ಸುಂಟಿಕೊಪ್ಪ, ಡಿ. ೧೬: ಇಲ್ಲಿಗೆ ಸಮೀಪದ ಕೊಡಗರಹಳ್ಳಿ ಗ್ರಾಮದ ಉಪ್ಪುತೋಡುವಿನಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿಯ ೨೮ನೇ ವರ್ಷದ ವಿಶೇಷ ಮಂಡಲ ಪೂಜೆ ತಾ. ೨೭ ರಂದು ನಡೆಯಲಿದೆ.

ಅಂದು ಬೆಳಿಗ್ಗೆ ೧೦ ಗಂಟೆಗೆ ಗಣಪತಿ ಹೋಮ ಹಾಗೂ ಅಯ್ಯಪ್ಪ ಸ್ವಾಮಿಗೆ ವಿಶೇಷ ಅಭಿಷೇಕಗಳು ನಡೆಯಲಿವೆ. ಸಂಜೆ ೭ ಗಂಟೆಗೆ ಚಂಡೆ ಮೇಳದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವರ ದೀಪಾಲಂಕಾರ ಮೆರವಣಿಗೆ, ರಾತ್ರಿ ೮ ಗಂಟೆಗೆ ಶ್ರೀ ಅಯ್ಯಪ್ಪ ದೇವರಿಗೆ ಅಭಿಷೇಕಗಳು ನಡೆಯಲಿವೆ. ರಾತ್ರಿ ೯ ಗಂಟೆಗೆ ಅನ್ನಸಂತರ್ಪಣೆ, ರಾತ್ರಿ ೧೦ ಗಂಟೆಗೆ ಅಗ್ನಿಕುಂಡ ಪೂಜೆ ಪ್ರಾರಂಭ ಮತ್ತು ಭಜನಾ ಕಾರ್ಯಕ್ರಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ತಾ. ೨೮ ರಂದು ಬೆಳಿಗ್ಗೆ ೫ ಗಂಟೆಗೆ ಅಯ್ಯಪ್ಪ ಭಕ್ತರಿಂದ ಅಗ್ನಿ ಪ್ರವೇಶ ನಡೆಯಲಿವೆ ಎಂದು ದೇವಾಲಯದ ಅರ್ಚಕ ಶೇಶೋಜಿ ರಾವ್ ತಿಳಿಸಿದ್ದಾರೆ.