ಪೊನ್ನಂಪೇಟೆ, ಡಿ. ೧೩: ಪರರು ಮಾಡಿದ ತಪ್ಪನ್ನು ಕಂಡು ಹಿಡಿಯುವುದನ್ನು ಬಿಟ್ಟು ನಮ್ಮಲ್ಲಿರುವ ತಪ್ಪನ್ನು ಅರಿತುಕೊಂಡರೆ ಮನಶಾಂತಿ ದೊರಕುತ್ತದೆ ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ ಮಹಾರಾಜ್ ಹೇಳಿದರು.
ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಮಾತೆ ಶ್ರೀ ಶಾರದಾದೇವಿಯವರ ೧೭೩ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಜೀವನದಲ್ಲಿ ಮನಶಾಂತಿಯನ್ನು ಪಡೆದುಕೊಳ್ಳಬೇಕಾದರೆ, ನಮ್ಮ ಆತ್ಮ ಶುದ್ಧಿಯನ್ನು ಮೊದಲು ಮಾಡಿಕೊಳ್ಳಬೇಕು ಮತ್ತು ದೈನಂದಿನ ಕಾರ್ಯಚಟುವಟಿಕೆಗಳ ಜೊತೆಗೆ ಅಧ್ಯಾತ್ಮದ ಕಡೆಗೆ ಸ್ವಲ್ಪ ಒಲವಿಟ್ಟುಕೊಳ್ಳಬೇಕು ಎಂದರು.
ತಾ. ೧೧ ರಂದು ಬೆಳಿಗ್ಗೆ ೫.೩೦ಕ್ಕೆ ದೇವಿಗೆ ಮಂಗಳಾರತಿಯೊAದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಉಷಾ ಕೀರ್ತನೆ, ಭಜನೆ, ಹೋಮ, ಮಾತೆಯ ಜೀವನ ಚರಿತ್ರೆ, ವಚನ, ವೇದ ಪಾರಾಯಣ ಮತ್ತು ಮಹಾ ಮಂಗಳಾರತಿ ನೆರವೇರಿತು. ನಂತರ ಭಕ್ತಾದಿಗಳಿಗೆ ಮಧ್ಯಾಹ್ನದ ಭೋಜನ ಪ್ರಸಾದ ವಿತರಿಸಲಾಯಿತು.
ಸಂಜೆ ೬ ಗಂಟೆಗೆ ವಿಶೇಷ ಪೂಜೆ ಮತ್ತು ಪುಷ್ಪಾಂಜಲಿಯೊAದಿಗೆ ಕಾರ್ಯಕ್ರಮ ಕೊನೆಗೊಂಡಿತು.