ದುಗ್ಗಳ ಸದಾನಂದ
ನಾಪೋಕ್ಲು, ಡಿ. ೯ : ದಕ್ಷಿಣದ ಪ್ರಯಾಗ ಎನಿಸಿರುವ ಭಾಗಮಂಡಲದ ಭಗಂಡೇಶ್ವರ ದೇವಾಲಯದ ಬಳಿ ಅಂಗಡಿ ಮಳಿಗೆಗಳು ಹಾಗೂ ವಸತಿಗೃಹ ಸಮುಚ್ಚಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದು ಕಾಮಗಾರಿಯನ್ನು ಕೂಡಲೆ ಸ್ಥಗಿತಗೊಳಿಸಬೇಕೆಂದು ಒತ್ತಾಯಪಡಿಸಿದ್ದಾರೆ..
ದೇವಾಲಯದ ಸಮೀಪ ಕನ್ನಿಕಾ ನದಿ ಹರಿಯುತ್ತಿದ್ದು ಇದು ಪವಿತ್ರ ಕಾವೇರಿ ನದಿಯನ್ನು ಸಂಗಮಿಸಿ ತ್ರಿವೇಣಿ ಸಂಗಮವಾಗಿದೆ. ತ್ರಿವೇಣಿ ಸಂಗಮ ಭಾಗಮಂಡಲದ ಪವಿತ್ರ ಕ್ಷೇತ್ರವಾಗಿದ್ದು ಭಕ್ತಾದಿಗಳಿಗೆ ಧಾರ್ಮಿಕ ತಾಣವಾಗಿ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ. ಇದೀಗ ಪವಿತ್ರ ಕ್ಷೇತ್ರದಲ್ಲಿ ಕಟ್ಟಡ ಸಮುಚ್ಚಯ ನಿರ್ಮಾಣಗೊಳ್ಳುತ್ತಿದ್ದು ಇದರಿಂದ ದೇವಾಲಯದ ಪವಿತ್ರತೆಗೆ ಧಕ್ಕೆಯಾಗಲಿದ್ದು ದೇವಾಲಯದ ಸೌಂದರ್ಯ ಹಾಳಾಗುವುದರೊಂದಿಗೆ ಪರಿಸರ ಮಾಲಿನ್ಯಗೊಳ್ಳಲಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಎದುರಾಗಿದೆ.
ಸಾರ್ವಜನಿಕರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಭಗಂಡೇಶ್ವರ, ತಲಕಾವೇರಿ ವ್ಯವಸ್ಥಾಪನಾ ಸಮಿತಿಯ ಮಾಜಿ ಅದ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಮಾತನಾಡಿ, ದೇವಾಲಯಕ್ಕೆ ಹೊಂದಿಕೊAಡAತೆ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಸಮುಚ್ಚಯದಿಂದ ೧೦-೧೫ ಮೀಟರ್ ದೂರದಲ್ಲಿ ಕನ್ನಿಕಾ ನದಿ ಹರಿಯುತ್ತಿದ್ದು ಗಲೀಜು ನೀರು ಕನ್ನಿಕಾ ನದಿಯ ಪವಿತ್ರತೆಗೆ ಧಕ್ಕೆ ತರಲಿದೆ; ಕಟ್ಟಡಗಳ ನಿರ್ಮಾಣದಿಂದ ದೇವಸ್ಥಾನದ ಸೌಂದರ್ಯವು ಕುಂಠಿತವಾಗಲಿದೆ .ಈ ಹಿಂದೆ ಇದ್ದ ಆಡಳಿತ ಸರಕಾರ ಉದ್ಯಾನವನ್ನು ನಿರ್ಮಿಸಿತ್ತು ಎಂದ ಅವರು ದೇವಸ್ಥಾನದ ಮುಂಭಾಗ ಓಡಾಡಲು ಸ್ಥಳವಿಲ್ಲದಂತಾಗಿದೆ. ಈ ಕೆಲಸವನ್ನು ಜಿಲ್ಲಾಧಿಕಾರಿಗಳು ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿಯಿದ್ದು ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿ ಜನರ ಅಭಿಪ್ರಾಯ ಸಂಗ್ರಹಿಸಿ ಕಾಮಗಾರಿ ಕೈಗೊಳ್ಳಬೇಕಿದೆ ಎಂದರು.
ಭಾಗಮAಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಮಾತನಾಡಿ, ಪಂಚಾಯಿತಿಯ ಗಮನಕ್ಕೆ ಬಾರದೆ ಕಾಮಗಾರಿ ಮಾಡಲಾಗುತ್ತಿದೆ, ಕಟ್ಟಡಗಳ ನಿರ್ಮಾಣದಿಂದ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಆಡಳಿತ ಅಧಿಕಾರಿ ಅವರನ್ನು ಈ ಬಗ್ಗೆ ಮಾಹಿತಿ ಕೋರಿದಾಗ ಸೂಕ್ತ ಉತ್ತರ ಲಭ್ಯವಾಗಿಲ್ಲ. ಎಲ್ಲವನ್ನು ಜಿಲ್ಲಾಧಿಕಾರಿಗಳೇ ನಿರ್ವಹಿಸುತ್ತಾರೆ ಎಂದಿದ್ದಾರೆ. ಈ ಹಿಂದೆ ದೇವಾಲಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ರಾಶಿ ಪ್ರಶ್ನೆಗಳನ್ನು ಇಟ್ಟು ಜ್ಯೋತಿಷ್ಯ ಮೂಲಕ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿತ್ತು. ಅದರಂತೆ ಸಾಧಕ ಬಾಧಕಗಳ ಬಗ್ಗೆ ಉತ್ತರ ಪಡೆದು ಮುಂದುವರೆಯಬೇಕು ಆದಕಾರಣ ಕೂಡಲೇ.ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು..
ಹಿರಿಯ ನಾಗರಿಕ ಕುದುಕುಳಿ ಭರತ್ ಮಾತನಾಡಿ, ಭಗಂಡೇಶ್ವರ ದೇವಾಲಯ ಧಾರ್ಮಿಕ ತಾಣವಾಗಿದೆ, ಅಂಗಡಿ ಮಳಿಗೆ ಹಾಗೂ ವಸತಿ ಗೃಹಗಳ ನಿರ್ಮಾಣದಿಂದ ಮಳೆಗಾಲದಲ್ಲಿ ಪ್ರವಾಹಕ್ಕೊಳಗಾಗುವ ಈ ಪ್ರದೇಶ ಮತ್ತು ಪರಿಸರ ಹಾಳಾಗಲಿದೆ. ಭಕ್ತರಿಗೆ ತೊಂದರೆ ಆಗಬಹುದು. ಕಟ್ಟಡ ನಿರ್ಮಾಣದ ವಿರುದ್ಧ ಜಿಲ್ಲೆಯ ಜನತೆ ಒಂದಾಗಿ ಹೋರಾಟ ನಡೆಸುತ್ತೇವೆ; ತ್ರಿವೇಣಿ ಸಂಗಮ ಭಾಗಮಂಡಲದ ಪವಿತ್ರ ಕ್ಷೇತ್ರವಾಗಿದ್ದು ಭಕ್ತಾದಿಗಳಿಗೆ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ. ಇದೀಗ ಪವಿತ್ರ ಕ್ಷೇತ್ರದಲ್ಲಿ ಕಟ್ಟಡ ಸಮುಚ್ಚಯ ನಿರ್ಮಾಣಗೊಳ್ಳುತ್ತಿದ್ದು ಇದರಿಂದ ದೇವಾಲಯದ ಪವಿತ್ರತೆಗೆ ಧಕ್ಕೆ ಬರಲಿದೆ ಎಂದು ಹೇಳಿದರು..
ಈ ಸಂದರ್ಭದಲ್ಲಿ ಭಾಗಮಂಡಲ ಸಹಕಾರಿ ಸಂಘದ (ವಿಎಸ್‌ಎಸ್‌ಸ್‌ಎನ್) ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಜೋಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜೀವ್, ಪಟ್ಟಮಾಡ ಸುಧೀರ್ ಕುಮಾರ್, ಅಮೆ ಹರೀಶ್, ನಿಡ್ಯಮಲೆ ರವಿ, ಕುದುಪಜೆ ಕುಲದೀಪ್, ಮೂಲೆಮಜಲು ಪೂಣಚ್ಚ ಇನ್ನಿತರರು ಹಾಜರಿದ್ದರು.