ಸುಂಟಿಕೊಪ್ಪ, ಡಿ. ೧೧ : ಸಂವಿಧಾನÀ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರವರ ೬೯ನೇ ಮಹಾ ಪರಿ ನಿರ್ವಾಣ ದಿನಾಚರಣೆಯನ್ನು ಸುಂಟಿಕೊಪ್ಪ ಪರಿವರ್ತನಾ ವೇದಿಕೆ ವತಿಯಿಂದ ಆಚರಿಸಲಾಯಿತು. ಇಲ್ಲಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆಯನ್ನು ಪರಿವರ್ತನಾ ವೇದಿಕೆಯ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ಎಸ್. ಮುತ್ತಪ್ಪ ವಹಿಸಿ ಮಾತನಾಡಿ, ಅಂಬೇಡ್ಕರ್ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ಅವರ ವಿಚಾರಧಾರೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಡಾ. ಅಂಬೇಡ್ಕರ್ ಒಬ್ಬ ಸರ್ವಕಾಲಿಕ ಸುಧಾರಣಾವಾದಿ. ಅವರು ಎಂದಿಗೂ ಯಾವುದೇ ಒಂದು ಜಾತಿ, ಜನಾಂಗಕ್ಕೆ ಸೀಮಿತ ವಲ್ಲ. ಅಂಬೇಡ್ಕರ್ ಅವರ ಆದರ್ಶ ಗಳನ್ನು ಪ್ರತಿಯೊಬ್ಬ ನಾಗರಿಕ ಪಾಲಿಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎ. ಗಣೇಶ, ಜಿಲ್ಲಾ ಖಜಾಂಚಿ ಹೆಚ್.ಟಿ. ಭೋಜ, ನಗರ ಅಧ್ಯಕ್ಷರಾದ ಜಿ. ರಾಮ, ಜಿಲ್ಲಾ ಸಂಘಟಣಾ ಕಾರ್ಯದರ್ಶಿ ಹೊನ್ನಪ್ಪ, ಮಹಿಳಾ ಘಟಕ ಮುಖಂಡರುಗಳಾದ ಪುಷ್ಪ, ಪಿ.ಎನ್. ಸೆಲ್ವಿ, ನಿಶಾನ್ ಮಾದಾಪುರ ಹಾಗೂ ಕಾರ್ಯಕರ್ತರು ಹಾಜರಿದ್ದರು.