ಮಡಿಕೇರಿ, ಡಿ. ೧೨: ಕೊಡಗು ಜಿಲ್ಲೆಯಲ್ಲಿ ಗಾಂಜ, ಅಫೀಮು ಸೇರಿದಂತೆ ಮಾದಕ ವಸ್ತುಗಳ ಸಾಗಾಟ ಹಾಗೂ ಮಾರಾಟ ಅವ್ಯಾಹತವಾಗಿ ಸಾಗುತ್ತಲೇ ಇದೆ., ಕೊಡಗು ಜಿಲ್ಲಾ ಪೊಲೀಸರು ಕಣ್ಗಾವಲು ಹಾಕಿದರೂ ಕಾಣದ ಕೈಗಳ ರಕ್ಷೆಯಡಿಯಲ್ಲಿ ಈ ದಂಧೆ ಮುಂದುವರಿಯುತ್ತಲೇ ಇದೆ.., ಆದರೂ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಟೊಂಕಕಟ್ಟಿ ನಿಂತಿರುವ ಪೊಲೀಸ್ ಇಲಾಖೆ ಅಕ್ರಮಿಗಳನ್ನ ಸದೆಬಡಿಯುವ ಕಾಯಕವನ್ನ ಮುಂದುವರಿಸಿದೆ.

ಕೊಡಗು ಜಿಲ್ಲೆಗೆ ನಿಷೇಧಿತ ಎಂಡಿಎAಎ ಎಂಬ ಮಾದಕ ವಸ್ತುವನ್ನು ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರೊಂದಿಗೆ ಇನ್ನಿಬ್ಬರನ್ನೂ ಕೂಡ ವಶಪಡಿಸಿಕೊಳ್ಳಲಾಗಿದೆ.

ಮಾದಕ ಸಾಮಗ್ರಿ ಎಂಡಿಎAಎ ನಿಷೇಧವಾಗಿದ್ದರೂ ಕೊಡಗು ಜಿಲ್ಲೆಯಲ್ಲಿ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ. ಕೊಡಗು ಪೊಲೀಸರು ಕೂಡ ಅಕ್ರಮಗಳನ್ನು ತಡೆಯುವಲ್ಲಿ ಕ್ರಮಕೈಗೊಂಡಿದ್ದಾರೆ.