ಸೋಮವಾರಪೇಟೆ, ಡಿ. ೮: ಸ್ಥಳೀಯ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಕಾನನವಾಸಿ ಇಕೋ ಕ್ಲಬ್ ವತಿಯಿಂದ, ಚೌಡ್ಲು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಪಟ್ಟಣದ ಮಡಿಕೇರಿ ರಸ್ತೆ, ಶಾಂತಳ್ಳಿ ರಸ್ತೆಯಲ್ಲಿ ಸ್ವಚ್ಛತಾ ಆಂದೋಲನ ನಡೆಯಿತು.
ಸ್ವಚ್ಚ ಕೊಡಗು-ಸುಂದರ ಕೊಡಗು ಎಂಬ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳು ರಸ್ತೆಯಲ್ಲಿ ಜಾಥಾ ನಡೆಸಿದರಲ್ಲದೇ, ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸಿ, ಸಾರ್ವಜನಿಕರಲ್ಲಿ ಸ್ವಚ್ಚತೆಯ ಅರಿವು ಮೂಡಿಸಿದರು.
ಕಕ್ಕೆಹೊಳೆ ಜಂಕ್ಷನ್ನ ಬಸವೇಶ್ವರ ವೃತ್ತ, ವಿವೇಕಾನಂದ ವೃತ್ತ, ಆಲೇಕಟ್ಟೆ ರಸ್ತೆ, ಗೌಡ ಸಮಾಜ ರಸ್ತೆ, ಆಂಜನೇಯ ದೇವಾಲಯ ರಸ್ತೆಗಳಲ್ಲಿ ಶ್ರಮದಾನ ನಡೆಸಿದರು.
ಜಾಥಾದಲ್ಲಿ ಸ್ವಾಮಿ ವಿವೇಕಾನಂದ ಎಜುಕೇಷನಲ್ ಟ್ರಸ್ಟ್ನ ಅಧ್ಯಕ್ಷ ಚಂದ್ರಾಜು, ಕಾರ್ಯದರ್ಶಿ ವೆಂಕಟೇಶ್, ಶಾಲಾ ಮುಖ್ಯೋಪಾಧ್ಯಾಯಿನಿ ಎಂ.ಜೆ. ಅಣ್ಣಮ್ಮ, ಚೌಡ್ಲು ಗ್ರಾ.ಪಂ. ಸದಸ್ಯ ಮಹೇಶ್ ತಿಮ್ಮಯ್ಯ, ಶಿಕ್ಷಕರುಗಳಾದ ಲತಾ, ಪೂಜಾ, ರತಿ, ಪ್ರಮೀಳಾ, ಭಾರತಿ, ಇಕೋ ಕ್ಲಬ್ ಸಂಚಾಲಕ ಯೋಗೇಶ್ ಅವರುಗಳು ಭಾಗವಹಿಸಿದ್ದರು.