ಮಡಿಕೇರಿ ಡಿ. ೧೬: ನಗರದ ಕೊಡಗು ವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟ ವಿದ್ಯಾರ್ಥಿ, ಶಿಕ್ಷಕರ ಸಂಭ್ರಮದೊAದಿಗೆ ಜರುಗಿತು. ಕ್ರೀಡೋತ್ಸವದ ಒಲಂಪಿಕ್ ಟಾರ್ಚ್ನ್ನು ಕೊಡಗು ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಬೆಳಗಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜ್ ಮಾತನಾಡಿ, ಕ್ರೀಡೆಗಳು ಶಾರೀರಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ಥೈರ್ಯ, ಶಿಸ್ತು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ವಿದ್ಯಾರ್ಥಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಪರಿಶ್ರಮ ಹಾಗೂ ಆತ್ಮವಿಶ್ವಾಸದೊಂದಿಗೆ ಮುಂದುವರಿಯಬೇಕು ಎಂದು ಸಲಹೆ ನೀಡಿದರು. ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಮಾತನಾಡಿ ಸಾಮಾಜಿಕ ಮಾಧ್ಯಮಗಳ ಪರಿಣಾಮದಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ವಿದ್ಯಾರ್ಥಿ-ಗುರುಗಳ ನಡುವಿನ ಪರಸ್ಪರ ಗೌರವದಲ್ಲಿ ಉಂಟಾಗುತ್ತಿರುವ ಕುಸಿತದ ಬಗ್ಗೆ ಗಮನ ಸೆಳೆದರು. ಶೈಕ್ಷಣಿಕ ಸಾಧನೆಯಷ್ಟೇ ಜೀವನದಲ್ಲಿ ಯಶಸ್ಸಿಗೆ ಸಾಕಾಗುವುದಿಲ್ಲ ಎಂದು ಉದಾಹರಣೆಗಳ ಮೂಲಕ ವಿವರಿಸಿದ ದಿನೇಶ್ ಕಾರ್ಯಪ್ಪ, ಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿವೆ ಎಂದು ತಿಳಿಸಿದರು. ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರಾ ಮಾತನಾಡಿ, ಶಿಕ್ಷಕರ ನಿಷ್ಠಾವಂತ ಸೇವೆ, ಪೋಷಕರು, ಆಡಳಿತ ಮಂಡಳಿಯ ಸಹಕಾರದಿಂದಾಗಿ ಸಮಗ್ರ ಅಭಿವೃದ್ಧಿ ಸಾಧ್ಯವಾಗಿದೆ ಎಂದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಗುಣಮಟ್ಟದ ಶಿಕ್ಷಣ, ಶಿಸ್ತು, ಮೌಲ್ಯಾಧಾರಿತ ಬೋಧನೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದೆಂದು ಅವರು ಭರವಸೆ ನೀಡಿದರು.
೨೦೨೫ ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ವೆಂಕಟ್‌ರಾಜ್, ದಿನೇಶ್ ಕಾರ್ಯಪ್ಪ ನೇತ್ರಾ ಗಣಪತಿ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಜಿಲ್ಲಾಧಿಕಾರಿಗಳು ಕ್ರೀಡಾಕೂಟ, ಫುಡ್‌ಸ್ಟಾಲ್‌ಗಳ ಉದ್ಘಾಟನೆಯನ್ನು ನೆರವೇರಿಸಿದರು. ಪೋಷಕರಿಗಾಗಿ ವಿಶೇಷ ಫನ್ ಸ್ಪೋರ್ಟ್ಸ್ಗಳನ್ನೂ ಏರ್ಪಡಿಸಲಾಗಿತ್ತು.
ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಓವರ್‌ಆಲ್ ಚಾಂಪಿಯನ್ ಪ್ರಶಸ್ತಿಯನ್ನು ಬಾಪು ಗ್ರೂಪ್ ಪಡೆದುಕೊಂಡಿತು. ಶಿಕ್ಷಕಿಯರಾದ ಅಂಜನ್ ಪಿ.ಎನ್. ಸೋನಾಮುತ್ತಮ್ಮ ವಿದ್ಯಾರ್ಥಿಗಳಾದ ಯಶೀಕ ಶೆಟ್ಟಿ ಪ್ರಣವ್ ಪಿ. ನಿರೂಪಿಸಿದರು. ಅತಿಥಿಗಳ ಪರಿಚಯ ವನ್ನು ವಿದ್ಯಾರ್ಥಿ ತ್ರಿನಾದ್, ಶಿಕ್ಷಕಿ ಸೋನಾ ಮುತ್ತಮ್ಮ ನೆರವೇರಿಸಿದರು. ವಿದ್ಯಾರ್ಥಿಗಳಾದ ಜನ್ಯ ಸಿ.ಟಿ. ಸ್ವಾಗತಿಸಿ, ಕೌಶಲ್ ಸಿ.ಪಿ. ವಂದಿಸಿದರು.
ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷೆ , ಅಕಾಡೆಮಿಕ್ ಅಧ್ಯಕ್ಷೆ ಊರ್ವಶಿ ಮುದ್ದಯ್ಯ, ಕ್ರೀಡಾ ಚೇರ್ ಪರ್ಸನ್ ರಘು ಮಾದಪ್ಪ, ಸಲಹಾ ಮಂಡಳಿ ಸದಸ್ಯ ಕುಮಾರ್ ಸುಬ್ಬಯ್ಯ, ಕಾರ್ಯದರ್ಶಿ ಬಿ.ಎಸ್. ಪೂಣಚ್ಚ, ಸಮಿತಿ ಸದಸ್ಯರಾದ ಗುರುದತ್ತ್ ನಿಯತ ದೇವಯ್ಯ ಸೋಮಣ್ಣ, ಆಡಳಿತ ನಿರ್ವಹಣಾಧಿಕಾರಿ ರವಿ ಪಿ. ಮೇಜರ್ ದಾಮೋದರ್, ಆಪರ್ಚುನಿಟಿ ಶಾಲೆಯ ಸಲಹೆಗಾರ್ತಿ ಮೀನಾ ಕಾರ್ಯಪ್ಪ, ಕಾರ್ಯದರ್ಶಿ ವೀಣಾ ಚಂಗಪ್ಪ, ಸಲಹಾ ಮಂಡಳಿಯ ಸದಸ್ಯೆ ಪುಷ್ಪಾ ಕುಟ್ಟಣ್ಣ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಪಥಸಂಚಲನ ಬ್ಯಾಂಡ್ ಪ್ರದರ್ಶನ, ಸ್ವಾಗತ ನೃತ್ಯ ನಡೆಯಿತು. ಕೊಡಗು ವಿದ್ಯಾಲಯದ ಆಪರ್ಚುನಿಟಿ ಶಾಲೆಯ ಮಕ್ಕಳ ನೃತ್ಯ ಗಮನಸೆಳೆಯಿತು.