ಮಡಿಕೇರಿ, ಡಿ. ೯ : ಮುಂಬರಲಿರುವ ಏಷ್ಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಮ್ಯಾರಥಾನ್‌ನಲ್ಲಿ ಭಾರತ ವನ್ನು ಪ್ರತಿನಿಧಿಸಲು ಕೊಡಗಿನ ಯುವಕ ಅಪ್ಪಚಂಗಡ ಬಿ. ಬೆಳ್ಯಪ್ಪ ಅವರು ಆಯ್ಕೆಯಾಗಿದ್ದಾರೆ. ಸ್ಪೇನ್‌ನಲ್ಲಿ ಜರುಗಿದ ಅಂತರರಾಷ್ಟಿçÃಯ ಮಟ್ಟದ ವೆಲೆನ್ಸಿಯಾ ಮ್ಯಾರಥಾನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಬೆಳ್ಯಪ್ಪ ೪೪೨ ಕಿ.ಮೀ. ಅಂತರವನ್ನು ೨. ಗಂಟೆ ೧೪ ನಿಮಿಷ ೦೭ ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ. ಇದು ಅವರ ವೃತ್ತಿ ಜೀವನದಲ್ಲಿನ ಅತ್ಯುತ್ತಮ ಸಾಧನೆಯೂ ಆಗಿದೆ. ಸ್ಪೇನ್‌ನಲ್ಲಿ ನಡೆದ ಈ ಸ್ಪರ್ಧೆ ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತಾ ಸ್ಪರ್ಧೆಯೂ ಆಗಿದ್ದು ಇದಕ್ಕೆ ನಿಗದಿ ಮಾಡಲಾಗಿದ್ದ ಸಮಯವನ್ನು ಇವರು ಸರಿಗಟ್ಟುವ ಮೂಲಕ ಈ ಕ್ರೀಡಾಕೂಟಕ್ಕೆ ಭಾರತವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾರೆ. ೨೦೨೬ರ ಜುಲೈ ಹಾಗೂ ಸೆಪ್ಟೆಂಬರ್‌ನಲ್ಲಿ ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟ ಜರುಗಲಿದೆ. ಇದೀಗ ಬೆಳ್ಯಪ್ಪ ಭಾರತದ ನಾಲ್ಕನೇ ವೇಗದ ಮ್ಯಾರಥಾನ್ ಓಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಈ ಬಗ್ಗೆ `ಶಕ್ತಿ’ಯೊಂದಿಗೆ ಪ್ರತಿಕ್ರಿಯಿ ಸಿರುವ ಬೆಳ್ಯಪ್ಪ ಅವರು ಇದೀಗ ತಾವು ೧೯೭೮ರಲ್ಲಿ ಮ್ಯಾರಥಾನ್‌ನಲ್ಲಿ ಭಾರತದ ಶಿವಾಂತ್ ಸಿಂಗ್ ಅವರು ನಿರ್ಮಿಸಿರುವ ೨ ಗಂಟೆ ೧೨ ನಿಮಿಷದ ದಾಖಲೆಯನ್ನು ಮುರಿಯುವ ನಿಟ್ಟಿನಲ್ಲಿ ಗುರಿ ಹೊಂದಿರುವುದಾಗಿ ಹೇಳಿದ್ದಾರೆ. ಈ ಹಿಂದೆಯೂ ಹಲವಾರು ಮ್ಯಾರಥಾನ್ ಸ್ಪರ್ಧೆಯಲ್ಲಿ ಸಾಧನೆ ತೋರಿರುವ ಇವರು ಜಿಲ್ಲೆಯ ಟಿ. ಶೆಟ್ಟಿಗೇರಿಯವರಾದ ಅಪ್ಪಚಂಗಡ ಬೋಪಯ್ಯ ಹಾಗೂ ರೋಜಾ (ತಾಮನೆ ಪೋರಂಗಡ) ದಂಪ ತಿಯ ಪುತ್ರರಾಗಿದ್ದು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

-ಶಶಿ