ಕೋವರ್ ಕೊಲ್ಲಿ ಇಂದ್ರೇಶ್
ನವದೆಹಲಿ, ಡಿ. ೯ : ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ಸಹಕಾರಿ ಸಂಘಗಳು ಸರ್ಫೇಸಿ (Seಛಿuಡಿiಣisಚಿಣioಟಿ ಚಿಟಿಜ ಖeಛಿoಟಿsಣಡಿuಛಿಣioಟಿ oಜಿ ಈiಟಿಚಿಟಿಛಿiಚಿಟ ಂsseಣs ಚಿಟಿಜ ಇಟಿಜಿoಡಿಛಿemeಟಿಣ oಜಿ Seಛಿuಡಿiಣಥಿ Iಟಿಣeಡಿesಣ ಂಛಿಣ, ೨೦೦೨) ಕಾಯ್ದೆಯಡಿಯಲ್ಲಿ ಸುಸ್ತಿದಾರರಾಗಿರುವ ಕಾಫಿ ಬೆಳೆಗಾರರ ತೋಟಗಳನ್ನು ಹರಾಜು ಹಾಕಲು ಮುಂದಾಗಿದ್ದರೆ ಅಂತಹ ಕ್ರಮವನ್ನು ಕೇಂದ್ರ ಸರ್ಕಾರವು ತಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿಂದೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿನ ಆಧಾರದಲ್ಲಿ ಸರ್ಫೇಸಿ ಕಾಯ್ದೆಯ ಸೆಕ್ಷನ್ ೩೧(i) ಅಡಿಯಲ್ಲಿ ವಿನಾಯಿತಿ ನೀಡುವ ಉದ್ದೇಶಕ್ಕಾಗಿ ಕಾಫಿ ತೋಟಗಳನ್ನು ಕೃಷಿ ಭೂಮಿ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ವಾಣಿಜ್ಯ ಬೆಳೆಗಳಾದ ಕಾಫಿ, ಚಹಾ, ರಬ್ಬರ್, ಮೆಣಸು ಮತ್ತು ಏಲಕ್ಕಿಯಂತಹ ತೋಟಗಾರಿಕಾ ಬೆಳೆಗಳು ಕಾಯ್ದೆಯಡಿಯಲ್ಲಿ ಹರಾಜು ಪ್ರಕ್ರಿಯೆಯಿಂದ ರಕ್ಷಣೆ ಪಡೆಯಲು ಕೃಷಿ ಭೂಮಿಯ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಇದನ್ನೇ ಆಧಾರವನ್ನಾಗಿಟ್ಟುಕೊಂಡಿರುವ ಕೇಂದ್ರ ಸರ್ಕಾರ ಸರ್ಫೇಸಿ ಕಾಯ್ದೆ ಅಡಿಯಲ್ಲಿ ಕಾಫಿ ತೋಟಗಳನ್ನು ಕೃಷಿ ಭೂಮಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಮತ್ತು ಬಾಧಿತ ಸಾಲಗಾರರು ಸಾಲ ವಸೂಲಾತಿ ನ್ಯಾಯಮಂಡಳಿಗಳ ಮೂಲಕ ಮಾತ್ರ ಪರಿಹಾರ ಪಡೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದ ಈ ನಿಲುವಿನಿಂದಾಗಿ ರಾಜ್ಯದ ಸಾವಿರಾರು ತೋಟಗಳ ಮಾಲೀಕರು ಆಸ್ತಿಯನ್ನು ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಔಪಚಾರಿಕ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಆರ್ಥಿಕ ಸ್ವತ್ತುಗಳ ಭದ್ರತೆ ಮತ್ತು ಪುನರ್‌ರಚನೆ ಹಾಗೂ ಭದ್ರತಾ ಕ್ರಮದ ಜಾರಿ (SಂಖಈAಇSI) ಕಾಯ್ದೆಯಡಿ ವಸೂಲಾತಿ ಕ್ರಮವು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ವಾಣಿಜ್ಯಿಕ ನಿರ್ಧಾರವಾಗಿದ್ದು, ಕೇಂದ್ರವು ಅಂತಹ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಸ್ಪಷ್ಟವಾಗಿ ಹೇಳಿದರು.ಅಲ್ಲದೆ ಈ ಸಂಬAದ ಬ್ಯಾಂಕುಗಳು ಆರಂಭಿಸಿದ ಸಾಲ ವಸೂಲಾತಿ ಪ್ರಕ್ರಿಯೆಗೆ ತಡೆ ಕೋರಿ ಬೆಳೆಗಾರರು ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈ ಕೋರ್ಟ್ ೨೦೨೧ ರಲ್ಲಿಯೇ ತಿರಸ್ಕರಿಸಿರುವುದನ್ನೂ ಸರ್ಕಾರ ಪರಿಗಣಿಸಿದೆ. ಈ ಕುರಿತ ಇನ್ನೂ ಎರಡು ಪ್ರಕರಣಗಳು ಹೈ ಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಇದ್ದು ಬ್ಯಾಂಕುಗಳು ಹರಾಜು ಪ್ರಕ್ರಿಯೆ ಮುಂದುವರಿಸಿವೆ.
ಮಾರುಕಟ್ಟೆಯ ಏರಿಳಿತ ಮತ್ತು ಹೆಚ್ಚುತ್ತಿರುವ ತೋಟಗಳ ನಿರ್ವಹಣಾ ವೆಚ್ಚಗಳಿಂದಾಗಿ ಮರುಪಾವತಿ ವಿಳಂಬವಾಗಿರುವುದರಿAದ ಆನ್‌ಲೈನ್ ಹರಾಜನ್ನು ನಿಲ್ಲಿಸಬೇಕೆಂಬ ಬೆಳೆಗಾರರ ಬೇಡಿಕೆಗಳಿಗೆ, ಕೇಂದ್ರವು ತೋಟಗಳ ಸಾಲ ವಸೂಲಾತಿ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿದೆ. ಬ್ಯಾಂಕುಗಳು ಹರಾಜಿಗೆ ಇಟ್ಟಿರುವ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಕೆಲವು ಕಾಫಿ ತೋಟಗಳನ್ನು ದುಬೈನಲ್ಲಿರುವ ವ್ಯಾಪಾರಿಗಳು ಆನ್‌ಲೈನ್‌ನಲ್ಲಿ ಹರಾಜು ಮೂಲಕ ಖರೀದಿಸಲು ಪ್ರಯತ್ನಿಸುತ್ತಿದ್ದು ಕಾನೂನಿನ ದುರ್ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ, ಕಾಫಿ ಮಂಡಳಿಗೆ ಅಂತಹ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದೆ. ತೊಂದರೆಗೀಡಾದ ಬೆಳೆಗಾರರಿಗೆ ಇರುವ ಏಕೈಕ ಪರಿಹಾರವೆಂದರೆ SಂಖಈAಇSI ಕಾಯ್ದೆಯ ಸೆಕ್ಷನ್ ೧೭ರ ಅಡಿಯಲ್ಲಿ ಸಾಲ ವಸೂಲಾತಿ ನ್ಯಾಯಮಂಡಳಿಯನ್ನು ಸಂಪರ್ಕಿಸುವುದು ಎಂದು ಕೇಂದ್ರವು ಗಮನಸೆಳೆದಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್. ಶಿವಣ್ಣ ಅವರು, ಕೇಂದ್ರದ ಈ ನಿಲುವು ಬೆಳೆಗಾರರಿಗೆ ನಿರಾಸೆ ತಂದಿದೆ ಎಂದು ಹೇಳಿದರು. ಈ ತಿಂಗಳ ಅಂತ್ಯದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದು ಅವರನ್ನು ಕಾಫಿ ಬೆಳೆಗಾರರು ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಹೇಳಿದರು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ಬೆಳೆಗಾರರ ರಕ್ಷಣೆಗೆ ಬರಲೇಬೇಕಾದ ಅನಿವಾರ್ಯತೆ ಇದ್ದು ಬೆಳೆಗಾರರ ಹಿತ ಕಾಪಾಡಬೇಕಿದೆ ಎಂದು ಹೇಳಿದರು.