ಕೂಡಿಗೆ, ಡಿ. ೧೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿ ಆಟದ ಮೈದಾನಕ್ಕೆ ದಾನಿಗಳ ಸಹಕಾರದೊಂದಿಗೆ ಕಾಂಕ್ರೀಟ್ ಚೇರ್‌ಗಳ ಅಳವಡಿಕೆ ಕಾರ್ಯದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಸೇರಿದಂತೆ ಸ್ಥಳೀಯ ಯುವಕರು ತೊಡಗಿದ್ದಾರೆ. ಆಟದ ಮೈದಾನದಲ್ಲಿ ಅನೇಕ ಮಕ್ಕಳು, ವೃದ್ಧರು ವಾಯು ವಿಹಾರಕ್ಕಾಗಿ ಬರುತ್ತಿದ್ದಾರೆ. ಅವರುಗಳಿಗೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಕುಶಾಲನಗರ ಸುತ್ತಮುತ್ತಲಿನ ದಾನಿಗಳಾದ ರಾಜೇಶ್ ಇಂಟರ್ ಲಾಕ್ ಮತ್ತು ಬಾಲಕೃಷ್ಣ ನಾಯ್ಡು ಅವರು ೮ ಕಾಂಕ್ರೀಟ್ ಚೇರ್‌ಗಳನ್ನು ನೀಡುವ ಮೂಲಕ ಸಹಕಾರ ನೀಡಿದ್ದಾರೆ.