ಮಡಿಕೇರಿ, ಡಿ. ೧೦ : ಕೊಡ್ಲಿಪೇಟೆಯ ಕ್ಯಾತೆ ಗ್ರಾಮದಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅಲ್ಪಸಂಖ್ಯಾತ ವಸತಿ ಶಾಲೆಗೆ ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವಸತಿ ಶಾಲೆಯಲ್ಲಿನ ಹಲವು ಅವ್ಯವಸ್ಥೆಗಳು ಬೆಳಕಿಗೆ ಬಂದಿವೆ.
ಕೊಡ್ಲಿಪೇಟೆಯ ಕ್ಯಾತೆ ಗ್ರಾಮದಲ್ಲಿ ಈ ವಸತಿ ಶಾಲೆಯಿದ್ದು ಇಲ್ಲಿ ೨೩೦ ಮಕ್ಕಳು ಆಶ್ರಯ ಪಡೆದಿದ್ದಾರೆ. ವಸತಿ ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಪೋಷಕರ ಪುಕಾರಿನಂತೆ ಸುಜಾ ಕುಶಾಲಪ್ಪ ಅವರು ಭೇಟಿ ನೀಡಿದ್ದರು. ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿರುವ ಸುಜಾ ಅವರು ಪೋಷಕರು ಕಳೆದ ಹಲವು ದಿನಗಳಿಂದ ಸಮಸ್ಯೆಗಳ ಬಗ್ಗೆ ತಿಳಿಸುತ್ತಿದ್ದ ಹಿನ್ನೆಲೆ ತಾವು ಎರಡು ದಿನದಿಂದೆ ಶಾಲೆಗೆ ಬೆಳಿಗ್ಗೆ ೮.೧೫ರ ಸುಮಾರಿಗೆ ಭೇಟಿ ನೀಡಿದ್ದಾಗಿ ತಿಳಿಸಿದ್ದಾರೆ. ಈ ಸಂದರ್ಭ ಗೇಟ್‌ನಲ್ಲಿ ಯಾವುದೇ ಸೆಕ್ಯುರಿಟಿ ಇರಲಿಲ್ಲ, ನೇರವಾಗಿ ಅಡುಗೆ ಕೊಠಡಿಗೆ ಭೇಟಿ ನೀಡಿದಾಗ ಅಲ್ಲಿ ಅರ್ಧ ಬೆಂದಿದ್ದ ಸ್ಥಿತಿಯಲ್ಲಿದ್ದ ಪಲಾವ್ ಇತ್ತು. ಮೊಸರಲ್ಲಿ ಅಧಿಕ ನೀರು ಬೆರೆಸಲಾಗಿತ್ತು. ಅಕ್ಕಿ, ರವೆಯಲ್ಲಿ ಹುಳಗಳು ಕಂಡುಬAದವು. ಅಲ್ಲದೆ ತರಕಾರಿಗಳು ಇರಲಿಲ್ಲ. ಇದ್ದ ಒಂದಷ್ಟು ತರಕಾರಿ ತೀರಾ ಹಳೆಯದ್ದಾಗಿತ್ತು ಎಂದು ವಿವರಿಸಿದರು. ಟೆಂಡರ್‌ನಲ್ಲಿರುವ ನಿಯಮಗಳು ಇಲ್ಲಿ ಪಾಲನೆಯಾಗುತ್ತಿರಲಿಲ್ಲ. ೨೩೦ ಮಕ್ಕಳು ಇದ್ದು ಸೂಕ್ತ ಬಿಸಿ ನೀರಿನ ವ್ಯವಸ್ಥೆಯೂ ಇಲ್ಲದೆ ಚಳಿಯಲ್ಲಿ ತಣ್ಣೀರು ಸ್ನಾನ ಮಾಡುವ ಅನಿವಾರ್ಯತೆ ಕಂಡುಬAತು ಎಂದು ಅವರು ತಿಳಿಸಿದ್ದಾರೆ. ಕಳೆದ ಐದಾರು ತಿಂಗಳ ಹಿಂದೆ ಪುಟ್ಟ ಬಾಲಕಿಯೋರ್ವಳು ಅತಿಯಾದ ಜ್ವರದಿಂದ ಈ ವಸತಿ ಶಾಲೆಯಲ್ಲೇ ಮೃತಪಟ್ಟಿರುವ ಘಟನೆಯೂ ನಡೆದಿದೆ ಎಂದು ತಿಳಿಸಿರುವ ಅವರು ಇದೂ ಕೂಡ ಗಂಭೀರ ವಿಚಾರವಾಗಿದೆ. ಸರಕಾರ ಮಕ್ಕಳ ಉಪಯೋಗಕ್ಕೆ ವ್ಯವಸ್ಥೆ ಕಲ್ಪಿಸುತ್ತಿದ್ದರೂ ಇದು ಪ್ರಯೋಜನವಾಗುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ.
ಕಿಟಕಿ ಬಾಗಿಲು ಒಡೆದು ಹೋಗಿದ್ದು ಸೊಳ್ಳೆಗಳ ಕಾಟ ಅಧಿಕವಾಗಿದೆ. ವಸತಿ ಶಾಲೆಯ ವಾರ್ಡನ್ ಹಾಗೂ ಸಂಬAಧಿಸಿದ ಜಿಲ್ಲಾ ಅಧಿಕಾರಿ ಈ ಬಗ್ಗೆ ಸೂಕ್ತ ನಿರ್ವಹಣೆ ಮಾಡುತ್ತಿಲ್ಲ. ಬದಲಿಗೆ ನಿರ್ಲಕ್ಷö್ಯ ತೋರಲಾಗಿದೆ. ಸಂಬAಧಿಸಿದ ಜಿಲ್ಲಾ ಅಧಿಕಾರಿ ಪ್ರತಿ ತಿಂಗಳು ಭೇಟಿ ನೀಡಿ ಪರಿಶೀಲಿಸಬೇಕೆಂಬ ನಿಯಮವಿದ್ದರೂ ೨ ತಿಂಗಳು ೨೩ ದಿನಗಳ ಕಾಲ ಇತ್ತ ಅವರು ತಲೆ ಹಾಕಿಲ್ಲ ಎಂಬದೂ ಭೇಟಿ ಸಂದರ್ಭ ತಿಳಿದುಬಂದಿದೆ. ಸಂಬAಧಿಸಿದ ಜಿಲ್ಲಾ ಅಧಿಕಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಇಲಾಖೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಕೇವಲ ಮೂರು ಅಲ್ಪಸಂಖ್ಯಾತ ವಸತಿ ಶಾಲೆಯಿದ್ದು ಇದನ್ನು ನಿರ್ವಹಿಸಲಾಗದವರು ಅಲ್ಲಿ ಏನು ಕೆಲಸ ಮಾಡುತ್ತಾರೆ ಎಂದು ಪ್ರಶ್ನಿಸಿರುವ ಸುಜಾ ಅವರು ಸರಕಾರ ಹಾಗೂ ಜಿಲ್ಲಾಡಳಿತ ಕೂಡಲೇ ನಿರ್ಲಕ್ಷö್ಯ ತೋರಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.