ಗೋಣಿಕೊಪ್ಪ ವರದಿ, ಡಿ. ೧೪ : ಕೂರ್ಗ್ ವೈಲ್ಡ್ಲೈಫ್ ಸೊಸೈಟಿ ವತಿಯಿಂದ ನಾಗರಹೊಳೆ ಉದ್ಯಾನವನದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಶಿಬಿರ ಜಾಗೃತಿ ನಡೆಸಲಾಯಿತು.
ಬೇಗೂರು ಗ್ರಾಮದ ಕೂರ್ಗ್ ಸಿಗ್ನೇಚರ್ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡರು. ಮರ ಗಿಡಗಳ ಪರಿಚಯ, ಪರಿಸರ ಮಹತ್ವ, ನದಿಗಳ ಹರಿವು ಮತ್ತು ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಯಿತು.
ಪಕ್ಷಿ ವೀಕ್ಷಣೆ, ಪಕ್ಷಿಗಳ ಪರಿಚಯ ಮತ್ತು ಅರಣ್ಯ ಸಂರಕ್ಷಣೆಯಲ್ಲಿ ಜೀವ ಸಂಕುಲಗಳ ಪಾತ್ರ ಮಹತ್ತರ ಎಂಬದನ್ನು ತಿಳಿಸಲಾಯಿತು. ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದ ನಿರ್ದೇಶಕಿ ಸೀಮಾ ಅವರ ಮಾರ್ಗ ದರ್ಶನದಲ್ಲಿ ಉಪ ಸಂರಕ್ಷಣಾಧಿಕಾರಿ ಅನನ್ಯಕುಮಾರ್ ಸಲಹೆ ನೀಡಿದರು.
ಕೂರ್ಗ್ ವೈಲ್ಡ್ಲೈಫ್ ಸೊಸೈಟಿ ಅಧ್ಯಕ್ಷ ಕುಂಞAಗಡ ಬೋಸ್ ಮಾದಪ್ಪ, ವೈಲ್ಡ್ಲೈಫ್ ಸಂಶೋಧಕಿ ರಾಗಿಣಿ ಮುದ್ದಯ್ಯ ಜಾಗೃತಿ ಮೂಡಿಸಿದರು. ಕೂರ್ಗ್ ವೈಲ್ಡ್ಲೈಫ್ ಸೊಸೈಟಿ ಕಾರ್ಯದರ್ಶಿ ಚೇಂದAಡ ಅಯ್ಯಪ್ಪ, ಪ್ರಮುಖರಾದ ಅದೀಪ್ ಬೋಪಯ್ಯ, ನವೀನ್ ಬೋಪಯ್ಯ, ವಿಶಾಂತ್ ಪೊನ್ನಪ್ಪ, ಶಿವು ಸುಬ್ಬಯ್ಯ, ಮುಖ್ಯ ಶಿಕ್ಷಕ ಕಲ್ಯಾಟಂಡ ನಂಜಪ್ಪ ಭಾಗವಹಿಸಿದ್ದರು.