ಪೊನ್ನAಪೇಟೆ, ಡಿ. ೧೦ : ಗೋಣಿಕೊಪ್ಪಲು ಕಾವೇರಿ ಕಾಲೇಜು ಎನ್. ಎಸ್. ಎಸ್, ಯೂತ್ ರೆಡ್ ಕ್ರಾಸ್, ಎನ್ ಸಿ ಸಿ, ರೋವರ್ಸ್ ರೇಂಜರ್ಸ್, ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಹಾಗೂ ಪೊನ್ನಂಪೇಟೆ ವಿಂಗ್ ರೆಡ್ ಕ್ರಾಸ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ಮತ್ತು ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.
ಗೋಣಿಕೊಪ್ಪಲು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಹಾಗೂ ಪೊನ್ನಂಪೇಟೆ ವಿಂಗ್ರೆಡ್ ಕ್ರಾಸ್ ಸೊಸೈಟಿ ಸಭಾಪತಿ ಬಿ.ಎನ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ರಾಷ್ಟಿçÃಯ ಅಧ್ಯಕ್ಷ ಎಂ. ಆರ್. ಜಯೇಶ ಹೂಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕೆ.ಪಿ. ಕರುಂಬಯ್ಯ ಮಾತನಾಡಿ, ಮನುಷ್ಯನ ದೇಹದಲ್ಲಿ ೫ ರಿಂದ ೬ ಲೀಟರ್ ರಕ್ತವಿರುತ್ತದೆ. ಸಾರ್ವಜನಿಕರಿಗೆ ರಕ್ತದಾನದ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಕೆಲವರು ಭಯದಿಂದ ರಕ್ತದಾನ ಮಾಡಲು ಹಿಂಜರಿಯುತ್ತಾರೆ. ೩೫೦ ಎಂ.ಎಲ್ ರಕ್ತವನ್ನು ದಾನ ಮಾಡಿದರೆ ಕೇವಲ ೨೪ ಗಂಟೆಯಲ್ಲಿ ಆ ರಕ್ತವು ಮರಳಿ ಶರೀರಕ್ಕೆ ಸೇರುತ್ತದೆ. ಪುರುಷರು ಪ್ರತಿ ೩ ತಿಂಗಳಿಗೊಮ್ಮೆ ಮತ್ತು ಮಹಿಳೆಯರು ಪ್ರತಿ ೪ ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ಶರೀರಕ್ಕೆ ತುಂಬಾ ಉಪಯೋಗವಿದ್ದು, ಹೃದಯ ಸಂಬAಧಿ ಕಾಯಿಲೆಗಳಿಂದ ಮುಕ್ತಿ ಪಡೆಯಲು ಸಹಾಯವಾಗುತ್ತದೆ ಎಂದರು.
ನಮ್ಮ ಜಿಲ್ಲೆಗೆ ಒಂದು ತಿಂಗಳಿಗೆ ೫೦೦ ರಿಂದ ೬೦೦ ಯೂನಿಟ್ ರಕ್ತ ಅವಶ್ಯಕತೆ ಇದ್ದು, ೧೮ ರಿಂದ ೬೫ ವಯೋಮಿತಿಯ ಒಳಗಿರುವವರು ರಕ್ತದಾನ ಮಾಡಲು ಮುಂದೆ ಬರಬೇಕೆಂದು ಮನವಿ ಮಾಡಿದರು.
ಒಂದು ಬಾಟಲಿ ರಕ್ತದಲ್ಲಿ ಕೆಂಪು ರಕ್ತ, ಬಿಳಿ ರಕ್ತ , ಪ್ಲಾಸ್ಮ ಮತ್ತು ಪ್ಲೇಟ್ಲೆಟ್ಗಳಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಿ ಅದನ್ನು ರೋಗಿಯ ಅವಶ್ಯಕತೆ ಅನುಗುಣವಾಗಿ ನೀಡಲಾಗುತ್ತದೆ. ದಾನ ಮಾಡಿದ ರಕ್ತವನ್ನು ಪರೀಕ್ಷೆಗೊಳಪಡಿಸಿ ನಂತರ ಅದನ್ನು ರೋಗಿಗೆ ನೀಡಲಾಗುತ್ತದೆ ಎಂದು ರಕ್ತದಾನದ ಮಹತ್ವವನ್ನು ಹೇಳಿದರು. ಕೊಡಗಿನಲ್ಲಿ ಮಡಿಕೇರಿಯಲ್ಲಿ ಒಂದು ರಕ್ತನಿಧಿ ಕೇಂದ್ರ ಇದ್ದು, ಗೋಣಿಕೊಪ್ಪದಲ್ಲಿ ಒಂದು ರಕ್ತ ನಿಧಿ ಕೇಂದ್ರ ಸ್ಥಾಪನೆಯ ಅವಶ್ಯಕತೆ ಇದೆ ಎಂದರು.
ಏಡ್ಸ್ ಬಗ್ಗೆ ಜಾಗೃತಿ ಅವಶ್ಯಕ
ತಾಲೂಕು ವೈದ್ಯಾಧಿಕಾರಿ ಡಾ.ಯತಿರಾಜ್ ಮಾತನಾಡಿ, ಏಡ್ಸ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಡಿಸೆಂಬರ್ ೧ ರಂದು ವಿಶ್ವ ಏಡ್ಸ್ ದಿನಾಚರಣೆ ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಸುಮಾರು ೨೫ ಮಿಲಿಯನ್ ಜನರು ಏಡ್ಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದಲ್ಲಿಯೂ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಏಡ್ಸ್ ರೋಗಿಗಳು ಇದ್ದು, ವೀರಾಜಪೇಟೆ ತಾಲೂಕಿನಲ್ಲಿ ಪ್ರತಿ ತಿಂಗಳು ೬ ರಿಂದ ೭ ಪ್ರಕರಣಗಳು ಪತ್ತೆಯಾಗುತ್ತಿವೆ.
ಹೆಚ್ ಐ ವಿ ಯು ಹೆಚ್ಚಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕದಿAದ ಮತ್ತು ಬಳಸಿದ ಸಿರಂಜ್ ಮತ್ತು ಸೂಜಿಗಳಿಂದ ಹರಡುವ ಸಾಧ್ಯತೆ ಇರುತ್ತದೆ. ಹೆಚ್ಐವಿ ಪೀಡಿತರಾದವರಿಗೆ ಹತ್ತು ವರ್ಷಗಳ ಕಾಲ ಯಾವುದೇ ರೋಗ ಲಕ್ಷಣಗಳು ಕಾಣಿಸುದಿಲ್ಲ. ಈ ರೋಗವನ್ನು ಕೇವಲ ರಕ್ತದ ಪರೀಕ್ಷೆಯಿಂದ ಮಾತ್ರ ಕಂಡುಹಿಡಿಯಲು ಸಾಧ್ಯ ಎಂದರು. ಒಂದು ತಿಂಗಳಿಗಿAತ ಹೆಚ್ಚು ಬಿಡದೇ ಕಾಡುವ ಜ್ವರ, ಯಾವುದೇ ಬೇರೆ ಲಕ್ಷಣಗಳು ಇಲ್ಲದೆ ತೂಕ ಕಳೆದುಕೊಳ್ಳುವುದು ಕಂಡು ಬಂದರೆ ಕೂಡಲೇ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ಹೆಚ್.ಐ.ವಿಗೆ ಯಾವುದೇ ನಿಖರವಾದ ಔಷಧಿಗಳು ಇಲ್ಲದಿದ್ದರೂ ಕೂಡ ಪ್ರಾಥಮಿಕ ಚಿಕಿತ್ಸೆ, ವ್ಯಾಯಾಮ ಮತ್ತು ಉತ್ತಮ ಗುಣಮಟ್ಟದ ಆಹಾರ ಪದ್ಧತಿಯಿಂದ ರೋಗಿಯ ಜೀವಿತಾವಧಿಯನ್ನು ಹೆಚ್ಚಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ, ಪೊನ್ನಂಪೇಟೆ ವಿಂಗ್ ರೆಡ್ ಕ್ರಾಸ್ ಉಪ ಸಭಾಪತಿ ಪಿ. ಎಂ ದಿಲನ್ ಚಂಗಪ್ಪ, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಕಾರ್ಯದರ್ಶಿ ನಾಗೇಶ್ ಮೋಹನ್, ಖಜಾಂಚಿ ಮೋಹನ್ ಮೇಕೇರಿರ, ಪೊನ್ನಂಪೇಟೆ ವಿಂಗ್ ರೆಡ್ ಕ್ರಾಸ್ ಕಾರ್ಯದರ್ಶಿ ಚಂದನ್ ಕಾಮತ್, ಖಜಾಂಚಿ ಪಿ. ಜಿ. ರಾಜಶೇಖರ್, ಪ್ರಾಜೆಕ್ಟ್ ಡೈರೆಕ್ಟರ್ಸ್ ಡಾ. ಶರತ್, ಅಂತೋಣಿ ಸಿ.ಜೆ, ಎನ್. ಸಿ. ಸಿ ಅಧಿಕಾರಿಗಳಾದ ಡಾ. ಲೆಫ್ಟಿನೆಂಟ್ ಎಂ. ಆರ್. ಆಕ್ರಂ, ಲೆಫ್ಟಿನೆಂಟ್ ಐ. ಡಿ. ಲೇಪಾಕ್ಷಿ, ಎನ್. ಎಸ್. ಎಸ್ ಅಧಿಕಾರಿಗಳಾದ ಎಂ. ಎ. ಕುಶಾಲಪ್ಪ, ಕೆ. ಎಸ್. ಪೂಜಾ, ರೋವರ್ಸ್ ರೇಂಜರ್ಸ್ ಅಧಿಕಾರಿ ಡಾ. ಸೀಮಾ, ಯು. ಟಿ. ಪೆಮ್ಮಯ್ಯ ಇದ್ದರು. ಶಿಲ್ಪ ಮತ್ತು ನವ್ಯ ಪ್ರಾರ್ಥಿಸಿ, ಕೆ. ಆರ್. ಮನ ಸ್ವಾಗತಿಸಿ, ಲಕ್ಷಿö್ಮ ವಂದಿಸಿ, ಕಾವೇರಮ್ಮ ಮತ್ತು ವಿನ್ಯಾ ನಿರೂಪಿಸಿದರು.