ಮಡಿಕೇರಿ, ಡಿ. ೧೪: ಜಾಗೃತಿ ಟ್ರಸ್ಟ್ ಸಿಸ್ಕೋ ಕಂಪೆನಿ ವತಿಯಿಂದ ಹೊಸೂರು ಬೆಟ್ಟಕೇರಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಿಜ್ಞಾನದ ಮಾದರಿಗಳು ಅಬಾಕಸ್ ಬೋರ್ಡ್, ಚಿತ್ರಕಲೆ ಮತ್ತು ಕಲಿಕಾ ಕಿಟ್, ವಿದ್ಯಾರ್ಥಿಗಳಿಗೆ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಶುಚಿ ಕಿಟ್‌ಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಯೋಜಕ ಸಂಪತ್ ಬಾನಂಡ, ಮಚ್ಚಾರಂಡ ಅಯ್ಯಪ್ಪ, ಜಾಗೃತಿ ಟ್ರಸ್ಟ್ನ ಕೋಶಾಧಿಕಾರಿ ಕೊಂಡಿAಜಮ್ಮAಡ ಶರಣು, ಕಣ್ಣನ್, ನೋಯಲ್, ಜಾಗೃತಿ ಟ್ರಸ್ಟ್ನ ಸಂಸ್ಥಾಪಕರಾದ ರೇಣು ಅಪ್ಪಚ್ಚು, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು ಶಾಲಾ ಮಕ್ಕಳು ಉಪಸ್ಥಿತರಿದ್ದರು.