ಮಡಿಕೇರಿ, ಡಿ. ೧೨: ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ೩೫ನೇ ವಾರ್ಷಿಕೋತ್ಸವ ಪ್ರಯುಕ್ತ ತಾ. ೧೪ ರಂದು ಅಖಂಡ ಏಕಾಹ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾ. ೧೪ ರಂದು ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ೧೫ ತಂಡಗಳಿAದ ನಿರಂತರ ಭಜನೆ ಹಾಗೂ ಕುಣಿತ ಭಜನೆ ನೆರವೇರಲಿದೆ.

ಕಾರ್ಯಕ್ರಮವನ್ನು ಬೆಳಿಗ್ಗೆ ೬.೧೦ ಮುಹೂರ್ತಕ್ಕೆ ನಗರಸಭೆ ಅಧ್ಯಕ್ಷೆ ಕೆ.ಪಿ. ಕಲಾವತಿ ಉದ್ಘಾಟಿಸುವರು. ಸಂಜೆ ೭ ಗಂಟೆಗೆ ಮಂಗಳಾಚರಣೆ, ಮಹಾಮಂಗಳಾರತಿ, ಸಮಾರೋಪ ನಡೆಯಲಿದ್ದು, ವಿಜಯ ವಿನಾಯಕ ದೇವಾಲಯದ ಟ್ರಸ್ಟಿ ಜಿ. ಚಿದ್ವಿಲಾಸ್ ಮಾತನಾಡಲಿದ್ದಾರೆ.

ಅತಿಥಿಯಾಗಿ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಭಾಗವಹಿಸಲಿದ್ದಾರೆ ಎಂದು ಭಜನಾ ಮಂಡಳಿ ಅಧ್ಯಕ್ಷ ಮಹೇಶ್ ಕುಮಾರ್ ತಿಳಿಸಿದ್ದಾರೆ.