ಮಡಿಕೇರಿ, ಡಿ. ೧೪: ನಗರದ ಶ್ರೀ ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಆಂಜನೇಯ ದೇವಾಲಯದಲ್ಲಿ ೩೫ನೇ ವಾರ್ಷಿಕೋತ್ಸವದ ಪ್ರಯುಕ್ತ ಅಖಂಡ ಏಕಾಹ ಭಜನೆ ಶ್ರದ್ಧೆಯಿಂದ ನಡೆಯಿತು. ಸೂರ್ಯೋದಯದಿಂದ ಸೂರ್ಯಾಸ್ತಮದವರೆಗೆ ನಡೆದ ಭಜನಾ ಕಾರ್ಯಕ್ರಮಕ್ಕೆ ಬೆಳಿಗ್ಗೆ ನಗರ ಸಭಾಧ್ಯಕ್ಷೆ ಕಲಾವತಿ ಚಾಲನೆ ನೀಡಿದರು. ಬಳಿಕ ೧೫ ತಂಡಗಳಿAದ ನಿರಂತರ ಭಜನೆ, ಮೂರು ತಂಡಗಳಿAದ ಕುಣಿತ ಭಜನೆ ನಡೆಯಿತು.
ಭಜನೆಯಲ್ಲಿ ಶ್ರೀ ರಾಮಾಂಜನೇಯ ಮಹಿಳಾ ಭಜನಾ ಮಂಡಳಿ, ಮಡಿಕೇರಿಯ ಶ್ರೀ ಸತ್ಯಸಾಯಿ ಭಜನಾ ಸಮಿತಿ, ಭಕ್ತಿ ಲಹರಿ ತಂಡ, ಮಂಗಳಾದೇವಿ ನಗರದ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಮದೆಯ ಮದೆಮಹೇಶ್ವರ ಭಜನಾ ಮಂಡಳಿ, ಕಗ್ಗೋಡ್ಲಿನ ಶ್ರಿ ಸನಾತನ ಭಜನಾ ಮಂಡಳಿ, ಜೋಡುಪಾಲದ ಶ್ರೀ ದೇವಿ ಭಜನಾ ಮಂಡಳಿ, ೨ನೇ ಮೊಣ್ಣಂಗೇರಿಯ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಕತ್ತಲೆಕಾಡಿನ ಶ್ರೀ ವಿನಾಯಕ ಸೇವಾ ಟ್ರಸ್ಟ್ , ಮಡಿಕೇರಿಯ ಜ. ತಿಮ್ಮಯ್ಯ ಪಬ್ಲಿಕ್ ಸ್ಕೂಲ್, ಶ್ರೀ ಕೋದಂಡರಾಮ ಭಜನಾ ಮಂಡಳಿ ಇಸ್ಕಾನ್ ತಂಡ, ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ಮಡಿಕೇರಿಯ ಶ್ರೀ ಶೃತಿಲಯ ಭಜನಾ ಮಂಡಳಿ, ಶ್ರೀ ರಾಮಾಂಜನೇಯ ಭಜನಾ ಮಂಡಳಿಗಳಿAದ ಭಜನೆ ಹಾಗೂ ಕತ್ತಲೆಕಾಡಿನ ವಿನಾಯಕ ಸೇವಾ ಟ್ರಸ್ಟ್ ಉಡೊತ್ನ ಆದಿಶಕ್ತಿ ವಿನಾಯಕ ಭಜನಾ ಮಂಡಳಿ, ಮದೆನಾಡಿನ ಶ್ರೀ ಮದೆ ಮಾಧೂರಪ್ಪ ಕುಣಿತ ಭಜನಾ ತಂಡಗಳಿAದ ಕುಣಿತ ಭಜನೆ ನಡೆಯಿತು.