ಮಡಿಕೇರಿ, ಡಿ. ೧೪: ಪಿಸ್ತೂಲ್ - ರಿವಾಲ್ವರ್ ಹಿಡಿದುಕೊಂಡು ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸಿ ಅದರ ವೀಡಿಯೋವನ್ನು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹರಿಯಬಿಟ್ಟ ವ್ಯಕ್ತಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹಿತೇಶ್ ಮುತ್ತಪ್ಪ ಎಂಬ ವ್ಯಕ್ತಿ ಪಿಸ್ತೂಲ್/ರಿವಾಲ್ವರ್ ಹಿಡಿದುಕೊಂಡು ಸಾರ್ವಜನಿಕ ರಸ್ತೆಯ ಬದಿಯಲ್ಲಿರುವ ಮೋರಿಯೊಂದರ ಬಳಿ ಗುಂಡು ಹಾರಿಸಿ ಅದರ ವೀಡಿಯೋವನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನ ಪೇಜುಗಳಲ್ಲಿ ಪೋಸ್ಟ್ ಮಾಡಿದ್ದು, ಈ ರೀತಿಯ ವಿಚಾರಗಳನ್ನು ಸಾರ್ವಜನಿಕರು ದಿನಂಪ್ರತಿ ನೋಡುವ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗವುAಟು ಮಾಡಿ, ಭಯಭೀತರಾಗಿಸಿರುವುದಲ್ಲದೇ, ಭಾರತೀಯ ಆಯುಧ ಕಾಯ್ದೆಯ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಹಿತೇಶ್ ಮುತ್ತಪ್ಪ ವಿರುದ್ಧ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ ೩,೨೫,೩೦ ಭಾರತೀಯ ಆಯುಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.