ವೀರಾಜಪೇಟೆ, ಡಿ. ೧೨: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಯಬಿಟ್ಟ ಮಡಿಕೇರಿಯ ನಾಲ್ಕು ಮಂದಿಯನ್ನು ಕೊಡಗಿನಿಂದ ಗಡೀಪಾರು ಮಾಡುವಂತೆ ವೀರಾಜಪೇಟೆ ನಗರ ಠಾಣೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ದೂರು ನೀಡಿದರು.

ಕೊಡಗು ಎಸ್‌ಟಿ ಮೋರ್ಚಾದ ಜಿಲ್ಲಾ ಅಧ್ಯಕ್ಷ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪರಮೇಶ್ವರ ಮಾತನಾಡಿ ಕೇರಳ ರಾಜ್ಯದಿಂದ ಕೆಲಸ ಅರಿಸಿ ಕೊಡಗಿಗೆ ಆಗಮಿಸಿ ನಮ್ಮ ನಾಯಕರ ವಿರುದ್ಧ ಸಂದೇಶ ರವಾನಿಸುವುದು ಸಾಮಾನ್ಯವಾಗಿದೆ. ಇಂತವರಿಗೆ ಕುಮ್ಮಕ್ಕು ನೀಡಿ ಸಹಕರಿಸುವ ಯಾರೆ ಆಗಿದ್ದರೂ ಅವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವೀರಾಜಪೇಟೆ ನಗರ ಬಿಜೆಪಿ ಅಧ್ಯಕ್ಷ ಅನಿಲ್ ಮಂದಣ್ಣ, ಬಿಜೆಪಿ ಮುಖಂಡರಾದ ರಘು ನಾಣಯ್ಯ, ಪುರಸಭೆ ಮಾಜಿ ಸದಸ್ಯರಾದ ಜೂನ ಸುನೀತಾ, ಬಿಜೆಪಿ ಪಕ್ಷದ ವಿವಿಧ ಸಂಘಟನೆ ಪ್ರಮುಖರು ಹಾಜರಿದ್ದರು.