ಕೂಡಿಗೆ, ಡಿ. ೧೬: ತೊರೆನೂರು ಗ್ರಾ. ಪಂ. ವತಿಯಿಂದ ರೋಜಗಾರ್ ದಿನ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆಯನ್ನು ಗ್ರಾ. ಪಂ. ಅಧ್ಯಕ್ಷೆ ಶೋಭಾ ಪ್ರಕಾಶ್ ನೀಡಿದರು. ನಂತರ ಮಾತನಾಡಿ ಮಾತನಾಡಿದ ಅವರು, ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ಸದುಪಯೋಗ, ಗ್ರಾಮಗಳಲ್ಲಿ ಕೈಗೊಳ್ಳಬಹುದಾದ ಕಾಮಗಾರಿಯ ಬಗ್ಗೆ ತಿಳಿಸಿದರು. ಅಭಿವೃದ್ಧಿ ಅಧಿಕಾರಿ ಶ್ಯಾಂ ಯೋಜನೆಗೆ ಗ್ರಾಮಸ್ಥರ ಸಹಕಾರ, ಮತ್ತು ಕಾಮಗಾರಿಯಲ್ಲಿ ಗ್ರಾಮಸ್ಥರ ಭಾಗಿತ್ವದ ಬಗ್ಗೆ, ಎಲ್ಲಾ ವಾರ್ಡ್ಗಳಲ್ಲಿ ಕ್ರಿಯಾ ಯೋಜನೆ ಅನುಗುಣವಾಗಿ ಕೈಗೊಳ್ಳಲು ಇರುವ ಕಾಮಗಾರಿಯ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ರೂಪ ಮಹೇಶ್, ಸದಸ್ಯರಾದ ದೇವರಾಜ್, ಬೇಬಿ ಯಣ್ಣ, ಶಿವಕುಮಾರ್, ಮಹದೇವ, ಪ್ರಕಾಶ್, ಯಶೋಧ, ಸಾವಿತ್ರಿ, ನಿಂಗಾಜಮ್ಮ, ಕಾರ್ಯದರ್ಶಿ ಸುರೇಶ, ಅರುಣಕುಮಾರ್ ಇದ್ದರು.