ಕುಶಾಲನಗರ, ಡಿ. ೧೪: ನಿವೃತ್ತ ನೌಕರರ ಕೂಟದ ೭ ನೇ ವಾರ್ಷಿಕೋತ್ಸವ ಸಮಾರಂಭ ಕುಶಾಲನಗರ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.

ನಿವೃತ್ತ ನೌಕರರ ಕೂಟದ ಮಾಜಿ ಅಧ್ಯಕ್ಷ ಚಂಗಪ್ಪ ಮಾತನಾಡಿ, ಏಕಾಂಗಿತನದಿAದ ಕೆಲವರಲ್ಲಿ ನಾನಾ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತವೆ, ಇದಕ್ಕೆ ಅವಕಾಶ ಉಂಟಾಗದAತೆ ಎಚ್ಚರ ವಹಿಸಬೇಕು. ಬಿಡುವಿನ ಸಮಯದಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದು ವ್ಯಕ್ತಿಯ ವ್ಯಕ್ತಿತ್ವವನ್ನು ಬದಲಾಯಿಸುತ್ತದೆ ಎಂದು ಕಿವಿ ಮಾತು ಹೇಳಿದರು.

ಈ ಸಂದರ್ಭ ಹಿರಿಯ ನಿವೃತ್ತ ನೌಕರರಾದ ಹೆಚ್.ಟಿ. ಪೊನ್ನಪ್ಪ, ಹೆಚ್.ಗುಡ್ಡಪ್ಪ, ಬಿ.ಪಿ.ಪ್ರಕಾಶ್, ಕೆ.ಟಿ.ಅಶೋಕ, ಟಿ.ಕೆ.ಚಂಗಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆದು ಬಹುಮಾನ ವಿತರಣೆ ಮಾಡಲಾಯಿತು.

ಈ ಸಂದರ್ಭ ಕೂಟದ ಅಧ್ಯಕ್ಷ ಎ.ಎಸ್. ಜೋಯಪ್ಪ, ಕಾರ್ಯದರ್ಶಿ ಜಿ.ಎನ್.ದೇವಯ್ಯ, ಖಜಾಂಚಿ ಕೆ.ಟಿ.ಅಶೋಕ, ನಿರ್ದೇಶಕರಾದ ಬಿ.ಡಿ.ರವೀಂದ್ರ, ಬಿ.ಹೆಚ್.ರಮೇಶ್, ಬಿ.ಯು.ಲೋಕೇಶ್, ಹೆಚ್.ಎಸ್.ಸೋಮಶೇಖರ್, ಮಾಜಿ ಕಾರ್ಯದರ್ಶಿ ನಾಗರಾಜು ಮತ್ತಿತರರು ಇದ್ದರು.