ಮಡಿಕೇರಿ, ಡಿ. ೮: ಬೆಳಕು ಸಾಹಿತ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಸಂಸ್ಥೆಯವರ ‘ಬೆಳಕನ ಬುತ್ತಿ' ಕವನ ಸಂಕಲದಲ್ಲಿ ಪ್ರಕಟವಾಗಿದ್ದ ಕೆ. ಶೋಭಾ ರಕ್ಷಿತ್ ಅವರ ‘ಸೋದರ ಸಂಬAಧ' ಕವನ ದ.ರಾ. ಬೇಂದ್ರೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ ‘ಅಕ್ಕಮಹಾದೇವಿ ಸಭಾಂಗಣದಲ್ಲಿ ಬೆಳಕು ಸಂಸ್ಥೆಯ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೆರವೇರಿದ ೧೨೦ನೇ ಕಾರ್ಯಕ್ರಮದಲ್ಲಿ ಕೆ. ಶೋಭಾ ರಕ್ಷಿತ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.