಿಕೊಂಡು ನಿಯಮಗಳನ್ನು ಉಲ್ಲಂಘಿಸಿ ಅನಗತ್ಯ ಸೌಲಭ್ಯ ಅಥವಾ ಲಾಭವನ್ನು ಪಡೆಯುವುದು ಇದರ ಒಂದು ಸಾಮಾನ್ಯ ಉದಾಹರಣೆಯಾಗಿದೆ. ಭ್ರಷ್ಟಾಚಾರ ಎನ್ನುವುದು ಕೇವಲ ಹಣಕಾಸಿನ ಲಾಭಕ್ಕೆ ಸೀಮಿತವಾಗಿಲ್ಲ, ಅಧಿಕಾರ ಮತ್ತು ಪ್ರಭಾವವನ್ನೂ ಇದು ಒಳಗೊಂಡಿದೆ.
ಆಚಾರವಿದ್ದರಷ್ಟೇ ಅಧಿಕಾರಕ್ಕೆ ಅರ್ಥ. “ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ” ಪ್ರಸಿದ್ಧರ ವಚನ ಕೇಳುವಾಗ ವ್ಯಕ್ತಿಯ ವ್ಯಕ್ತಿತ್ವ ಆತನ ಮಾತುಗಳಿಂದ ಪ್ರಾರಂಭವಾಗಿ ಆತನ ನಡತೆ ಯಲ್ಲಿ ಪ್ರತಿಬಿಂಬಿತವಾಗುತ್ತದೆ. ಭ್ರಷ್ಟನಾದ ಯಾವುದೇ ಅಧಿಕಾರಿ ನೀಚ ಮನಸ್ಥಿತಿಯನ್ನು ತಮ್ಮ ಅಧಿಕಾರದಲ್ಲಿ ತೋರಿಸುವುದು ಉಂಟು. “ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ'' ಎಂಬAತೆ ತಮ್ಮ ನಡೆಯನ್ನು ಬೆಳೆಸಿಕೊಂಡಿರುತ್ತಾರೆ. ವ್ಯಕ್ತಿಗತವಾಗಿ ಬೇಧ-ಭಾವ ಮಾಡುವಂತಹದ್ದು, ತಮ್ಮ ಕೈಕೆಳಗಿನ ನೌಕರರನ್ನು ಸತಾಯಿಸುವುದು, ತಮಗೊಂದು ನಿಯಮ ಇತರರಿಗೊಂದು ನಿಯಮ ಎಂಬAತೆ, ದೊರೆತ ಅಧಿಕಾರವನ್ನು ದರ್ಪದಿಂದ ಮನಸೋಇಚ್ಛೆ ಬಳಸುತ್ತಾರೆ. ಇಂತಹ ವ್ಯಕ್ತಿತ್ವವುಳ್ಳ ವ್ಯಕ್ತಿಗಳ ಕೈಯ್ಯಲ್ಲಿ ಅನೇಕ ಮುಗ್ದಮನಗಳು ನಲುಗುತ್ತವೆ. ಕೆಲವರಿಗೆ ಅದನ್ನು ಎದುರಿಸುವ ಧೈರ್ಯ ಇರುವುದಿಲ್ಲ.ಇನ್ನೂ ಕೆಲವರು ಅದನ್ನು ಎದುರಿಸಲು ಸಿದ್ಧರಾಗಿ ಮುನ್ನುಗ್ಗಿದಾಗ, ಅದರ ಫಲಾ ಕಠೋರವಾಗಿರುತ್ತದೆ. ಅಯ್ಯೋ ನಮಗಿದು ಬೇಕಿತ್ತಾ ಎನ್ನುವಷ್ಟು ಪರಿಸ್ಥಿತಿ ಬಿಗಡಾಯಿಸುತ್ತದೆ. ಮೊನ್ನೆ-ಮೊನ್ನೆ ನಡೆದ ಒಂದು ಎಟಿಎಂ ದರೋಡೆ ಪ್ರಕರಣವನ್ನು ನೋಡಿದಾಗ ಕಳ್ಳ ಪೊಲೀಸ್ ಒಂದೇ ಸೂರಿನಡಿ, ಅಂದರೆ ಪೊಲೀಸ್ ಇಲಾಖೆಯಲ್ಲಿ ಇದ್ದವನೇ ಈ ದರೋಡೆಯ ರೂವಾರಿ ಎಂಬ ವಿಷಯ ಕೇಳಿದಾಗ ನಿಜಕ್ಕೂ ನಂಬಲಸಾಧ್ಯವಾದ ಸತ್ಯ. ಇಂತಹ ಎಷ್ಟೋ ಪ್ರಕರಣಗಳು ದಿನಂಪ್ರತಿ ನಡೆಯುತ್ತಲೇ ಇದೆ. ಕೆಲವು ಬೆಳಕಿಗೆ ಬಂದರೆ ಇನ್ನೂ ಎಷ್ಟೋ ಪ್ರಕರಣಗಳು ನೆನೆಗುದಿಗೆಗೆ ಬಿದ್ದಿವೆ. ಆದರೆ ಭ್ರಷ್ಟಾಚಾರ ಅಂತು ನಡೆಯುತ್ತಲೇ ಇದೆ. ಅನಕ್ಷರಸ್ಥರಿಗಾದರೋ ರೀತಿ-ನೀತಿ ನಡವಳಿಕೆಯ ಪಾಠ ತಿಳಿದಿಲ್ಲ ಎನ್ನುವುದರಲ್ಲಿ ಅರ್ಥವಿದೆ. ಆದರೆ ಎಲ್ಲವನ್ನೂ ತಿಳಿದ ಅಕ್ಷರಸ್ಥ, ಒಬ್ಬ ನೌಕರ ಅಥವಾ ಒಬ್ಬ ಅಧಿಕಾರಿ ಭ್ರಷ್ಟನಾದರೆ ಇಡೀ ಸಮಾಜವೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬಹುದು. ಇದು “ಬೇಲಿಯೇ ಎದ್ದು ಹೊಲ ಮೇಯ್ದಂತೆ” ಅಲ್ಲವೇ?
ಭ್ರಷ್ಟತೆಯ ನಾನಾ ಅವತಾರಗಳು ಹೀಗಿವೆ. * ಲಂಚ ಮತ್ತು ಉಡುಗೊರೆಗಳನ್ನು ಅಪೇಕ್ಷಿಸುವುದು ಅಥವಾ ಪಡೆಯುವುದು. *ಸ್ವಜನಪಕ್ಷಪಾತ ಅಂದರೆ ಸಂಬAಧಿಕರು ಅಥವಾ ಸ್ನೇಹಿತರಿಗೆ, ಇತರರ ವೆಚ್ಚದಲ್ಲಿ ವಿಶೇಷ ಸವಲತ್ತುಗಳನ್ನು ಒದಗಿಸುವುದು.
* ವಂಚನೆ: ನಕಲಿ ಬಿಲ್ಗಳು ಅಥವಾ ತಪ್ಪು ಮಾಹಿತಿ ನೀಡುವ ಮೂಲಕ ಆರ್ಥಿಕ ಲಾಭ ಪಡೆಯುವುದು.
* ಸುಲಿಗೆ: ಹಣ ಅಥವಾ ಇತರ ಲಾಭಗಳನ್ನು ಪಡೆಯಲು ಬೆದರಿಕೆ ಅಥವಾ ಬಲವನ್ನು ಬಳಸುವುದು.
* ಮನಿ ಲಾಂಡರಿAಗ್: ಅಕ್ರಮವಾಗಿ ಸಂಪಾದಿಸಿದ ಹಣವನ್ನು ಕಾನೂನುಬದ್ಧ ಮೂಲದಂತೆ ತೋರಿಸಲು ಪ್ರಯತ್ನಿಸುವುದು.
*ದುರುಪಯೋಗ: ಸಾರ್ವಜನಿಕ ನಿಧಿಯ ದುರ್ಬಳಕೆ ಅಥವಾ ಅಧಿಕಾರದ ದುರುಪಯೋಗ. ಹೀಗೆ ಹೇಳುತ್ತಾ ಹೋದರೆ ಭ್ರಷ್ಟಾಚಾರದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಭ್ರಷ್ಟಾಚಾರವು ಸಮಾಜದಲ್ಲಿ ಆಳವಾಗಿ ಬೇರೂರಿರುವುದರಿಂದ ಅದರ ನಿರ್ಮೂಲನೆಯ ಜವಾಬ್ದಾರಿಯನ್ನು ಸಾರ್ವಜನಿಕರ ಅರಿವಿಗೆ ತರುವುದಲ್ಲದೆ ಸರ್ವರು ಭ್ರಷ್ಟಾಚಾರ ನಿರ್ಮೂಲನೆಯ ಸ್ವಯಂ ಘೋಷಣೆಯನ್ನು ಮಾಡುವುದು ಅತ್ಯಗತ್ಯವಾಗಿದೆ. ಭ್ರಷ್ಟಾಚಾರ ನಿರ್ಮೂಲನೆ ನಮ್ಮೆಲ್ಲರ ಹೊಣೆ ಆಗಿರುವುದರಿಂದ ಕೆಲವೊಂದು ಮಾರ್ಗೋಪಾಯಗಳ ಬಗ್ಗೆ ತಿಳಿದುಕೊಳ್ಳುವ. ಭ್ರಷ್ಟಾಚಾರವನ್ನು ನಿಯಂತ್ರಿಸಲು ತಂತ್ರಜ್ಞಾನ ಬಳಕೆ ಒಳ್ಳೆಯದು. ಆನ್ಲೈನ್ ಸಂಬAಧಿ ಕಾರ್ಯಾಚರಣೆಗಳು ಪಾರದರ್ಶಕತೆಯನ್ನು ಉತ್ತೇಜಿಸುತ್ತವೆ. ಇ-ಟೆಂಡರಿAಗ್, ಇ-ಆಡಳಿತ ಮತ್ತು ಸರಳೀಕೃತ ಕಾರ್ಯವಿಧಾನಗಳು, ತಂತ್ರಜ್ಞಾನ ಮತ್ತು ಆಡಳಿತದ ಮೂಲಕ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸುವುದರಿಂದ ಭ್ರಷ್ಟಾಚಾರವನ್ನು ಕಡಿಮೆ ಮಾಡಬಹುದು. ಮೆರಿಟ್ ಆಧಾರಿತ ನೇಮಕಾತಿ ಮತ್ತು ಬಡ್ತಿಗಳು ಭ್ರಷ್ಟಾಚಾರಕ್ಕೆ ಅವಕಾಶಗಳನ್ನು ಕಡಿಮೆ ಮಾಡುತ್ತದೆ.
ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತಾ ನಾಗರಿಕರಿಗೆ ಹೋರಾಡಲು ಪ್ರೇರಣೆ ನೀಡುವಂತಾಗಬೇಕು.
ಮಾಹಿತಿ ಹಕ್ಕು (ಖಖಿI) ಕಾಯ್ದೆಯನ್ನು ಬಳಸಿಕೊಂಡು ಸರ್ಕಾರಿ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ತರುವುದು. ಭ್ರಷ್ಟಾಚಾರದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಯುವಕರು ಕಾರ್ಯಕ್ರಮಗಳನ್ನು ನಡೆಸಬೇಕು. ಭ್ರಷ್ಟಾಚಾರ ಕಾಯ್ದೆಗಳು ಮತ್ತು ಅವುಗಳ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು. ಲಂಚ ನೀಡುವ ಅಥವಾ ಸ್ವೀಕರಿಸುವ ಕ್ರಿಯೆಗಳನ್ನು ಸಕ್ರಿಯವಾಗಿ ಸರ್ವರೂ ವಿರೋಧಿಸಬೇಕು. ಸರ್ಕಾರಿ ಕೆಲಸಗಳಲ್ಲಿ ಭ್ರಷ್ಟಾಚಾರದ ಬಗ್ಗೆ ದೂರು ನೀಡಬೇಕು. ಆದರೆ ಕೆಲವೊಮ್ಮೆ ದೂರು ನೀಡಿದಾಗ್ಯೂ ಸಂಬAಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಉನ್ನತಾಧಿಕಾರಿಗಳ ನಿರ್ಲಕ್ಷö್ಯ ಅಥವಾ ರಾಜಕೀಯ ವ್ಯಕ್ತಿಗಳ ಕೈವಾಡ ದಿಂದ ಭ್ರಷ್ಟಾಚಾರಿ ತಪ್ಪಿಸಿಕೊಳ್ಳುವಂತದ್ದು ನಡೆಯುವುದನ್ನು ತಡೆಯಬೇಕು ಮತ್ತು ಅಕ್ರಮ ಸಂಪತ್ತು ಹೊಂದಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕು.
ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಕುಟುಂಬ, ಶಾಲೆ, ಸ್ನೇಹಿತರು, ನೆರೆಹೊರೆಯವರು ಹೀಗೆ ಸರ್ವರ ಪಾತ್ರ ಮುಖ್ಯವಾಗುತ್ತದೆ: ಯುವಕರು ಸ್ವಯಂ-ಶಿಸ್ತು ಮತ್ತು ನೈತಿಕ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕು. ಭ್ರಷ್ಟಾಚಾರವು ಸಮಾಜದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ ಮತ್ತು ಪ್ರಜಾಪ್ರಭುತ್ವಕ್ಕೆ ಹಾನಿ ಮಾಡುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಲಂಚ ಕೊಡುವುದು ಮತ್ತು ಪಡೆಯುವುದು ಕಾನೂನಿನ ಪ್ರಕಾರ ಅಪರಾಧ ಎಂದು ಸರ್ವರೂ ಅರಿಯಬೇಕು. ಈ ಕಾಯ್ದೆಗಳ ಬಗ್ಗೆ ಇತರರಿಗೆ ತಿಳುವಳಿಕೆ ನೀಡಬೇಕು. ಭ್ರಷ್ಟಾಚಾರ ನಿರ್ಮೂಲನೆಗಾಗಿ ಒಗ್ಗಟ್ಟಾಗಿ ಕೆಲಸ ಮಾಡಲು ತಮ್ಮನ್ನು ಸಂಘಟಿತಗೊಳಿಸಬೇಕು. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಒಗ್ಗೂಡಿ, ವಿಭಿನ್ನ ರಾಜಕೀಯ ಪಿತೂರಿಗಳಿಂದ ಪ್ರಭಾವಿತರಾಗದೆ, ರಾಷ್ಟçದ ಭವಿಷ್ಯದ ಮೇಲೆ ಗಮನ ಕೇಂದ್ರೀಕರಿಸಬೇಕು. ಭ್ರಷ್ಟಾಚಾರವನ್ನು ತಡೆಗಟ್ಟಲು ನಿರ್ದಿಷ್ಟ ಭ್ರಷ್ಟಾಚಾರ-ವಿರೋಧಿ ಶಾಸನಗಳನ್ನು ಜಾರಿಗೊಳಿಸುವಲ್ಲಿ ಕಟ್ಟು ನಿಟ್ಟಿನ ಕ್ರಮವಹಿಸಬೇಕು. ಭ್ರಷ್ಟಾಚಾರವನ್ನು ತನಿಖೆ ಮಾಡಲು ಮತ್ತು ಶಿಕ್ಷಿಸಲು ಲೋಕಾಯುಕ್ತ ಅಥವಾ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು ಬಲಪಡಿಸುವುದು. ಭ್ರಷ್ಟಾಚಾರದಲ್ಲಿ ತೊಡಗುವವರಿಗೆ ದಂಡವನ್ನು ಹೆಚ್ಚಿಸುವ ಮೂಲಕ ಅದನ್ನು ತಡೆಯುವುದು. ಅಲ್ಲದೆ ಭ್ರಷ್ಟಾಚಾರಿಗೆ ಕಠಿಣ ಶಿಕ್ಷೆ ನೀಡಬೇಕು. ಅದನ್ನು ಕಂಡಾದರೂ ತಪ್ಪಿತಸ್ಥ ಭಯಭೀತನಾಗಬೇಕು. ಭ್ರಷ್ಟಾಚಾರದ ನಕಾರಾತ್ಮಕ ಪರಿಣಾಮಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು ಮತ್ತು ಸಮಗ್ರತೆಯ ಮೌಲ್ಯಗಳನ್ನು ಉತ್ತೇಜಿಸುವುದು.
ನಾಗರಿಕರಿಗೆ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಲು ಮತ್ತು ದೂರು ಸಲ್ಲಿಸಲು ಪ್ರೋತ್ಸಾಹಿಸುವುದು. ಭ್ರಷ್ಟಾಚಾರದ ತಡೆಗೆ ಸಂಘ ಸಂಸ್ಥೆ, ಕಛೇರಿಗಳಲ್ಲಿ ಸಿಸಿಟಿವಿಗಳ ಅಳವಡಿಕೆಯಾಗಬೇಕು. ಹೀಗೆ ಹತ್ತು ಹಲವು ಮಾರ್ಗಗಳಿದ್ದಾಗ್ಯೂ” ನಾನೂ ಸ್ವಚ್ಛ, ನನ್ನ ಸುತ್ತಮುತ್ತಲೂ ಸ್ವಚ್ಛ” ಎಂಬಾ ಮನೋಭಾವವನ್ನು ಸರ್ವರೂ ತಾಳಿದರೆ ಭ್ರಷ್ಟಾಚಾರ ನಿಯಂತ್ರಣ ಸಲೀಸಾಗಬಹುದು.
ಜೊತೆಗೆ ಯುವ ಜನಾಂಗ ಈ ಭ್ರಷ್ಟಾಚಾರವನ್ನು ವಿರೋಧಿಸಲು ಫೇಸ್ಬುಕ್, ಇನ್ಸಾ÷್ಟçಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪರಿಣಾಮಕಾರಿ ಸಂದೇಶಗಳನ್ನು ಹರಡಿ ಜಾಗೃತಿ ಮೂಡಿಸಲು ಕೈಜೋಡಿಸಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಭ್ರಷ್ಟ ವ್ಯಕ್ತಿ, ಭ್ರಷ್ಟ ವ್ಯಕ್ತಿತ್ವ, ಭ್ರಷ್ಟ ರಾಜಕಾರಣ, ಭ್ರಷ್ಟ ಅಧಿಕಾರಿ, ಭ್ರಷ್ಟ ನೌಕರ, ಭ್ರಷ್ಟ ಆಡಳಿತ ಮುಂತಾದ ಸಾಮಾಜಿಕ ಅಭಿವೃದ್ಧಿಗೆ ಕಂಟಕ ಪ್ರಾಯವಾಗಿರುವ ವ್ಯವಸ್ಥೆಯಿಂದ ಮುಕ್ತಿ ಪಡೆಯಲು ಸ್ವಯಂಪ್ರೇರಿತರಾಗೋಣ. ಭ್ರಷ್ಟಾಚಾರ ಮುಕ್ತ ಭಾರತವನ್ನು ನಿರ್ಮಿಸಲು ಸರ್ವರೂ ಕೈಜೋಡಿಸೋಣವೇ ?
-ಮೀರ ಸುಮನ್ ಕ್ಯಾಸ್ತಲಿನ್
ಶಿಕ್ಷಕಿ, ಸರಕಾರಿ ಪ್ರೌಢಶಾಲೆ,
ಕಡಕೊಳ-ಮೈಸೂರು.