ಹೆಚ್.ಕೆ.ಜಗದೀಶ್
ಗೋಣಿಕೊಪ್ಪಲು, ಡಿ.೧೪ : ಡಿ.೧೬ರಿಂದ ೨೦ರವರೆಗೆ ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಪ್ರತಿಷ್ಠಿತ ‘ಕೈಗ್’, ಕೂರ್ಗ್ ಚಾಲೆಂಜರ್ ಸಹಯೋಗದಲ್ಲಿ ಪ್ರಥಮ ವರ್ಷದ ಹಾಕಿ ಪಂದ್ಯಾವಳಿಯು ನಡೆಯಲಿದೆ. ಈ ಪಂದ್ಯಾವಳಿಗೆ ಬಲಿಷ್ಟ ೧೬ ತಂಡಗಳು ತೀವ್ರ ಹಣಾಹಣಿ ನಡೆಸಲಿದ್ದು ಹಾಕಿ ಪ್ರಿಯರಿಗೆ ೫ ದಿನಗಳ ಹಾಕಿಯ ರಸದೌತಣ ಉಣ ಬಡಿಸÀಲಿದೆ. ಈ ಪಂದ್ಯಾವಳಿಗೆ ಅಂತಿಮ ಹಂತದ ಸಿದ್ಧತೆಗಳು ನಡೆದಿವೆ.
ಕೂರ್ಗ್ ಚಾಲೆಂಜರ್ ಸಹಯೋಗ ನೀಡುತ್ತಿದೆ.ಈ ಪಂದ್ಯಾವಳಿಗೆ ಹಾಕಿ ಕೂರ್ಗ್, ಹಾಕಿ ಕರ್ನಾಟಕ, ಹಾಕಿ ಇಂಡಿಯಾದ ತೀರ್ಪುಗಾರರು ಆಗಮಿಸುತ್ತಿದ್ದಾರೆ.
ಹಾಕಿ ಕೂರ್ಗ್ ಲೀಗ್ ಟೂರ್ನಿಯ ಅಂತಿಮ ೮ ತಂಡಗಳು ಹಾಗೂ ಉಳಿದ ೮ ತಂಡಗಳು ಆಹ್ವಾನಿತ ಮಾದರಿಯಲ್ಲಿ ಈ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ತಂಡವು ಉತ್ತಮ ಪ್ರದರ್ಶನ ನೀಡುವ ಸಲುವಾಗಿ ಪ್ರತಿ ತಂಡಕ್ಕೆ ೫ ಅತಿಥಿ ಆಟಗಾರರ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ ಭಾರತೀಯ, ಅಂತರರಾಷ್ಟಿçÃಯ ಮಟ್ಟದ ಆಟಗಾರರು ಕೂಡ ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ಹಾಕಿ ಪ್ರಿಯರಿಗೆ ಹೊಸತನ ನೀಡಲಿದೆ.
ಪ್ರೀಕ್ವಾರ್ಟರ್, ಕ್ವಾರ್ಟರ್, ಸೆಮಿಫೈನಲ್, ಫೈನಲ್ ಹಂತದಲ್ಲಿ ಪಂದ್ಯಾವಳಿ ನಡೆಯಲಿದ್ದು ೧೬ ತಂಡಗಳು ಪೈಪೋಟಿ ನಡೆಸಲಿದೆ. ಪ್ರತಿ ತಂಡಕ್ಕೆ ೨ ಬಾರಿ ರಿವ್ಯೂವ್ ಮೂಲಕ ಮೂರನೇ ಅಂಪೈರ್ ಮನವಿ ಸಲ್ಲಿಸಲು ಅವಕಾಶ ನೀಡಿರುವುದು ವಿಶೇಷಗಳಲ್ಲಿ ಒಂದಾಗಿದೆ. ಕೂರ್ಗ್ ಚಾಲೆಂಜರ್ಸ್, ಸ್ಥಾಪಕ ಅಧ್ಯಕ್ಷರಾದ ಪಟ್ರಂಗಡ ಶ್ರೀಮಂತ್ ಮುತ್ತಣ್ಣ ತಮ್ಮ ಅಭಿಪ್ರಾಯ ಹಂಚಿಕೊAಡರು.
ಗೋಲುಗಳ ಸಂಖ್ಯೆ ಪೆನಾಲ್ಟಿ ಕಾರ್ನರ್, ಕಾರ್ಡ್ ಪಡೆದ ದಾಖಲೆಗಳನ್ನು ರ‍್ಯಾಂಕ್ ಮಾನದಂಡವಾಗಿ ತೆಗೆದುಕೊಳ್ಳಲಾಗುತ್ತಿದೆ. ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಪ್ರಮುಖವಾಗಿ ಸರಣಿ ಶ್ರೇಷ್ಠ ಪ್ರದರ್ಶನ ನೀಡುವ ಸ್ಥಳೀಯ ಮತ್ತು ಅತಿಥಿ ಆಟಗಾರನಿಗೆ ತಲಾ ೧೨ ಲಕ್ಷ ರೂ. ಬೆಳೆಬಾಳುವ ನಿವೇಶನ ಉಡುಗೊರೆಯಾಗಿ ಸಿಗಲಿದೆ. ಅಲ್ಲದೆ ವಿಜೇತ ತಂಡಕ್ಕೆ ೨ ಲಕ್ಷ ನಗದು, ದ್ವಿತೀಯ ತಂಡಕ್ಕೆ ೧ ಲಕ್ಷ, ೩ನೇ ಸ್ಥಾನ ಪಡೆಯುವ ತಂಡಕ್ಕೆ ೫೦ ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ಲಭಿಸಲಿದೆ ಎಂದು ಕೈಗ್ ಗ್ರೂಪ್‌ನ ಮುಖ್ಯಸ್ಥ ಕುಟ್ಟಂಡ ಸುದಿನ್ ಮಂದಣ್ಣ ತಿಳಿಸಿದರು.
ಪಂದ್ಯಾವಳಿಯಲ್ಲಿ ಬೆಸ್ಟ್ ಬ್ಯಾಕ್, ಹಾಲ್ಟ್ ಫಾರ್ವರ್ಡ್ ಗೋಲ್ ಕೀಪರ್ ಸ್ಥಾನಕ್ಕೆ ತಲಾ ೧೦ ಸಾವಿರ ನಗದು ಬಹುಮಾನ ಘೋಷಣೆ ಮಾಡಿದ್ದಾರೆ. ಅತಿಥಿ ಮತ್ತು ಸ್ಥಳೀಯ ಎಂಬ ಎರಡು ವಿಭಾಗದಲ್ಲಿ ವೈಯಕ್ತಿಕ ಬಹುಮಾನ ಕೂಡ ಸಿಗಲಿದೆ.
೫ ದಿನಗಳ ಪಂದ್ಯಾವಳಿಯಲ್ಲಿ, ಕೂರ್ಗ್ ಚಾಲೆಂಜರ್ಸ್,ಕೋಣನಕಟ್ಟೆ ಇಲೆವೆನ್, ಮಡಿಕೇರಿ ಚಾರ್ಮರ್ಸ್, ಕುಂದ ಬೊಟ್ಟಿಯತ್‌ನಾಡ್, ಮಲ್ಮಕಕ್ಕಬ್ಬೆ, ಸೋಮವಾರಪೇಟೆ ಡಾಲ್ಫಿನ್, ಬಿಬಿಸಿ ಗೋಣಿಕೊಪ್ಪ, ಯುಎಸ್‌ಸಿ ಬೇರಳಿನಾಡ್, ಬಲಂಬೇರಿ ಮಹಾದೇವ ಸ್ಪೋರ್ಟ್ಸ್ ಕ್ಲಬ್, ಅಮ್ಮತ್ತಿ ರಾಯಲ್ಸ್, ಕ್‌ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್, ಅಮ್ಮತ್ತಿ ಸ್ಪೋರ್ಟ್ಸ್, ಕಲ್ಚರಲ್ ಅಸೋಸಿಯೇಷನ್, ನಾಪೋಕ್ಲು ಶಿವಾಜಿ, ಕೂಡಿಗೆ ಸ್ಪೋರ್ಟ್ಸ್ ಹಾಸ್ಟೇಲ್, ಕಡಿಯತ್ನಾಡ್ ವಾರಿಯರ್ಸ್ ಹಾಗೂ ಕೈಗ್ ಜೂಮರ್ಸ್ ಸೆಣಸಾಟ ನಡೆಸಲಿವೆ.