ಮಡಿಕೇರಿ, ಡಿ. ೧೬: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೈಬುಲಿರ ಪಾರ್ವತಿ ಬೋಪಯ್ಯ ಅವರು ಸ್ಥಾಪಿಸಿರುವ ದಿ. ಕೈಬುಲಿರ ಬೋಪಯ್ಯ ಜ್ಞಾಪಕಾರ್ಥ ದತ್ತಿನಿಧಿ ಕಾರ್ಯಕ್ರಮದಂತೆ ಕೊಡಗು ಜಿಲ್ಲೆಯ ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.

ಒಂದು ಕಾಲೇಜಿನಿಂದ ಓರ್ವ ವಿದ್ಯಾರ್ಥಿ ಈ ಕೆಳಗೆ ಸೂಚಿಸಿರುವ ೫ ವಿಚಾರಗಳಲ್ಲಿ ಒಂದು ವಿಷಯಕ್ಕೆ ಸಂಬAಧಪಟ್ಟAತೆ ಒಂದುವರೆ ಪುಟ ಮೀರದಂತೆ ಪ್ರಬಂಧವನ್ನು ಸ್ವಹಸ್ತದಿಂದ ಬರೆದು ಈ ಕೆಳಗಿನ ವಿಳಾಸಕ್ಕೆ ದಿನಾಂಕ ೨೫.೧೨.೨೦೨೫ ರ ಒಳಗಾಗಿ ತಲುಪುವಂತೆ ಅಥವಾ ಅಂಚೆ/ವಾಟ್ಸಾö್ಯಪ್ ಅಥವಾ ಇ-ಮೇಲ್ ಮೂಲಕ ಕಳುಹಿಸಬಹುದಾಗಿದೆ.

೧. ಕನ್ನಡ ಸಾಹಿತ್ಯದಲ್ಲಿ ಮಾನವ ಭ್ರಾತತ್ವದ ಕಲ್ಪನೆ, ೨. ಸಾಹಿತ್ಯ ಕಲೆ ಹಾಗೂ ಧರ್ಮ, ೩. ಶಿಕ್ಷಣ ಮಾಧ್ಯಮವಾಗಿ ಕನ್ನಡ, ೪. ಕನ್ನಡದ ಬೆಳವಣಿಗೆಯಲ್ಲಿ ನಮ್ಮ ಪಾತ್ರ, ೫. ಕೊಡಗಿನಲ್ಲಿ ಕನ್ನಡ ಪರ ಚಳವಳಿ

ಪ್ರಬಂಧ ಕಳುಹಿಸಬೇಕಾದ ವಿಳಾಸ: ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಂಬೇಡ್ಕರ್ ಭವನದ ಬಳಿ, ಸುದರ್ಶನ್ ವೃತ್ತ, ಮಡಿಕೇರಿ - ೫೭೧೨೦೧. ಮೊಬೈಲ್ ಸಂಖ್ಯೆ : ೯೧೧೩೮೯೨೩೯೬. ಇ-ಮೇಲ್ ಞeshಚಿvಚಿಞಚಿmಚಿಣh@gmಚಿiಟ.ಛಿom

ವಿಜೇತ ಪ್ರಬಂಧಕ್ಕೆ ಪ್ರಥಮ, ದ್ವಿತೀಯ, ತೃತೀಯ ಮೂರು ಬಹುಮಾನಗಳನ್ನು ನೀಡಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.