ಗೋಣಿಕೊಪ್ಪಲು, ಡಿ. ೧೦: ಪೊನ್ನಂಪೇಟೆ ಬಳಿಯ ಹಳ್ಳಿಗಟ್ಟುವಿನಲ್ಲಿರುವ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ತಾಂತ್ರಿಕ ಮಾದರಿ ಪ್ರದರ್ಶನ ಸ್ಪರ್ಧೆ ಜರುಗಿತು. ಕಾಲೇಜಿನ ೧೫೦ಕ್ಕೂ ಅಧಿಕ ಇಂಜಿನಿಯರಿAಗ್ ವಿದ್ಯಾರ್ಥಿಗಳು ತಾವು ತಯಾರಿಸಿದ ವಿವಿಧ ರೀತಿಯ ಯೋಜನೆಗಳನ್ನು ಅನಾವರಣಗೊಳಿಸಿದರು.

ಸ್ಪರ್ಧೆಯನ್ನು ಕೊಡವ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ, ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ, ನಿರ್ದೇಶಕ ಚಿರಿಯಪಂಡ ರಾಜ ನಂಜಪ್ಪ, ಕಾಫಿ ಬೆಳೆಗಾರ ಚೆಪ್ಪುಡೀರ ರಾಕೇಶ್, ಪ್ರಾಂಶುಪಾಲ ಡಾ. ಎಂ. ಬಸವರಾಜ್ ಉದ್ಘಾಟಿಸಿದರು.

ಸಿ.ಐ.ಟಿ. ಕಾಲೇಜಿನ ಇಂಜಿನಿಯರಿAಗ್ ವಿಭಾಗಗಳಾದ ಕಂಪ್ಯೂಟರ್ ಸೈನ್ಸ್, ಸಿವಿಲ್, ಎಲೆಕ್ಟಾçನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್, ಮೆಕ್ಯಾನಿಕಲ್, ಸೈಬರ್ ಸೆಕ್ಯೂರಿಟಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮಿಷನ್ ಲರ್ನಿಂಗ್ ಹಾಗೂ ಡೇಟಾ ಸೈನ್ಸ್ ಸೇರಿದಂತೆ ಸಿ.ಐ.ಟಿ. ಕಾಲೇಜಿನ ಏಳು ಇಂಜಿನಿಯರಿAಗ್ ವಿಭಾಗದ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರವೃತ್ತಿಯಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಸಮಾಜಕ್ಕೆ ಉಪಯುಕ್ತವಾದ ಮಾದರಿಗಳನ್ನು ಸಿದ್ಧಪಡಿಸಿ ಮೆಚ್ಚುಗೆಗೆ ಪಾತ್ರರಾದರು.

ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಗಳ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಡಾ. ಬಸವರಾಜ್ ಹರ್ಷ ವ್ಯಕ್ತಪಡಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉತ್ತಮ ಮಾದರಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.

ಕಾರ್ಯಕ್ರಮದ ಸಂಯೋಜಕರಾಗಿ ಸಂಸ್ಥೆಯ ಡಾ. ಕಿಶನ್ ಕರುಂಬಯ್ಯ ಹಾಗೂ ಮಾಹಿತಿ ಹಂಚಿಕೆದಾರರಾಗಿ ಡಾ. ಯತಿರಾಜ್ ಕಾರ್ಯ ನಿರ್ವಹಿಸಿದರು.