ಐಗೂರು, ಡಿ. ೧೦ : ಕಿರುಗಂದೂರು ಮತ್ತು ಐಗೂರು ವ್ಯಾಪ್ತಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಗೆ ದಿನೇಶ್ ಅವರನ್ನು ನೇಮಕ ಮಾಡಲಾಗಿದೆ, ಈ ಎರಡು ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಸಮಿತಿಗಳು ರಚನೆಯಾಗಬೇಕಾಗಿದೆ ಎಂದು ಕಾಂಗ್ರೆಸ್ಸಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಎಂ.ಚAಗಪ್ಪ ಅವರು ಕಿರುಗಂದೂರಿನಲ್ಲಿ ಏರ್ಪಡಿಸಿದ್ದ ಐಗೂರು ಮತ್ತು ಕಿರುಗಂದೂರು ಗ್ರಾಮದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ತಿಳಿಸಿದರು. ಬಿಪಿಎಲ್ ಕಾರ್ಡ್ ರದ್ದಾದವರನ್ನು ಗುರುತಿಸುವ ಕೆಲಸ ಆಗಬೇಕಾಗಿದೆ. ಕಿರುಗಂದೂರು ಭಾಗದಲ್ಲಿ ರೂ. ಒಂದು ಕೋಟಿ ವೆಚ್ಚದ ರಸ್ತೆ ಕಾಮಗಾರಿ ಕೆಲಸ ಭರದಿಂದ ಸಾಗುತ್ತಿದೆ. ಗ್ಯಾರಂಟಿ ಯೋಜನೆ ಮತ್ತು ಶಾಸಕರ ಅಭಿವೃದ್ಧಿ ಸಾಧನೆಗಳನ್ನು ಕಾರ್ಯಕರ್ತರು ಗ್ರಾಮದ ಮನೆ, ಮನೆಗಳಿಗೆ ಪ್ರಚಾರಪಡಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಐಗೂರು ವಲಯ ಅಧ್ಯಕ್ಷ ಹೊನ್ನಪ್ಪ, ಗ್ರಾಮ ಪಂ. ಸದಸ್ಯ ರೋಷನ್, ಪ್ರಚಾರ ಸಮಿತಿಯ ದಿನೇಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ, ಗಣೇಶ್, ಕೆ .ಪಿ. ಮುತ್ತಪ್ಪ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.