ಚೆಯ್ಯಂಡಾಣೆ, ಡಿ. ೧೦: ಚೆಯ್ಯಂಡಾಣೆ ಪ್ರೀಮಿಯರ್ ಲೀಗ್ (ಸಿಪಿಎಲ್ )ದ್ವಿತೀಯ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ೩ ದಿನಗಳ ಕಾಲ ನಡೆಯಿತು. ಪಂದ್ಯಾಟವನ್ನು ದಾನಿಗಳಾದ ನಡಿಕೇರಿಯಂಡ ದಿಲೀಪ್ ಉದ್ಘಾಟಿಸಿದರು.

೮ ತಂಡಗಳ ಜಿದ್ದಾಜಿದ್ದಿನಲ್ಲಿ ಅರ್ ಸಿಬಿ ಹಾಗೂ ಗ್ಲೋಬಲ್ ಪೆರಟಿಸ್ ತಂಡಗಳು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡವು. ಫೈನಲ್ ಪಂದ್ಯದಲ್ಲಿ ಗ್ಲೋಬಲ್ ಪೆರಟಿಸ್ ತಂಡವನ್ನು ಸೋಲಿಸುವ ಮೂಲಕ ಅರ್‌ಸಿಬಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರು. ಗ್ಲೋಬಲ್ ಪೆರಟಿಸ್ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.

ಚಾAಪಿಯನ್ ಅರ್ ಸಿಬಿ ತಂಡಕ್ಕೆ ೧ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ,ರನ್ನರ್ಸ್ ಗ್ಲೋಬಲ್ ಪೆರಟಿಸ್ ತಂಡಕ್ಕೆ ೫೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ,ತೃತೀಯ ಸ್ಥಾನ ಪಡೆದ ರಾಯಲ್ ಬ್ರದರ್ಸ್ ತಂಡಕ್ಕೆ ಹಾಗೂ ನಾಲ್ಕನೇ ಸ್ಥಾನ ಪಡೆದ ಹಾರಿಕಾ ಕ್ರಿಕೆಟರ್ಸ್ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಲಾಯಿತು.

ವೈಯಕ್ತಿಕ ಬಹುಮಾನ

ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅರ್‌ಸಿಬಿ ತಂಡದ ಆಟಗಾರ ಚಾಣಕ್ಯ, ಸರಣಿ ಶ್ರೇಷ್ಠ ಪ್ರಶಸ್ತಿ,ಉತ್ತಮ ಬ್ಯಾಟ್ಸ್ಮ್ಯಾನ್ ಪ್ರಶಸ್ತಿ ಹಾಗೂ ಹೆಚ್ಚು ಸಿಕ್ಸ್ ಬಾರಿಸಿದ ಪ್ರಶಸ್ತಿಯನ್ನು ಗ್ಲೋಬಲ್ ಪೆರಟಿಸ್ ತಂಡದ ಅಜಯ್,ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಅರ್‌ಸಿಬಿ ತಂಡದ ನೌಶಾದ್ ಕೆ.ಕೆ, ಎನರ್ಜಿಂಗ್ ಪ್ಲೇಯರ್ ಆಗಿ ರಾಯಲ್ ಬ್ರದರ್ಸ್ ತಂಡದ ಅಲೋಕ್,ಬೆಸ್ಟ್ ಫೀಲ್ಡರ್ ಆಗಿ ಗ್ಲೋಬಲ್ ಪೆರಟಿಸ್ ತಂಡದ ತಸ್ಲೀಮ್ ಪ್ರಶಸ್ತಿ ಪಡೆದುಕೊಂಡರು.ಪAದ್ಯಾಟದ ತೀರ್ಪುಗಾರರಾಗಿ ಮಹೇಶ್ ಹಾಗೂ ತಂಡ ಕಾರ್ಯ ನಿರ್ವಹಿಸಿದರೆ, ಸ್ಕೋರರ್ ಆಗಿ ಗಗನ್, ಮನೋಜ್, ರಾಹುಲ್, ಗಿರೀಶ್, ವೀಕ್ಷಕ ವಿವರಣೆಯನ್ನು ಬಿಪಿನ್,ಕಾಳಪ್ಪ, ಸಂದೇಶ್ ರೈ, ಅರ್ಷಾದ್ ನಡೆಸಿಕೊಟ್ಟರು.

ಸಿಪಿಎಲ್ ಅಧ್ಯಕ್ಷ ಕೋಳಿಮಾಡು ಬಿಪಿನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಚೆಯ್ಯಂಡಾಣೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ, ಗ್ರಾ.ಪಂ.ಸದಸ್ಯೆ ಪುಷ್ಪ, ಪೋಕ್ಕುಳಂಡ್ರ ದನೋಜ್ ಕುಮಾರ್,ಕುಮ್ಮಂಡ ರಾಜೇಶ್, ಸಿಪಿಎಲ್ ನ ಉಪಾಧ್ಯಕ್ಷ ಗಗನ್ ಸಜನ್ ನಂಜುAಡ, ಅಲೋಕ್, ಅಜಿತ್, ಸುಜನ್,ಯೋಶಿಕ್, ಮನೋಜ್ ಶೆಟ್ಟಿ, ರವಿ, ಸಿಪಿಎಲ್ ಆಡಳಿತ ಮಂಡಳಿಯ ಪದಾಧಿಕಾರಿಗಳು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.