ಭಾಗಮಂಡಲ, ಡಿ. ೧೦: ಇಲ್ಲಿನ ಚೇರಂಗಾಲ ಗ್ರಾಮದ ಶ್ರೀ ಈಶ್ವರ ಭಗವತಿ ದೇವಾಲಯದಲ್ಲಿ ವಾರ್ಷಿಕ ಪೂಜೆ ನಡೆಯಿತು.

ಈ ಸಂದರ್ಭ ಗ್ರಾಮಸ್ಥರಿಂದ ಕೋಲಾಟ ನಡೆಯಿತು. ಬಳಿಕ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯವು ರವಿ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಕೋಲಾಟವು ತಕ್ಕರಾದ ಸಿರಕಜೆ ಸುಂದರ ಅವರ ನೇತೃತ್ವದಲ್ಲಿ ನಡೆದು ಬಳಿಕ ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ಸದಸ್ಯರಿಂದ ಅನ್ನಸಂತರ್ಪಣೆ ನಡೆಯಿತು.

ದೇವಾಲಯದ ಕಾರ್ಯದರ್ಶಿ ಮತ್ತಾರಿ ರಾಜ, ಗ್ರಾಮ ಪಂಚಾಯಿತಿ ಸದಸ್ಯರಾದ ಸಿರಕಜೆ ನಾಗೇಶ್, ಸಂಘದ ಸದಸ್ಯರಾದ ಸಿರಕಜೆ ಟಿ. ಭವನ್ ಕುಮಾರ್, ಕುಂಬನ ರವೀಂದ್ರ, ಮೂಲೆಮಜುಲು ಸುದಿ, ಪರಿವಾರ ಸಂತೋಷ್. ಸಿರಕಜೆ ತನುರಾಜ್, ಸಿರಕಜೆ ಪವನ್, ಪೆರುಬಾಯಿ ಅನಿಲ್ ಮತ್ತಿತರರು ಪಾಲ್ಗೊಂಡಿದ್ದರು.