ಶ್ರೀಮಂಗಲ, ಡಿ. ೧೧: ಪೊನ್ನಂಪೇಟೆ ತಾಲೂಕಿನ ತಾಳೇರಿ ಮೂಂದ್ ನಾಡ್ ಕೋಲ್ ಮಂದ್‌ನಲ್ಲಿ ನಡೆದ ಮೂಂದ್ ನಾಡ್ ಮಂದ್ ನಮ್ಮೆ ಗತ ವೈಭವವನ್ನು ನೆನಪಿಸುವಲ್ಲಿ ಯಶಸ್ವಿಯಾಯಿತು. ವೈಶಿಷ್ಟö್ಯ ಆಚರಣೆ ಎನಿಸಿಕೊಂಡಿರುವ ಪೌರಾಣಿಕ ಹಿನ್ನೆಲೆಯುಳ್ಳ ತಾವಳಗೇರಿ ಮಹಾದೇವರ ಕುದುರೆ ಹಾಗೂ ಟಿ.ಶೆಟ್ಟಿಗೇರಿಯ ಕೊರಕೊಟ್ ಅಯ್ಯಪ್ಪ ದೇವರ ಕುದುರೆ ಒಂದು ಗಂಟೆಗೆ ಸರಿಯಾಗಿ ಮಂದ್ ಪ್ರವೇಶಿಸಿ ಪೆರುಮಾಳ್ ಪಟ್ಟಿಯಲ್ಲಿ ಪೆರುಮಾಳಚ್ಚನ ಆಶೀರ್ವಾದ ಪಡೆಯುವುದರೊಂದಿಗೆ ಆರಂಭವಾದ ಮಂದ್ ನಮ್ಮೆಯಲ್ಲಿ ತಾಳೇರಿ ನಾಡಿನ ಕೊಡವ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪುತ್ತರಿ ಕೋಲಾಟ್‌ನಲ್ಲಿ ಭಾಗವಹಿಸಿ ನೆರೆದಿದ್ದವರ ಮನಗೆದ್ದರು.

ಈ ಸಂದರ್ಭ ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಬೊಳಕಾಟ್, ಉಮ್ಮತ್ತಾಟ್, ಪುತ್ತರಿ ಕೋಲಾಟ್, ಪರೆಯಕಳಿ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಕಲಾವಿದರಿಂದ ಕೊಡವ ನೃತ್ಯ, ಮಚ್ಚಮಾಡ ಕವಿತ ಸತೀಶ್‌ರಿಂದ ತಕ್ಕಾರತಾಟ್, ಕೊಡವ ಪಾಟ್, ಕವಿತ ಸತೀಶ್ ತಂಡದವರಿAದ ಪುತ್ತರಿ ಆಟ್, ಅಜ್ಜಮಾಡ ಶ್ರತಿಕ, ಪೆಮ್ಮಂಡ ದೀಪ್ತಿ, ಮಾಣೀರ ರಿಯಾ ಪೊನ್ನಮ್ಮ, ಕೋಟ್ರಮಾಡ ಆಕೃತಿ ಪೊನ್ನಕ್ಕ, ಆಲೆಮಾಡ ಧೃತಿ ದೇಚಮ್ಮ, ಮಾಯಣಮಾಡ ಇಶಿತ ಬೋಜಮ್ಮ, ಕಾಳಿಮಾಡ ಲಾಸ್ಯ ಚೋಂದಮ್ಮರವರಿAದ ವಿವಿಧ ಕೊಡವ ನೃತ್ಯಗಳ ಪ್ರದರ್ಶನ ನೆರೆದಿದ್ದವರ ಮನಗೆಲ್ಲುವುದರೊಂದಿಗೆ ಕೊಡವರ ಸಾಂಸ್ಕೃತಿಕ ವೈಭವವನ್ನು ಸಾರುವಲ್ಲಿ ಯಶಸ್ವಿಯಾಯಿತು. ನಾಡಿನವರೆಲ್ಲ ಸಾಮೂಹಿಕವಾಗಿ ಪರೆಯಕಳಿ, ಆಕೀರಿ ಕೋಲ್ ಹೊಡೆದು ಕುದುರೆ ಕಟ್ಟುವುದರೊಂದಿಗೆ ಮಂದ್ ನಮ್ಮೆ ಸಮಾಪ್ತಿಯಾಯಿತು.

ಈ ಸಂದರ್ಭ ತಾಳೇರಿ ಮೂಂದ್‌ನಾಡ್ ಕೋಲ್‌ಮಂದ್ ಸಮಿತಿಯ ಪರವಾಗಿ ಮುಖ್ಯ ಅತಿಥಿ ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಡ್ಯಮಾಡ ಮನು ಸೋಮಯ್ಯ, ನಮ್ಮ ಮಣ್ಣು ನಮ್ಮಲ್ಲಿಂದ ಕೈಬಿಟ್ಟು ಹೋದರೆ ನಮ್ಮ ಸಂಸ್ಕೃತಿ ನಾಶವಾಗುತ್ತದೆ. ನಮ್ಮ ಸಂಸ್ಕೃತಿ ನಾಶವಾದರೆ ಜನಾಂಗವೇ ನಾಶವಾಗಿಹೋಗುತ್ತದೆ. ಆದ್ದರಿಂದ ಕೊಡವರು ತಮ್ಮ ಮಣ್ಣನ್ನು ಪರಬಾರೆ ಮಾಡದೆ ಉಳಿಸಿಕೊಂಡು ಕೊಡವ ಸಂಸ್ಕೃತಿ ಹಾಗೂ ಜನಾಂಗವನ್ನು ಉಳಿಸಬೇಕೆಂದು ಕರೆ ನೀಡಿದರು.

ನಮ್ಮ ಜನರು ತೋಟ ಗದ್ದೆಗಳ ಅಭಿವೃದ್ಧಿಗೆ ಬ್ಯಾಂಕ್‌ಗಳಿAದ ಪಡೆದ ಸಾಲದ ಹಣವನ್ನು ಅನವಶ್ಯಕ ದುಂದುವೆಚ್ಚ ಮಾಡಿ ಸಾಲ ಕಟ್ಟಲಾರದೆ ಜಮೀನು ಮಾರುವ ಪರಿಸ್ಥಿತಿ ತಂದುಕೊಳ್ಳಬಾರದು. ಆಸ್ತಿಯ ವ್ಯಾಜ್ಯಗಳನ್ನು ನಮ್ಮಲ್ಲೇ ಇತ್ಯರ್ಥಪಡಿಸಿಕೊಂಡು ನ್ಯಾಯಾಲಯಕ್ಕೆ ಹೋಗಿ ಅನವಶ್ಯಕವಾಗಿ ಹಣ ಹಾಗೂ ಸಮಯವನ್ನು ಕಳೆದುಕೊಳ್ಳಬಾರದೆಂದು ನುಡಿದರು. ನಮ್ಮ ರಾಜ್ಯದ ಎಲ್ಲಾ ಜಿಲ್ಲೆಯ ರೈತರು ಸರ್ಕಾರದಿಂದ ಸಿಗುವ ಬೆಳೆ ನಷ್ಟ ಪರಿಹಾರವನ್ನು ಪಡೆದುಕೊಳ್ಳುತ್ತಿದ್ದಾರೆ. ಕೊಡಗು ಜಿಲ್ಲೆಯ ರೈತರು ಮಾತ್ರ ಸರ್ಕಾರದ ಮುಂದೆ ನಷ್ಟ ಪರಿಹಾರದ ಬೇಡಿಕೆಯನ್ನೇ ಇಡುತ್ತಿಲ್ಲ. ಅದು ನಮ್ಮ ಹಕ್ಕಾಗಿದ್ದು, ನಮ್ಮ ಹಕ್ಕನ್ನು ಕೇಳಿ ಪಡೆದುಕೊಳ್ಳಲು ಹಿಂದೇಟು ಹಾಕಬಾರದು ಎಂದರು. ಕೊಡವ ಸಂಸ್ಕೃತಿಯ ಉಳಿಕೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿರುವ ರೂಟ್ಸ್ ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ. ಇದೇ ರೀತಿಯಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳು ಸಹಕರಿಸಿದರೆ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಸುಲಭ ಸಾಧ್ಯ ಎಂದರು.

ತಾಳೇರಿ ಮೂಂದ್ ನಾಡ್‌ನ ನಾಡ್ ತಕ್ಕರಾದ ಕೈಬಿಲೀರ ಹರೀಶ್ ಅಪ್ಪಯ್ಯ ಅವರು ಮಾತನಾಡಿ ತಾಳೇರಿ ಕೋಲ್ ಮಂದ್ ಹಾಗೂ ಪೆರುಮಾಳ್ ಪಟ್ಟಿಯ ಪೌರಾಣಿಕ ಹಿನ್ನೆಲೆಯನ್ನು ನೆರೆದಿದ್ದವರಿಗೆ ತಿಳಿಸುವುದರೊಂದಿಗೆ ಕಳೆದ ಒಂಭತ್ತು ವರ್ಷಗಳಿಂದ ಕೊಡವ ಜನಾಂಗದ ಶ್ರೇಯಸ್ಸಿಗಾಗಿ ಹಾಗೂ ಕೊಡವಾಮೆಯ ಉಳಿಕೆಗಾಗಿ ಶ್ರಮಿಸುತ್ತಿರುವವರನ್ನು ಸನ್ಮಾನಿಸಿ, ಗೌರವಿಸುವ ಸಂಪ್ರದಾಯವನ್ನು ಅಳವಡಿಸಿಕೊಂಡಿರುವುದಾಗಿ ತಿಳಿಸಿದರು.

ಈ ಸಂದರ್ಭ ಮೂಂದ್ ನಾಡ್ ವ್ಯಾಪ್ತಿಯ ಗ್ರಾಮಗಳ ನಡುವೆ ನಡೆದ ಹಗ್ಗಜಗ್ಗಾಟ ಸ್ಪರ್ದೆಯ ಪುರುಷರ ವಿಭಾಗದಲ್ಲಿ ನೆಮ್ಮಲೆ ಗ್ರಾಮ ತಂಡ ಪ್ರಥಮ, ತಾವಳಗೇರಿ ತಂಡ ದ್ವಿತೀಯ, ಟಿ.ಶೆಟ್ಟಿಗೇರಿ ತಂಡ ತೃತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ವಗರೆ ತಂಡ ಪ್ರಥಮ, ನೆಮ್ಮಲೆ ತಂಡ ದ್ವಿತೀಯ, ಟಿ.ಶೆಟ್ಟಿಗೇರಿ ತಂಡ ತೃತೀಯ ಹಾಗೂ ತಾವಳಗೇರಿ ತಂಡ ನಾಲ್ಕನೇ ಸ್ಥಾನ ಪಡೆಯಿತು.

ಕೋಟ್ರಮಾಡ ಶೀತಲ್ ಮಾದಪ್ಪ ಹಾಗೂ ಆಲೆಮಾಡ ಪ್ರೇಮ ತಿಮ್ಮಯ್ಯ ಪ್ರಾರ್ಥಿಸಿ, ಮಂದ್ ಸಮಿತಿಯ ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ ಸ್ವಾಗತಿಸಿ, ಟಿ.ಶೆಟ್ಟಿಗೇರಿ ಕೊಡವ ಸಮಾಜದ ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ತಾಳೇರಿ ಮೂಂದ್‌ನಾಡ್ ಕೋಲ್‌ಮಂದ್ ಸಮಿತಿಯ ಅಧ್ಯಕ್ಷ ಕೈಬಿಲೀರ ಸುರೇಶ್ ವಂದಿಸಿದರು.

ವೇದಿಕೆಯಲ್ಲಿ ಅತಿಥಿಗಳಾದ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್,ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಂಬ ಕಾರ್ಯಪ್ಪ, ನೆಮ್ಮಲೆ ಗ್ರಾಮದ ತಕ್ಕ ಮುಖ್ಯಸ್ಥರಾದ ಚೆಟ್ಟಂಗಡ ಹ್ಯಾರಿ ನಾಣಯ್ಯ, ಕೋಲ್‌ಮಂದ್ ಸಮಿತಿ ಸದಸ್ಯರಾದ ಚಟ್ಟಂಡ ಕಿರಣ್ ಕಾಳಪ್ಪ, ಚಟ್ಟಂಡ ಅರುಣ್ ನಾಚಪ್ಪ, ಕಟ್ಟೇರ ಈಶ್ವರ್ ತಿಮ್ಮಯ್ಯ, ಕೋಟ್ರಮಡ ನಿತಿನ್ ತಿಮ್ಮಯ್ಯ, ನೂರೇರ ಅರುಣ್ ಉತ್ತಯ್ಯ, ಕಟ್ಟೇರ ಮಿಥುನ್ ಚಂಗಪ್ಪ, ಟಿ. ಶೆಟ್ಟಿಗೇರಿ ಕೊಡವ ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಖಜಾಂಚಿ ಚಂಗುಲAಡ ಸತೀಶ್, ನಿರ್ದೇಶಕಿ ಚಂಗುಲAಡ ಅಶ್ವಿನಿ ಸತೀಶ್, ತಡಿಯಂಗಡ ಸೌಮ್ಯ ಕರುಂಬಯ್ಯ, ಕರ್ನಂಡ ರೂಪ ದೇವಯ್ಯ, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಾಡ ರೇಷ್ಮಾ ಕಾರ್ಯಪ್ಪ, ಕಾರ್ಯದರ್ಶಿ ಕಳ್ಳಿಚಂಡ ದೀನ ಉತ್ತಪ್ಪ ಅಪ್ಪಚಂಗಡ ಮೋಟಯ್ಯ, ಆಲೆಮಾಡ ವೇಣು ಬಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.