ಕೂಡಿಗೆ, ಡಿ. ೧೪ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಕಾಳಿಕಾಂಬಾ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ಲೀಗ್ ಮಾದರಿಯ ಹೊನಲು ಬೆಳಕಿನ ಕಾಳಿಕಾಂಬಾ ಕಪ್ ವಾಲಿಬಾಲ್ - ೨೦೨೫ ಪಂದ್ಯಾಟ ಚಾಲನೆಗೊಂಡಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀ ಉಮಾಮಹೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ. ಜಾಮಿ ನೆರವೇರಿಸಿ ಮಾತನಾಡಿ, ಯುವಕರಲ್ಲಿ ಶಿಸ್ತು, ಸಂಯಮ, ಉತ್ತಮ ಪ್ರಜ್ಞೆ ಬೆಳೆಸಿಕೊಳ್ಳಲು ಸಹ ಕ್ರೀಡೆ ಸಹಕಾರಿಯಾಗುವುದು ಎಂದರು. ಕುಶಾಲನಗರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾಕೂಟಗಳ ಆಯೋಜನೆ ಯುವಕರು ಸಂಘಟಿತರಾಗುವ ಮೂಲಕ ಒಗ್ಗೂಡಿ ಗ್ರಾಮದ ಸರ್ವತೋಮುಖ ಪ್ರಗತಿಗೆ ಉಪಯುಕ್ತವಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅತಿಥಿಯಾಗಿದ್ದ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ, ತಾಲೂಕು ಕೆಡಿಪಿ ಸದಸ್ಯ ಟಿ. ಪಿ. ಹಮೀದ್ ಮಾತನಾಡಿ, ಭಾವನಾತ್ಮಕ ಸಂಬAಧವನ್ನು ಕ್ರೀಡೆಯು ಬೆಳೆಸುತ್ತದೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಶ್ರೀ ಕಾಳಿಕಾಂಬಾ ಯುವಕ ಸಂಘದ ಅಧ್ಯಕ್ಷ ಐ. ಜಿ. ಶರತ್ ವಹಿಸಿದ್ದರು.

ವೇದಿಕೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಹುದುಗೂರು ಗ್ರಾಮದ ಶೋಭಾ ಪುಟ್ಟಪ್ಪ, ಪ್ರೇಮಲೀಲಾ, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ರತ್ನಮ್ಮ, ಹೆಚ್.ಎಸ್. ರವಿ, ಶ್ರೀ ಉಮಾಮಹೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ, ಹುದುಗೂರು ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಕಾಂಚನಾ ದೇವದನ್, ಪಶು ಆಸ್ಪತ್ರೆ ಪಶು ಪರಿವೀಕ್ಷಣಾಧಿಕಾರಿ ಸುಜಾತ, ಸ್ಥಳೀಯ ಅಂಗನವಾಡಿ ಶಿಕ್ಷಕಿ ಸರಸ್ವತಿ, ಮೀನಾಕ್ಷಿ ಮಾದಪ್ಪ, ಸಂಘದ ಉಪಾಧ್ಯಕ್ಷ ಕೆ.ಡಿ. ಕಾರ್ತೀಕ್, ಕಾರ್ಯದರ್ಶಿ ಟಿ. ಎಸ್, ಚಂದ್ರಕಾAತ, ಖಜಾಂಚಿ ಸಿ.ಎಸ್. ನವೀನ್ ಸೇರಿದಂತೆ ಲೀಗ್ ಪಂದ್ಯಾಟದ ೮. ತಂಡಗಳ ಅಟಗಾರರು, ಗ್ರಾಮಸ್ಥರು, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಯುವಕರು ಹಾಜರಿದ್ದರು.